ಶೂಟಿಂಗ್ ವಿಶ್ವಕಪ್ ಫೈನಲ್ಸ್: ಚಿನ್ನಕ್ಕೆ ಮುತ್ತಿಕ್ಕಿದ ಜೀತು-ಹೀನಾ ಜೋಡಿ!

By Suvarna Web DeskFirst Published Oct 24, 2017, 8:33 PM IST
Highlights

ಕಾಮನ್‌'ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜೀತು ಹಾಗೂ ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಹೀನಾ ಒಟ್ಟಾಗಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಗೆದ್ದ ಮೂರನೇ ಚಿನ್ನದ ಪದಕ ಇದಾಗಿದೆ.

ನವದೆಹಲಿ(ಅ.24): ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಫೈನಲ್ಸ್ ಪಂದ್ಯಾವಳಿಯಲ್ಲಿ ಭಾರತ ಮೊದಲ ದಿನವೇ ಚಿನ್ನದ ಬೇಟೆಯಾಡಿದೆ. ಇಂದಿನಿಂದ ಆರಂಭಗೊಂಡ ಪಂದ್ಯಾವಳಿಯ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಜೀತು ರೈ ಹಾಗೂ ಹೀನಾ ಸಿದ್ಧು ಚಿನ್ನದ ಪದಕ ಜಯಿಸಿದರು.

ಕಾಮನ್‌'ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜೀತು ಹಾಗೂ ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಹೀನಾ ಒಟ್ಟಾಗಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಗೆದ್ದ ಮೂರನೇ ಚಿನ್ನದ ಪದಕ ಇದಾಗಿದೆ.

ಇಲ್ಲಿನ ಡಾ.ಕರ್ನಿ ಸಿಂಗ್ ಶೂಟಿಂಗ್ ರೇಂಜ್‌'ನಲ್ಲಿ ಭಾರತೀಯ ಜೋಡಿ ಫೈನಲ್‌'ನಲ್ಲಿ ಒಟ್ಟು 483.4 ಅಂಕ ಗಳಿಸಿ ಮೊದಲ ಸ್ಥಾನ ಪಡೆದುಕೊಂಡಿತು. 2020ರ ಟೋಕಿಯೋ ಒಲಿಂಪಿಕ್ಸ್‌'ಗೆ ಮಿಶ್ರ ತಂಡ ಶೂಟಿಂಗ್ ಸ್ಪರ್ಧೆಯನ್ನು ಸೇರ್ಪಡೆಗೊಳಿಸಲಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ನಡೆದ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಮಿಶ್ರ ತಂಡದ ಸ್ಪರ್ಧೆಯನ್ನು ಪ್ರಾಯೋಗಿಕವಾಗಿ ನಡೆಸಲಾಗಿತ್ತು. ಈ ವಿಭಾಗದಲ್ಲಿ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊದಲ ಜೋಡಿ ಎನ್ನುವ ದಾಖಲೆಯನ್ನೂ ಇವರಿಬ್ಬರು ಬರೆದಿದ್ದಾರೆ.

ಜೀತು ಹಾಗೂ ಹೀನಾ ಫೈನಲ್‌'ನಲ್ಲೂ ಸ್ಥಿರ ಆಟ ಕಾಯ್ದುಕೊಂಡ ಭಾರತೀಯ ಜೋಡಿ ಮೊದಲ ಸ್ಥಾನ ಗಳಿಸಿತು. ಫ್ರ್ಯಾನ್ಸ್ ಬೆಳ್ಳಿ ಪದಕ ಪಡೆದರೆ ಚೀನಾ ತಂಡ ಕಂಚಿಗೆ ಕೊರಳೊಡ್ಡಿತು.

click me!