ದ್ರಾವಿಡ್ To ಕೊಹ್ಲಿ: ಇಲ್ಲಿದೆ RCB ಕ್ಯಾಪ್ಟನ್ ಲಿಸ್ಟ್!

Published : Mar 22, 2019, 08:16 PM ISTUpdated : Mar 22, 2019, 08:18 PM IST
ದ್ರಾವಿಡ್ To ಕೊಹ್ಲಿ: ಇಲ್ಲಿದೆ RCB ಕ್ಯಾಪ್ಟನ್ ಲಿಸ್ಟ್!

ಸಾರಾಂಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ 6 ನಾಯಕರನ್ನು ಕಂಡಿದೆ. ಮೊದಲ ಆವೃತ್ತಿಯಲ್ಲಿ ದಿಗ್ಗಜ ರಾಹುಲ್ ದ್ರಾವಿಡ್ ನಾಯಕತ್ವ ವಹಿಸಿದ್ದರೆ, ಸದ್ಯ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. RCB ತಂಡದ ನಾಯಕ ವಿವರ ಇಲ್ಲಿದೆ.  

ಬೆಂಗಳೂರು(ಮಾ.22): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಳೂರು ತಂಡಕ್ಕೆ ಅಪಾರ ಅಭಿಮಾನಿ ಬಳಗವಿದೆ. ಪ್ರತಿ ಆವೃತ್ತಿಯಲ್ಲೂ RCB ಬಲಿಷ್ಠ ಹಾಗೂ ಸ್ಟಾರ್ ಆಟಗಾರರನ್ನ ಕಣಕ್ಕಿಳಿಸಿದೆ. ಇದುವರೆಗೂ ಪ್ರಶಸ್ತಿ ಗೆದ್ದಿಲ್ಲ ಅನ್ನೋ ಕೊರಗು ಹೊರತು ಪಡಿಸಿದರೆ RCB ಪ್ರತಿ ಟೂರ್ನಿಯಲ್ಲಿ ಅತ್ಯುತ್ತಮ ಹೋರಾಟ ನೀಡೋ ಮೂಲಕ ಅಭಿಮಾನಿಗಳನ್ನು ರಂಜಿಸಿದೆ.

ಇದನ್ನೂ ಓದಿ: IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!

2008ರಿಂದ ಇದೀಗ ಮಾರ್ಚ್ 23 ರಿಂದ ಆರಂಭಗೊಳ್ಳುತ್ತಿರುವ 12ನೇ ಆವೃತ್ತಿ ವರೆಗೂ RCB ತಂಡ ಇತರ ತಂಡಗಳಿಗಿಂತ ಭಿನ್ನವಾಗಿದೆ. RCBಯ ಸ್ಟಾರ್ ಹಾಗೂ ದಿಗ್ಗಜ ಆಟಗಾರರೇ ಇದಕ್ಕೆ ಕಾರಣ. ಚೊಚ್ಚಲ ಆವೃತ್ತಿಯಲ್ಲಿ RCB ತಂಡವನ್ನು ರಾಹುಲ್ ದ್ರಾವಿಡ್ ಮುನ್ನಡೆಸಿದ್ದರು. ಇಲ್ಲಿದೆ RCB ತಂಡದ ನಾಯಕರ ವಿವರ

ಇದನ್ನೂ ಓದಿ: IPL 2019: RCB ಆಟಗಾರರ ಕಂಪ್ಲೀಟ್ ಲಿಸ್ಟ್!

RCB ನಾಯಕರು:
ರಾಹುಲ್ ದ್ರಾವಿಡ್(2008)
ಕೆವಿನ್ ಪೀಟರ್‌ಸನ್(2009)
ಅನಿಲ್ ಕುಂಬ್ಳೆ(2009-10)
ಡೆನಿಯಲ್  ವೆಟೋರಿ(2011-12)
ವಿರಾಟ್ ಕೊಹ್ಲಿ(2013-ಪ್ರಸಕ್ತ)

ಸದ್ಯ ವಿರಾಟ್ ಕೊಹ್ಲಿ RCB ತಂಡವನ್ನು ಮುನ್ನಡೆಸುತ್ತಿದ್ದಾರೆ. 2017ರ ಆವೃತ್ತಿ 3 ಪಂದ್ಯಗಳಲ್ಲಿ ಶೇನ್ ವ್ಯಾಟ್ಸ‌ನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಹೀಗಾಗಿ RCB ಒಟ್ಟು 6 ನಾಯಕರನ್ನು ಕಂಡಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?