IPL ಕಪ್ ಗೆಲ್ಲುವ ಹಠದಲ್ಲಿ ಆರ್ಸಿಬಿ: ಒಂದುವರೆ ತಿಂಗಳ ಮೊದಲೇ ಪ್ಲೇಯಿಂಗ್-11 ರೆಡಿ..!

Published : Feb 22, 2017, 05:16 AM ISTUpdated : Apr 11, 2018, 01:01 PM IST
IPL ಕಪ್ ಗೆಲ್ಲುವ ಹಠದಲ್ಲಿ ಆರ್ಸಿಬಿ: ಒಂದುವರೆ ತಿಂಗಳ ಮೊದಲೇ ಪ್ಲೇಯಿಂಗ್-11 ರೆಡಿ..!

ಸಾರಾಂಶ

ಐಪಿಎಲ್​ ಬಿಡ್ ಮುಗಿದಿದೆ. ಇನ್ನೇನಿದ್ದರೂ ಏಪ್ರಿಲ್​-ಮೇನಲ್ಲಿ ಫ್ರಾಂಚೈಸಿಗಳ ಲೀಗ್​​ ಆರಂಭವನ್ನು ಕಾಯುವ ಕೆಲಸ. ಒಂದುವರೆ ತಿಂಗಳ ಮೊದಲೇ ಆರ್​ಸಿಬಿ ತಂಡದ ಪ್ಲೇಯಿಂಗ್​-11 ತಯಾರಿದೆ. ಆಶ್ಚರ್ಯವಾದರೂ ಇದು ನಿಜ.

ಬೆಂಗಳೂರು(ಫೆ.22): ಐಪಿಎಲ್​ ಬಿಡ್ ಮುಗಿದಿದೆ. ಇನ್ನೇನಿದ್ದರೂ ಏಪ್ರಿಲ್​-ಮೇನಲ್ಲಿ ಫ್ರಾಂಚೈಸಿಗಳ ಲೀಗ್​​ ಆರಂಭವನ್ನು ಕಾಯುವ ಕೆಲಸ. ಒಂದುವರೆ ತಿಂಗಳ ಮೊದಲೇ ಆರ್​ಸಿಬಿ ತಂಡದ ಪ್ಲೇಯಿಂಗ್​-11 ತಯಾರಿದೆ. ಆಶ್ಚರ್ಯವಾದರೂ ಇದು ನಿಜ.

ಬೆಂಗಳೂರು ತಂಡದಲ್ಲಿ ಸ್ಟಾರ್ ಆಟಗಾರರ ದಂಡು

ಐಪಿಎಲ್​ ಬಿಡ್ ಮುಗಿದ ಬೆನ್ನಲ್ಲೇ ಯಾವ್ಯಾವ ತಂಡಗಳು ಸ್ಟ್ರಾಂಗ್ ಆಗಿವೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಮುಂಚೆಯಿಂದಲೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್​ ಪ್ಲೇಯರ್ಸ್ ದಂಡೇ ಇದೆ. ಆದರೆ ಈ ಬಾರಿ ಬಲಿಷ್ಠವಾಗಿ ಕಾಣುತ್ತಿರುವುದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ.

ಈ ಸಲದ ಬಿಡ್​ ಆಗುತ್ತಿದಂತೆ ಆರ್​ಸಿಬಿ ತಂಡವನ್ನೊಮ್ಮೆ ನೋಡಿದರೆ, ಬಲಿಷ್ಠವಾಗಿ ಕಾಣುತ್ತಿದೆ. ಕಳೆದ 9 ಸೀಸನ್​​'ಗಿಂತಲೂ ಈ ಬಾರಿ ಆರ್​​ಸಿಬಿ ತಂಡದಲ್ಲಿ ಸ್ಟಾರ್​ ಆಟಗಾರರ ದಂಡೇ ಇದೆ. ಈ ಸಲ ಐಪಿಎಲ್​ ಟ್ರೋಫಿ ಗೆಲ್ಲುವ ಹಠಕ್ಕೆ ಬಿದ್ದಿರುವ ಆರ್​ಸಿಬಿ, ಉತ್ತಮ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಸಲ ಆರ್​ಸಿಬಿ ವೀಕ್ನೆಸ್​ ಬೌಲಿಂಗ್​. ಅದಕ್ಕಾಗಿ ಈ ಸಲದ ಬಿಡ್'​ನಲ್ಲಿ ಮೂವರು ಬೌಲರ್ಸ್ ಹಾಗೂ ಇಬ್ಬರು ಆಲ್​ರೌಂಡರ್ಸ್​ ಖರೀದಿಸಿದೆ. ಈಗ ಆರ್​​ಸಿಬಿ ಇನ್ನಷ್ಟು ಸ್ಟ್ರಾಂಗ್​ ಆಗಿದೆ.

ನಾಲ್ವರು ವಿದೇಶಿ ಆಟಗಾರರು ಫಿಕ್ಸ್..!: ಕಣಕ್ಕೆ ಗೇಲ್​, ಎಬಿಡಿ, ವ್ಯಾಟ್ಸನ್, ಮಿಲ್ಸ್..!

ಐಪಿಎಲ್​ನಲ್ಲಿ ನಾಲ್ವರು ವಿದೇಶಿ ಆಟಗಾರರನ್ನ ಕಣಕ್ಕಿಳಿಸಬಹುದು. ಅದರಂತೆ ಆರ್​ಸಿಬಿ ಈಗಾಗಲೇ ಕಣಕ್ಕಿಳಿಯೋ ನಾಲ್ವರು ಫಾರಿನ್ ಪ್ಲೇಯರ್ ಕನ್ಫರ್ಮ್​ ಮಾಡಿಕೊಂಡಿದೆ. ಸ್ಫೋಟಕ ಓಪನರ್ ಕ್ರಿಸ್​ಗೇಲ್ ಮತ್ತು ಎಬಿ ಡಿವಿಲಿಯರ್ಸ್​ ಬ್ಯಾಟ್ಸ್​ಮನ್​ಗಳಾಗಿ ಕಣಕ್ಕಿಳಿಯಲಿದ್ದಾರೆ. ಆಲ್​ರೌಂಡರ್ ಶೇನ್​ ವ್ಯಾಟ್ಸನ್ ಜೊತೆ ಇಂಗ್ಲೆಂಡ್ ಫಾಸ್ಟ್​ ಬೌಲರ್​ ಟೈಮಲ್ ಮಿಲ್ಸ್​ ಮೈದಾನಕ್ಕಿಳಿಯುತ್ತಾರೆ. ವಿದೇಶಿ ಆಟಗಾರರಲ್ಲಿ ಯಾರಾದರೂ ಗಾಯಾಳುವಾದರೆ, ಬ್ಯಾಕ್ ಅಪ್'​ಗೆ ಐವರು ಪ್ಲೇಯರ್ಸ್ ಇದ್ದಾರೆ.

ಗೇಲ್​-ಕೊಹ್ಲಿ ಓಪನರ್

9ನೇ ಸೀಸನ್​'ನಲ್ಲಿ ಕ್ರಿಸ್ ಗೇಲ್ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಅದ್ಭುತ ಓಪನಿಂಗ್ ಕೊಡುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲಿ ಕೊಹ್ಲಿ ರನ್​ ಧೀರನಾಗಿದ್ದರು. ಕಳೆದ ಸಲ 4 ಶತಕ ಸಹಿತ ಗರಿಷ್ಠ ರನ್ ಸರದಾರನಾಗಿದ್ದರು. ಇನ್ನು ಕಳೆದ ಸಲ ಹೇಳಿಕೊಳ್ಳುವ ಆಟವಾಡದ ಗೇಲ್​, ಈಗ ಫಾರ್ಮ್'​ಗೆ ಮರಳಿದ್ದು ಸಿಡಿಸಲು ರೆಡಿಯಾಗಿದ್ದಾರೆ. ಹೀಗಾಗಿ ಐಪಿಎಲ್​'ನ ಇದು ಅದ್ಭುತ ಆರಂಭಿಕ ಜೋಡಿಯಾಗಲಿದೆ.

ಮಧ್ಯಮ ಕ್ರಮಾಂಕದಲ್ಲಿ ವಿಧ್ವಂಸಕ ಬ್ಯಾಟ್ಸ್​'ಮನ್​'ಗಳು: ಮಿಡ್ಲ್​ ಆರ್ಡರ್'​ಗೆ ಐವರು ಕನ್ಫರ್ಮ್​

ಆರ್​ಸಿಬಿ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಎಬಿ ಡಿವಿಲಿಯರ್ಸ್, ಕೆಎಲ್ ರಾಹುಲ್, ಶೇನ್ ವ್ಯಾಟ್ಸನ್, ಕೇದರ್ ಜಾಧವ್ ತಂಡಕ್ಕೆ ಆಧಾರವಾಗಲಿದ್ದಾರೆ. ಎಲ್ಲರೂ ಸ್ಫೋಟಕ ಬ್ಯಾಟ್ಸ್​ಮಗಳು. ಅದ್ಭುತ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಇಲ್ಲಿ ರನ್ ಹೊಳೆಯೇ ಹರಿಯಲಿದೆ.

ನಾಲ್ವರು ಫಾಸ್ಟ್​, ಇಬ್ಬರು ಸ್ಪಿನ್ ಬೌಲರ್ಸ್

ಆರ್​ಸಿಬಿ ತಂಡದಲ್ಲಿ ಆಲ್​ರೌಂಡರ್ಸ್​​​ ತುಂಬಾ ಮಂದಿ ಇದ್ದಾರೆ. ಹೀಗಾಗಿ ವೈವಿದ್ಯಮಯ ಬೌಲಿಂಗ್ ಇದೆ. ಟೈಮಲ್ ಮಿಲ್ಸ್​, ಎಸ್​. ಅರವಿಂದ್​ , ಅಂಕಿತ್ ಚೌಧರಿ ವೇಗದ ಬೌಲಿಂಗ್ ಪಡೆಯಲಿದ್ದಾರೆ. ಆಲ್​ರೌಂಡರ್​ ವ್ಯಾಟ್ಸನ್ ಸಹ ಫಾಸ್ಟ್ ಬೌಲರ್. ಇನ್ನು ಪವನ್ ​ನೇಗಿ ಮತ್ತು ಯುಜ್'​ವೇಂದ್ರ ಚಹಾಲ್ ಸ್ಪಿನ್​ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಸ್ಟುವರ್ಟ್​ ಬಿನ್ನಿ ಹಾಗೂ ಸಚಿನ್ ಬೇಬಿ ಸಹ 11ರ ಬಳಗದಲ್ಲಿ ಸ್ಥಾನ ಪಡೆಯಲು ಫೈಟ್ ಕೊಡುವುದರಿಂದ ಪವನ್ ನೇಗಿ ಸ್ಥಾನ ಸ್ವಲ್ಪ ಅಲುಗಾಡಲಿದೆ.

ಆರ್​ಸಿಬಿಗೆ ಈ ಸಲವಾದ್ರೂ ಸಿಗುತ್ತಾ ಟ್ರೋಫಿ..?

ಹೌದು, ಕಳೆದ 9 ಸೀಸನ್​ನಲ್ಲಿ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಸಿಕ್ಕಿಲ್ಲ. ಫೈನಲ್ ಪ್ರವೇಶಿಸಿದರೂ ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿದೆ. ಈ ಸಲ ಸ್ಟಾರ್ ಆಟಗಾರರು ಆರ್'​ಸಿಬಿ ಟೀಮ್​​'ನಲ್ಲಿದ್ದಾರೆ. ವೀಕ್​ ಆಗಿದ್ದಾರೆ ಬೌಲಿಂಗ್​ ವಿಭಾಗ ಬಲಿಷ್ಠವಾಗಿದೆ. ಇದರಿಂದ ಈ ಬಾರಿಯಾದರೂ ಬೆಂಗಳೂರಿಗೆ ಐಪಿಎಲ್ ಕಪ್ ಒಲಿಯಲಿ ಎನ್ನುವುದು ಕರ್ನಾಟಕ ಕ್ರಿಕೆಟ್ ಅಭಿಮಾನಿಗಳ ಆಶಯ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್