ಹಾಂಕಾಂಗ್ ಓಪನ್: ಎಂಟರಘಟ್ಟಕ್ಕೆ ಲಗ್ಗೆಯಿಟ್ಟ ಸಿಂಧು

By Suvarna Web DeskFirst Published Nov 23, 2017, 8:11 PM IST
Highlights

ಇನ್ನು ಮತ್ತೊಂದು ಪಂದ್ಯದಲ್ಲಿ ಭಾರತದ ಹೆಚ್.ಎಸ್. ಪ್ರಣಯ್ ಹಾಂಕಾಂಗ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹೋರಾಟ ಅಂತ್ಯವಾಗಿದೆ.

ಹಾಂಕಾಂಗ್(ನ.23): ಭಾರತದ ಅನುಭವಿ ಆಟಗಾರ್ತಿ ಭಾರತದ ಪಿ.ವಿ.ಸಿಂಧು ಹಾಂಕಾಂಗ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಇಂದು ನಡೆದ ಮಹಿಳೆಯರ ಸಿಂಗಲ್ಸ್‌'ನ ಪ್ರೀ ಕ್ವಾರ್ಟರ್‌ ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕಿತೆ ಸಿಂಧು 21-14, 21-17 ಅಂಕಗಳ ಅಂತರದಲ್ಲಿ ಜಪಾನ್‌'ನ ಅಯ ಓಓರಿಯನ್ನು ಮಣಿಸಿದರು. ಇದೀಗ ಶುಕ್ರವಾರ ನಡೆಯುವ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಸಿಂಧು ಮತ್ತೆ ಜಪಾನ್‌'ನ ಆಟಗಾರ್ತಿ ಅಕಾನೆ ಯಮಗುಚಿ ಸವಾಲನ್ನು ಎದುರಿಸಲಿದ್ದಾರೆ.

ಒಟ್ಟು 39 ನಿಮಿಷ ನಡೆದ ಪಂದ್ಯದಲ್ಲಿ ಎರಡೂ ಸೆಟ್'ನಲ್ಲಿ ಪ್ರಾಬಲ್ಯ ಮೆರೆದ ರಿಯೋ ಬೆಳ್ಳಿ ಪದಕ ವಿಜೇತೆ ಸಿಂಧು ಅನಾಯಾಸವಾಗಿ ಎಂಟರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ.

ಇನ್ನು ಮತ್ತೊಂದು ಪಂದ್ಯದಲ್ಲಿ ಭಾರತದ ಹೆಚ್.ಎಸ್. ಪ್ರಣಯ್ ಹಾಂಕಾಂಗ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹೋರಾಟ ಅಂತ್ಯವಾಗಿದೆ. 54 ನಿಮಿಷಗಳ ಪಂದ್ಯದಲ್ಲಿ ಜಪಾನ್'ನ ಕಜುಮಾಸ ಸಾಕೈ ವಿರುದ್ಧ 21-11, 10-21, 15-21 ಅಂಕಗಳ ಅಂತರದಿಂದ ಸೋಲೊಪ್ಪಿಕೊಂಡರು.

click me!