ಡಿಸಿಯಾಗಿ ಅಧಿಕಾರ ಸ್ವೀಕರಿಸಿದ ಸಿಂಧು

By Suvarna Web DeskFirst Published Aug 9, 2017, 8:39 PM IST
Highlights

ರಿಯೊ ಒಲಿಂಪಿಕ್ಸ್'ನಲ್ಲಿ ಪದಕ ಗೆಲ್ಲುತ್ತಿದ್ದಂತೆ ಪಿ.ವಿ. ಸಿಂಧುವಿಗೆ 3 ಕೋಟಿ ರುಪಾಯಿ ನಗದು ಬಹುಮಾನ, ಅಮರಾವತಿಯಲ್ಲಿ ಫ್ಲಾಟ್ ಹಾಗೂ ಗ್ರೂಪ್-1 ದರ್ಜೆಯ ಹುದ್ದೆ ನೀಡುವುದಾಗಿ ಚಂದ್ರಬಾಬು ನಾಯ್ಡು ಘೋಷಿಸಿದ್ದರು.

ವಿಜಯವಾಡ(ಆ.09): ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಡೆಪ್ಯುಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಆಂಧ್ರ ಪ್ರದೇಶದ ವಿಜಯವಾಡ ಸಮೀಪದ ಗೊಲ್ಲಪುಡಿಯ ಸಿಸಿಎಲ್'ಎ(ಚೀಫ್ ಕಮಿಷನರ್ ಆಫ್ ಲ್ಯಾಂಡ್ ಅಡ್ಮಿನಿಸ್ಟ್ರೇಶನ್ ಕಚೇರಿಯಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ,

ಕಳೆದ ತಿಂಗಳಷ್ಟೇ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ರಾಜ್ಯ ಸರ್ಕಾರ ಗ್ರೂಪ್-ಎ ಹಂತದ ಹುದ್ದೆ ನೀಡಿ ನೇಮಕಾತಿ ಆದೇಶ ಹೊರಡಿಸಿತ್ತು. ಜುಲೈ 29ರಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧಿಕೃತವಾಗಿ ಸಿಂಧುವಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದರು. ಇನ್ನೊಂದು ತಿಂಗಳಲ್ಲಿ ಕೆಲಸಕ್ಕೆ ವರದಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ ಸಿಂಧುವಿಗೆ ಮನವಿ ಮಾಡಿಕೊಂಡಿತ್ತು. ಹೀಗಾಗಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ತಮ್ಮ ಪೋಷಕರೊಂದಿಗೆ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ.

ರಿಯೊ ಒಲಿಂಪಿಕ್ಸ್'ನಲ್ಲಿ ಪದಕ ಗೆಲ್ಲುತ್ತಿದ್ದಂತೆ ಪಿ.ವಿ. ಸಿಂಧುವಿಗೆ 3 ಕೋಟಿ ರುಪಾಯಿ ನಗದು ಬಹುಮಾನ, ಅಮರಾವತಿಯಲ್ಲಿ ಫ್ಲಾಟ್ ಹಾಗೂ ಗ್ರೂಪ್-1 ದರ್ಜೆಯ ಹುದ್ದೆ ನೀಡುವುದಾಗಿ ಚಂದ್ರಬಾಬು ನಾಯ್ಡು ಘೋಷಿಸಿದ್ದರು.

click me!