ಬೃಹತ್ ಮೊತ್ತ ದಾಖಲಿಸಿದ ಭಾರತ: ಶ್ರೀಲಂಕಾಕ್ಕೆ ಆರಂಭಿಕ ಆಘಾತ

Published : Aug 04, 2017, 06:00 PM ISTUpdated : Apr 11, 2018, 12:57 PM IST
ಬೃಹತ್ ಮೊತ್ತ ದಾಖಲಿಸಿದ ಭಾರತ: ಶ್ರೀಲಂಕಾಕ್ಕೆ ಆರಂಭಿಕ ಆಘಾತ

ಸಾರಾಂಶ

ಅಶ್ವಿನ್(54: 92 ಎಸೆತ, 5 ಬೌಂಡರಿ, ಒಂದು ಸಿಕ್ಸ್'ರ್), ವಿಕೇಟ್ ಕೀಪರ್ ಷಾ (67:134 ಎಸೆತ, 4 ಬೌಂಡರಿ, ಒಂದು ಸಿಕ್ಸ್'ರ್ ) ಹಾಗೂ ರವೀಂದ್ರ ಜಡೇಜಾ (70:85 ಎಸೆತ, 4 ಬೌಂಡರಿ 3 ಸಿಕ್ಸ್'ರ್) ಸ್ಫೋಟಕ ಆಟವಾಡಿದರು.

ಕೊಲಂಬೊ(ಆ.04): ಕೆಳ ಕ್ರಮಾಂಕದ ಆಟಗಾರರಾದ  ರವೀಂದ್ರ ಜಡೇಜಾ, ವೃದ್ಧಿಮಾನ್ ಷಾ ಹಾಗೂ ಆರ್. ಅಶ್ವಿನ್ ಅವರ ಅರ್ಧ ಶತಕಗಳ ನೆರವಿನಿಂದ ಭಾರತ ತಂಡದವರು ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್'ನ 2ನೇ  ದಿನವಾದ ಇಂದು 622/9(ಡಿಕ್ಲೇರ್ಡ್) ಬೃಹತ್ ಮೊತ್ತ ಕಲೆ ಹಾಕಿದ್ದಾರೆ.

ಮೊದಲ ದಿನದಾಂತ್ಯಕ್ಕೆ 3 ವಿಕೇಟ್ ನಷ್ಟಕ್ಕೆ 344 ರನ್ ಗಳಿಸಿದ್ದ  ಭಾರತ ತಂಡದವರು ಶತಕಗಳಿಸಿ ಉತ್ತಮ ಆರಂಭ ಒದಗಿಸಿದ್ದ ಪೂಜಾರಾ(133) ಹಾಗೂ ರಹಾನೆ(132) ಬೇಗನೆ ಔಟಾದರು. ನಂತರ ಆಗಮಿಸಿದ ಕೆಳಕ್ರಮಾಂಕದ ಆಟಗಾರರಾದ  ಅಶ್ವಿನ್, ಷಾ ಹಾಗೂ ರವೀಂದ್ರ ಜಡೇಜಾ ತಮ್ಮ ಅರ್ಧ ಶತಕಗಳ ಆರ್ಭಟದಿಂದ ಟೀಂ ಇಂಡಿಯಾ ಮೊತ್ತವನ್ನು 600ರ ಗಡಿ ದಾಟಲು ಯಶಸ್ವಿಯಾದರು.

ಅಶ್ವಿನ್(54: 92 ಎಸೆತ, 5 ಬೌಂಡರಿ, ಒಂದು ಸಿಕ್ಸ್'ರ್), ವಿಕೇಟ್ ಕೀಪರ್ ಷಾ (67:134 ಎಸೆತ, 4 ಬೌಂಡರಿ, ಒಂದು ಸಿಕ್ಸ್'ರ್ ) ಹಾಗೂ ರವೀಂದ್ರ ಜಡೇಜಾ (70:85 ಎಸೆತ, 4 ಬೌಂಡರಿ 3 ಸಿಕ್ಸ್'ರ್) ಸ್ಫೋಟಕ ಆಟವಾಡಿದರು. ಬೌಲರ್'ಗಳಾದ ಪಾಂಡ್ಯ(20), ಶಮಿ(19) ಮತ್ತು ಉಮೇಶ್ ಯಾದವ್ ಕೂಡ ಕೊನೆಯಲ್ಲಿ ಉತ್ತಮ ಆಟವಾಡಿದರು. ಶ್ರೀಲಂಕಾ ಬೌಲರ್'ಗಳು ಭಾರತ ತಂಡವನ್ನು ಬೇಗನೆ ನಿಯಂತ್ರಿಸದಿದ್ದರೂ ಹೆರಾತ್(154/4) ಹಾಗೂ ಪುಷ್ಪಾಕುಮಾರ (156/2) ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಆರಂಭಿಕ ಆಘಾತ ನೀಡಿದ ಅಶ್ವಿನ್

622 ರನ್'ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ  ಆರಂಭಿಕ ಆಘಾತ ಅನುಭವಿಸಿದೆ. ಇನ್ನಿಂಗ್ಸ್ ಆರಂಭಿಸಲು ಬಂದ ತರಂಗ ಅಶ್ವಿನ್ ಬೌಲಿಂಗ್'ನಲ್ಲಿ ಶೂನ್ಯಕ್ಕೆ ಔಟಾದರು. ಮತ್ತೊಬ್ಬ ಆರಂಭಿಕ ಆಟಗಾರ ಕರುಣಾರತ್ನೆ 25 ರನ್ ಗಳಿಸಿ ಅಶ್ವಿನ್ ಬೌಲಿಂಗ್'ನಲ್ಲಿಯೇ  ರಹಾನೆಗೆ ಕ್ಯಾಚಿತ್ತು ಪೆವಿಲಿಯನ್'ಗೆ ತೆರಳಿದರು

ಸ್ಕೋರ್

ಭಾರತ: 622/9 ಡಿಕ್ಲೇರ್ಡ್(158 ಓವರ್)

(ಪೂಜಾರಾ 133, ರಹಾನೆ 132, ಜಡೇಜಾ 70, ಷಾ 67, ಅಶ್ವಿನ್ 54 )

ಶ್ರೀಲಂಕಾ 50/2 (20 ಓವರ್)

ಅಶ್ವಿನ್: 38/2 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?