
ನವದೆಹಲಿ(ಅ.24): ಐಸಿಸಿ ನೂತನ ನಿಯಮಗಳಲ್ಲಿ ಒಂದಾದ ಬ್ಯಾಟ್'ನ ಗಾತ್ರದಲ್ಲಿನ ಬದಲಾವಣೆ ಕ್ರಿಕೆಟ್ ಆಟದ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಬ್ಯಾಟ್ ಗಾತ್ರದಲ್ಲಿನ ಬದಲಾವಣೆ ಆಟದ ಮೇಲೆ ಪ್ರಭಾವ ಬೀರಲಿದೆ. ನೂತನ ನಿಯಮ ಬಹುತೇಕ ಆಟಗಾರರ ಮೇಲೆ ಪರಿಣಾಮ ಬೀರುವುದಿಲ್ಲ. ಕೆಲವು ಆಟಗಾರರು ಮಾತ್ರ ನಿಯಮ ಮೀರಿದ ಬ್ಯಾಟ್‌ಗಳನ್ನು ಬಳಸುತ್ತಿದ್ದು, ಬಹುತೇಕರು ನಿಯಮದಡಿಯಲ್ಲಿ ಬರುವ ಬ್ಯಾಟ್'ಗಳನ್ನೇ ಬಳಸುತ್ತಿದ್ದಾರೆ. ನಿಜವಾಗಲೂ ಇದು ಉತ್ತಮ ನಿರ್ಧಾರ’ ಎಂದು ದ್ರಾವಿಡ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕ್ರಿಕೆಟ್ ನಿಯಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅದರಲ್ಲಿ ಬ್ಯಾಟ್'ನ ದಪ್ಪ ಹಾಗೂ ಬ್ಯಾಟ್'ನ ಅಂಚಿಗೆ ಸಂಬಂಧಿಸಿದಂತೆ ಹೊಸ ನಿಯಮ ರೂಪಿಸಿದೆ. ಹೀಗಾಗಿ ಹೊಸ ನಿಯಮದಂತೆ ಡೇವಿಡ್ ವಾರ್ನರ್ ಅವರಂತಹ ಆಟಗಾರರು ತಮ್ಮ ಬ್ಯಾಟ್'ನ ಗಾತ್ರ ಬದಲಾಯಿಸಿಕೊಳ್ಳಬೇಕಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.