ಗೆಳತಿ ಸಾಗರಿಕಾ ಕೈಹಿಡಿದ ಜಹೀರ್ ಖಾನ್

Published : Nov 23, 2017, 07:37 PM ISTUpdated : Apr 11, 2018, 12:42 PM IST
ಗೆಳತಿ ಸಾಗರಿಕಾ ಕೈಹಿಡಿದ ಜಹೀರ್ ಖಾನ್

ಸಾರಾಂಶ

ನವೆಂಬರ್ 27ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಆಪ್ತರು, ಕ್ರಿಕೆಟಿಗರು, ಕೆಲವು ಸೆಲಿಬ್ರಿಟಿಗಳು ಭಾಗವಹಿಸಲಿದ್ದಾರೆ.

ಮುಂಬೈ(ನ.23): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ತಮ್ಮ ಬಹುಕಾಲದ ಗೆಳತಿ, ‘ಚಕ್ ದೇ ಇಂಡಿಯಾ’ ಸಿನಿಮಾ ಖ್ಯಾತಿಯ ನಟಿ ಸಾಗರಿಕಾ ಘಾಟ್ಗೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಮುಂಬೈನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ತಾರಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಬೆಳಗ್ಗೆ ವಿವಾಹ ನೋಂದಣಿ ಕಚೇರಿಗೆ ತೆರಳಿದ ನವದಂಪತಿ ವಿವಾಹ ನೋಂದಣಿ ಮಾಡಿಸಿದರು. ಈ ವೇಳೆ ಜಹೀರ್‌ಖಾನ್ ಹಾಗೂ ಸಾಗರಿಕಾ ಅವರ ಕುಟುಂಬದ ಸದಸ್ಯರು ಹಾಗೂ ಕೆಲ ಆಪ್ತರು ಮಾತ್ರ ಉಪಸ್ಥಿತರಿದ್ದರು.

ನವೆಂಬರ್ 27ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಆಪ್ತರು, ಕ್ರಿಕೆಟಿಗರು, ಕೆಲವು ಸೆಲಿಬ್ರಿಟಿಗಳು ಭಾಗವಹಿಸಲಿದ್ದಾರೆ.

ವಿವಾಹ ಬಂಧನಕ್ಕೆ ಒಳಗಾದ ಈ ಜೋಡಿ ವಸ್ತ್ರ ಕೂಡಾ ಸಾಕಷ್ಟು ಸಿಂಪಲ್ ಆಗಿತ್ತು. ಸಾಗರಿಕಾ ಕೆಂಪು ವರ್ಣದ ಸೀರೆಯಲ್ಲಿ ಮಿಂಚುತ್ತಿದ್ದರೆ, ಜಹೀರ್‌ಖಾನ್ ಪೈಜಾಮದಲ್ಲಿ ಎಲ್ಲರ ಗಮನ ಸೆಳೆದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ