ಡೆನ್ಮಾರ್ಕ್‌ ಓಪನ್‌ನಲ್ಲಿ ಪಿ ವಿ ಸಿಂಧು ಕ್ವಾರ್ಟರ್‌ಗೆ ಲಗ್ಗೆ

By Kannadaprabha News  |  First Published Oct 20, 2023, 12:50 PM IST

ಈ ವರ್ಷ ಮ್ಯಾಡ್ರಿಡ್‌ ಮಾಸ್ಟರ್ಸ್‌ ಫೈನಲ್‌ ಸೇರಿ ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಟುನ್ಜುಂಗ್‌ ವಿರುದ್ಧ ಸೋತಿದ್ದ ಸಿಂಧು, ಈ ಬಾರಿ ರೋಚಕವಾಗಿ ಜಯಿಸಿ ಒಟ್ಟಾರೆ ಗೆಲುವಿನ ದಾಖಲೆಯನ್ನು 9-2ಕ್ಕೆ ಏರಿಸಿದರು.


ಓಡೆನ್ಸ್‌(ಡೆನ್ಮಾರ್ಕ್‌): 2 ಬಾರಿ ಒಲಿಂಪಿಕ್‌ ಪದಕ ವಿಜೇತೆ, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಈ ವರ್ಷ ಯಾವುದೇ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿರುವ ಮಾಜಿ ವಿಶ್ವ ಚಾಂಪಿಯನ್‌ ಸಿಂಧು, ಗುರುವಾರ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.7, ಇಂಡೋನೇಷ್ಯಾದ ಮರಿಸ್ಕಾ ಟುನ್ಜುಂಗ್‌ ವಿರುದ್ಧ 18-21, 21-15, 21-13 ಅಂತರದಲ್ಲಿ ಗೆಲುವು ಸಾಧಿಸಿದರು.

ಈ ವರ್ಷ ಮ್ಯಾಡ್ರಿಡ್‌ ಮಾಸ್ಟರ್ಸ್‌ ಫೈನಲ್‌ ಸೇರಿ ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಟುನ್ಜುಂಗ್‌ ವಿರುದ್ಧ ಸೋತಿದ್ದ ಸಿಂಧು, ಈ ಬಾರಿ ರೋಚಕವಾಗಿ ಜಯಿಸಿ ಒಟ್ಟಾರೆ ಗೆಲುವಿನ ದಾಖಲೆಯನ್ನು 9-2ಕ್ಕೆ ಏರಿಸಿದರು.

Latest Videos

undefined

ಟೆನಿಸ್: ರಾಜ್ಯದ ಪ್ರಜ್ವಲ್‌ ದೇವ್‌ ಕ್ವಾರ್ಟರ್‌ ಫೈನಲ್‌ಗೆ

ಧಾರವಾಡ: ಇಲ್ಲಿ ನಡೆಯುತ್ತಿರುವ ಐಟಿಎಫ್‌ ಧಾರವಾಡ ಓಪನ್‌ ಪುರುಷರ ಟೆನಿಸ್‌ ಟೂರ್ನಿಯಲ್ಲಿ ಕರ್ನಾಟಕ ಪ್ರಜ್ವಲ್‌ ದೇವ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಟೂರ್ನಿಯ ಅಗ್ರ 8 ಶ್ರೇಯಾಂಕಿತ ಆಟಗಾರರೇ ಕ್ವಾರ್ಟರ್‌ಗೇರಿದ್ದು ವಿಶೇಷ. 8ನೇ ಶ್ರೇಯಾಂಕಿತ ಪ್ರಜ್ವಲ್‌ ಗುರುವಾರ ಪ್ರಿ ಕ್ವಾರ್ಟರ್‌ನಲ್ಲಿ ರಾಜ್ಯದವರೇ ಆದ ಸೂರಜ್‌ ಪ್ರಬೋಧ್‌ ವಿರುದ್ಧ 6-3, 6-1ರಲ್ಲಿ ಗೆಲುವು ಸಾಧಿಸಿದರು.

26 ಸಾವಿರ ರನ್ ಎಲೈಟ್ ಕ್ಲಬ್ ಸೇರಿದ ವಿರಾಟ್ ಕೊಹ್ಲಿ..!

4ನೇ ಶ್ರೇಯಾಂಕಿತ ರಾಮ್‌ಕುಮಾರ್‌ ರಾಮನಾಥನ್‌ ಅವರು ಇಸಾಕ್‌ ಇಕ್ಬಾಲ್ ವಿರುದ್ಧ ಗೆದ್ದರು. 3ನೇ ಶ್ರೇಯಾಂಕಿತ ದಿಗ್ವಿಜಯ್‌ ಪ್ರತಾಪ್‌ ಸಿಂಗ್‌, 7ನೇ ಶ್ರೇಯಾಂಕಿತ ಸಿದ್ಧಾರ್ಥ್‌ ರಾವತ್‌, ಅಗ್ರ ಶ್ರೇಯಾಂಕಿತ ಅಮೆರಿಕದ ನಿಕ್‌ ಚಾಪೆಲ್‌ ಸಹ ಕ್ವಾರ್ಟರ್‌ ಫೈನಲ್‌ಗೇರಿದರು.

ಡಿ.2ರಿಂದ 10ನೇ ಆವೃತ್ತಿ ಪ್ರೊ ಕಬಡ್ಡಿ

ಮುಂಬೈ: 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಡಿ.2ರಂದು ಅಹಮದಾಬಾದ್‌ನಲ್ಲಿ ತೆಲುಗು ಟೈಟಾನ್ಸ್‌ ಮತ್ತು ಗುಜರಾತ್‌ ಜೈಂಟ್ಸ್‌ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ.

ಈ ಬಾರಿ ಟೂರ್ನಿಗೆ 12 ನಗರಗಳು ಆತಿಥ್ಯ ವಹಿಸಲಿದ್ದು, ಲೀಗ್‌ ಪಂದ್ಯಗಳು 2024ರ ಫೆ.21 ರ ವರೆಗೂ ನಡೆಯಲಿವೆ. ಪ್ರತಿ ನಗರದಲ್ಲಿ 6 ದಿನಗಳ ಕಾಲ ಪಂದ್ಯಗಳು ನಡೆಯಲಿವೆ. ಬೆಂಗಳೂರು ಬುಲ್ಸ್‌ ಅ.3ರಂದು ಗುಜರಾತ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಟೂರ್ನಿಯ ಬಹುತೇಕ ದಿನ ಎರಡೆರಡು ಪಂದ್ಯಗಳು ನಡೆಯಲಿದ್ದು, ದಿನದ ಮೊದಲ ಪಂದ್ಯ ರಾತ್ರಿ 8ಕ್ಕೆ, 2ನೇ ಪಂದ್ಯ ರಾತ್ರಿ 9ಕ್ಕೆ ಆರಂಭಗೊಳ್ಳಲಿದೆ.

IND vs BAN ಪಂದ್ಯದ ವೇಳೆ ಸಾರಾ ತೆಂಡುಲ್ಕರ್ ಪ್ರತ್ಯಕ್ಷ, ಗಿಲ್ ಸೆಂಚುರಿ ಪಕ್ಕಾ ಎಂದ ಫ್ಯಾನ್ಸ್!

ಡಿ.8ರಿಂದ ಬೆಂಗ್ಳೂರು ಚರಣ

ಡಿ.7 ರ ವರೆಗೆ ಅಹಮದಾಬಾದ್‌ನಲ್ಲಿ ಪಂದ್ಯ ನಡೆಯಲಿದ್ದು, ಡಿ.8ರಿಂದ ಬೆಂಗಳೂರು ಚರಣ ಶುರುವಾಗಲಿದೆ. ಡಿ.13ರ ವರೆಗೂ ಕಂಠೀರವ ಒಳಾಂಗಣ ಕ್ರೀಡಾಂಗಣ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಬಳಿಕ ಪುಣೆ(ಡಿ.15-20), ಚೆನ್ನೈ(ಡಿ.22-27), ನೋಯ್ಡಾ(ಡಿ.29-ಜ.3), ಮುಂಬೈ(ಜ.5-10), ಜೈಪುರ(ಜ.12-17), ಹೈದರಾಬಾದ್‌(ಜ.19-24 ), ಪಾಟ್ನಾ(ಜ.26-31), ಡೆಲ್ಲಿ(ಫೆ. 2-7), ಕೋಲ್ಕತಾ(ಫೆ.9-14) ಮತ್ತು ಪಂಚಕುಲಾ(ಫೆ.16-21)ದಲ್ಲಿ ಪಂದ್ಯಗಳು ನಡೆಯಲಿವೆ.
 

click me!