ದ್ರಾವಿಡ್'ಗೆ ಬಿಸಿಸಿಐನಿಂದ 2.4 ಕೋಟಿ ಪಾವತಿ

By Suvarna Web DeskFirst Published Feb 8, 2018, 6:40 PM IST
Highlights

ಇತ್ತೀಚೆಗಷ್ಟೇ ನ್ಯೂಜಿಲೆಂಡ್'ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೇ ವೇಳೆ ದ್ರಾವಿಡ್'ಗೆ ಬಹುಮಾನವಾಗಿ ಬಿಸಿಸಿಐ 50 ಲಕ್ಷ ರುಪಾಯಿ ಘೋಷಿಸಿತ್ತು. ಇನ್ನು ಆಟಗಾರರಿಗೆ 30 ಲಕ್ಷ ರುಪಾಯಿ ಹಾಗೆಯೇ ಸಹಾಯಕ ಸಿಬ್ಬಂದಿಗೆ 20 ಲಕ್ಷ ಬಹುಮಾನ ಘೋಷಿಸಿತ್ತು.

ಮುಂಬೈ(ಫೆ.08): ಕಿರಿಯರ ಟೀಂ ಇಂಡಿಯಾ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ 6 ತಿಂಗಳ ಸಂಭಾವನೆ 2.43 ಕೋಟಿ ರುಪಾಯಿಗಳನ್ನು  ಬಿಸಿಸಿಐ ಪಾವತಿಸಿದೆ.

ಡಿ.31, 2017ರಿಂದ ಮುಂದಿನ 6 ತಿಂಗಳ ಸಂಭಾವನೆಯ ಹಣವನ್ನು ಬಿಸಿಸಿಐ, ದ್ರಾವಿಡ್'ಗೆ ಪಾವತಿಸಿದೆ. ಬೌಲಿಂಗ್ ಕೋಚ್ ಪಾರಾಸ್ ಮಾಂಬ್ರೆ ಅವರ 4 ತಿಂಗಳ ಅವಧಿಯ ಸಂಭಾವನೆಯ ಹಣ 27 ಲಕ್ಷ ರುಪಾಯಿ ನೀಡಲಾಗಿದೆ. ಕಳೆದ ಆಗಸ್ಟ್ ಮತ್ತು ನವೆಂಬರ್ ವೇಳೆ ಕಿರಿಯರ ತಂಡದ ಸಹಾಯಕ ಸಿಬ್ಬಂದಿಗೆ ನೀಡಿದ ಸಂಭಾವನೆ ಹಣವನ್ನು ಬಿಸಿಸಿಐ ತನ್ನ ವೆಬ್'ಸೈಟ್'ನಲ್ಲಿ ಪ್ರಕಟಿಸಿದೆ.

click me!