
ವಿಶ್ವದ ಶ್ರೀಮಂತ ಕ್ರಿಕೆಟ್ ಕೋಚ್ ಆಗಿ ಭಾರತ ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಹೊರಹೊಮ್ಮಿದ್ದಾರೆ. ಅವರ ವಾರ್ಷಿಕ ವೇತನ ಬರೋಬ್ಬರಿ ₹7.61 ಕೋಟಿಯಷ್ಟಿದೆ ಎಂದು ವರದಿಯಾಗಿದೆ.
ಶಾಸ್ತ್ರಿ, ಪಡೆಯುವ ಸಂಭಾವನೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಕೋಚ್'ಗಳಿಗಿಂತಲೂ ದುಪ್ಪಟ್ಟಿದೆ. ಆಸ್ಟ್ರೇಲಿಯಾ ತಂಡದ ಪ್ರಧಾನ ಕೋಚ್ ಡರೆನ್ ಲೀಮನ್ ₹3.47 ಕೋಟಿಗಳಷ್ಟಿದ್ದರೆ, ಇಂಗ್ಲೆಂಡ್ ತಂಡದ ಪ್ರಧಾನ ಕೋಚ್ ಟ್ರೆವರ್ ಬೇಲಿಸ್ ಅವರ ವಾರ್ಷಿಕ ಸಂಭಾವನೆ ₹3.38 ಕೋಟಿಗಳಷ್ಟಿದೆ ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕೋಚ್ ಚಂದಿಕಾ ಹತುರಸಿಂಘಗೆ ತನ್ನ ಅಗ್ರ ಆಟಗಾರನ ಮೂಲ ವೇತನಕ್ಕಿಂತ ಐದು ಪಟ್ಟು ಹೆಚ್ಚು ವೇತನ ನೀಡಲಿದೆ ಎನ್ನಲಾಗಿದೆ. ಅದೇ ರೀತಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಗ್ರ ಆಟಗಾರನಿಗೆ ನೀಡುವುದಕ್ಕಿಂತ ಮೂರು ಪಟ್ಟು ಹೆಚ್ಚು ವೇತನವನನು ತನ್ನ ಕೋಚ್ ಮಿಕ್ಕಿ ಆರ್ಥರ್'ಗೆ ನೀಡುತ್ತದೆ ಎಂದು ಮೂಲಗಳು ಹೇಳಿವೆ.
ಫುಟ್ಬಾಲ್‌ಗೆ ಹೋಲಿಸಿದರೆ ತೀರಾ ಕಡಿಮೆ!:
ಕ್ರಿಕೆಟ್ ಜಾಗತಿಕ ಕ್ರೀಡೆಯಾಗಿ ಇನ್ನೂ ಬೆಳೆದಿಲ್ಲ. ಹೀಗಾಗಿ ಫುಟ್ಬಾಲ್, ಎಫ್ 1ಗೆ ಹೋಲಿಸಿದರೆ ಕ್ರಿಕೆಟಿಗರು, ಕೋಚ್‌ಗಳ ವೇತನ ತೀರಾ ಕಡಿಮೆ ಎನಿಸುತ್ತದೆ. ಉದಾಹರಣೆಗೆ ಕ್ರಿಸ್ಟಿಯಾನೊ ರೊನಾಲ್ಡೊ, ಸ್ಟೀವ್ ಸ್ಮಿತ್ ಗಿಂತ 40 ಪಟ್ಟು ಹೆಚ್ಚು ಮೊತ್ತವನ್ನು ವಾರ್ಷಿಕ ವೇತನವಾಗಿ ಪಡೆಯಲಿದ್ದಾರೆ. ಎಫ್ 1 ತಾರೆ ಲೂಯಿಸ್ ಹ್ಯಾಮಿಲ್ಟನ್ 25 ಪಟ್ಟು ಹೆಚ್ಚಿಗೆ ವೇತನ ಪಡೆದರೆ, ಬ್ಯಾಸ್ಕೆಟ್‌ಬಾಲ್ ದಿಗ್ಗಜ ಲೆಬ್ರಾನ್ ಜೇಮ್ಸ್ 20 ಪಟ್ಟು ಹೆಚ್ಚು ಪಡೆಯಲಿದ್ದಾರೆ. ಜಾಹೀರಾತು ಒಪ್ಪಂದ, ಪ್ರಾಯೋಜಕತ್ವದಿಂದ ಬರುವ ಮೊತ್ತವನ್ನು ಬಿಟ್ಟು ಕೇವಲ ವಾರ್ಷಿಕ ವೇತನ ರೂಪದಲ್ಲಿ ರೊನಾಲ್ಡೊ ಬರೋಬ್ಬರಿ ₹377.3 ಕೋಟಿ ಗಳಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.