
ದುಬೈ(ನ.12): ಟ್ವೀಟರ್‌ನಲ್ಲಿ 140 ಅಕ್ಷರಗಳ ಮಿತಿಯನ್ನು 280ಕ್ಕೇರಿಸಿದ ಸಂತಸವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ವಿಭಿನ್ನವಾಗಿ ಆಚರಿಸಿದೆ.
ಅಕ್ಷರಗಳ ಮಿತಿಯನ್ನು ಏರಿಸಿದ್ದಕ್ಕೆ ಟ್ವೀಟರ್'ಗೆ ಧನ್ಯವಾದ ಹೇಳಿರುವ ಐಸಿಸಿ, ಶ್ರೀಲಂಕಾ ಕ್ರಿಕೆಟಿಗರ ಪೂರ್ಣ ಹೆಸರನ್ನು ಟ್ವೀಟ್ ಮಾಡಿದೆ. ಲಂಕಾದ ಮಾಜಿ ಕ್ರಿಕೆಟಿಗರಾದ ಚಾಮಿಂಡ ವಾಸ್, ಕುಮಾರ ಧರ್ಮಸೇನಾ, ಹಾಲಿ ಆಟಗಾರರಾದ ನಿರೋಶನ್ ಡಿಕ್'ವೆಲ್ಲಾ ಹಾಗೂ ರಂಗನಾ ಹೆರಾತ್ ಅವರ ಪೂರ್ಣ ಹೆಸರನ್ನು ಟ್ವೀಟ್ ಮಾಡಿದೆ.
ಉದಾಹರಣೆಗೆ (ವರ್ನಕುಲಸೂರ್ಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂಡ ವಾಸ್, ಹೆರಾತ್ ಮುದಿಯನಸೆಲಗೆ ರಂಗನಾ ಕೀರ್ತಿ ಭಂಡಾರ ಹೆರಾತ್), ಹೀಗೆ ಸಂಪೂರ್ಣ ಹೆಸರನ್ನು ಟೈಪಿಸುವುದರೊಂದಿಗೆ ಎಲ್ಲರ ಗಮನ ಸೆಳೆದಿದೆ.
ಸಾಮಾಜಿಕ ಜಾಲತಾಣದ ದಿಗ್ಗಜನಾದ ಟ್ವಿಟರ್, ನವೆಂಬರ್ 9ರಂದು 140 ಅಕ್ಷರಗಳ ಮಿತಿಗೆ ಗುಡ್ ಬೈ ಹೇಳಿ ಹೊಸದಾಗಿ 280 ಅಕ್ಷರ ಬಳಸಲು ತನ್ನ ಬಳಕೆದಾರರಿಗೆ ಅವಕಾಶ ನೀಡಿದೆ. ಅದೇ ರೀತಿ ಬಳಕೆದಾರರ ಹೆಸರಿನ ಮಿತಿ 20ರಿಂದ 50 ಅಕ್ಷರಗಳಿಗೆ ಹೆಚ್ಚಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.