
ಮುಂಬೈ(ಆ.14): ಟೀಂ ಇಂಡಿಯಾ ಮಹಿಳಾ ತಂಡಕ್ಕ ನೂನತ ಕೋಚ್ ಆಗಿ ಮಾಜಿ ಕ್ರಿಕೆಟಿಗ ರಮೇಶ್ ಪೊವಾರ್ ಆಯ್ಕೆಯಾಗಿದ್ದಾರೆ. ಮುಂಬರುವ ಟಿ20 ಮಹಿಳಾ ವಿಶ್ವಕಪ್ ವರೆಗೆ ರಮೇಶ್ ಪೊವಾರ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ತುಷಾರ್ ಅರೋಥ್ ದಿಢೀರ್ ರಾಜಿನಾಮೆ ಬಳಿಕ ಹಂಗಾಮಿ ಕೋಚ್ ಆಗಿ ಆಯ್ಕೆಯಾಗಿದ್ದ ರಮೇಶ್ ಪೊವಾರ್ ಇದೀಗ ಪೂರ್ಣ ಅವಧಿಗೆ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕೋಚ್ ರೇಸ್‌ನಲ್ಲಿದ್ದ ಇತರ ಐವರು ದಿಗ್ಗಜರನ್ನ ಹಿಂದಿಕ್ಕಿ ಕೋಚ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಪೊವಾರ್ ಯಶಸ್ವಿಯಾಗಿದ್ದಾರೆ.
ಮುಬರುವ ಶ್ರೀಲಂಕಾ ಪ್ರವಾಸ, ವೆಸ್ಟ್ ಇಂಡೀಸ್ ಪ್ರವಾಸ ಹಾಗೂ ನವೆಂಬರ್‌ನಲ್ಲಿ ನಡೆಯಲಿರು ಟಿ20 ಮಹಿಳಾ ವಿಶ್ವಕಪ್ ವರೆಗೆ ರಮೇಶ್ ಪೊವಾರ್ ಟೀಂ ಇಂಡಿಯಾ ಮಹಿಳಾ ತಂಡ ಕೋಚ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಕೋಚ್ ರೇಸ್‌ನಲ್ಲಿಅಂತಿಮ 6 ಸದಸ್ಯರು ಕಾಣಿಸಿಕೊಂಡಿದ್ದರು. 6 ಸದಸ್ಯರ ಪಟ್ಟಿಯಲ್ಲಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದರು. ಸದ್ಯ ಬಾಂಗ್ಲಾದೇಶ ತಂಡದ ಸ್ಪಿನ್ ಕೋಚ್ ಆಗಿರುವ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ, ಭಾರತ ತಂಡದ ಮಾಜಿ ನಾಯಕಿ, ರಾಜ್ಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಮಮತಾ ಮಾಬೆನ್ ಹಾಗೂ ಕರ್ನಾಟಕ ಸೇರಿ ಹಲವು ರಣಜಿ ತಂಡಗಳ ಕೋಚ್ ಆಗಿ ಯಶಸ್ಸು ಸಾಧಿಸಿರುವ, ಹಾಲಿ ಭಾರತ ಅಂಡರ್-19 ತಂಡದ ಬೌಲಿಂಗ್ ಕೋಚ್ ಸನತ್ ಕುಮಾರ್ ಕೋಚ್ ಹುದ್ದೆಗೆ ಪೈಪೋಟಿ ನಡೆಸಿದ್ದರು. ಆದರೆ ಪೊವಾರ್ ಹೆಸರನ್ನ ಬಿಸಿಸಿಐ ಅಂತಿಮಗೊಳಿಸಿದೆ.
ಭಾರತದ ಪರ 2 ಟೆಸ್ಟ್ ಪಂದ್ಯದಿಂದ 6 ವಿಕೆಟ್ ಕಬಳಿಸಿರುವ ರಮೇಶ್ ಪವಾರ್, 31 ಏಕದಿನದಲ್ಲಿ 34 ವಿಕೆಟ್ ಉರುಳಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳಾ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಪ್ರತಿನಿಧಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.