ಸಿಂಧುಗೆ ಸಾವಿರ ಚದರ ಅಡಿಯ ನಿವೇಶನ

By Suvarna Web DeskFirst Published Jan 3, 2017, 3:52 PM IST
Highlights

ರಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಬೆಳ್ಳಿ ಜಯಿಸಿದ ಕೀರ್ತಿ ಸಿಂಧು ಅವರದ್ದಾಗಿದ್ದು, ಫೈನಲ್‌'ನಲ್ಲಿ ಸ್ಪೇನ್ ಆಟಗಾರ್ತಿ ಕರೋಲಿನಾ ಮರಿನ್ ಎದುರು ಪರಾಭವ ಹೊಂದಿದ ಸಿಂಧು ಬೆಳ್ಳಿ ಗೆದ್ದರು.

ಹೈದರಾಬಾದ್(ಜ.03): ರಿಯೊ ಒಲಿಂಪಿಕ್ಸ್ ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ತೆಲಂಗಾಣ ಸರ್ಕಾರ, ಬಹುಮಾನದ ರೂಪದಲ್ಲಿ 1000 ಚದರ ಅಡಿಯ ನಿವೇಶನವನ್ನು ನೀಡಿದೆ.

ಹೈದರಾಬಾದ್ ಜಿಲ್ಲೆಯ ಶೈಕ್‌'ಪೇಟ್‌'ನಲ್ಲಿ ನಿವೇಶನವನ್ನು ಸಿಂಧು ಅವರಿಗೆ ನೀಡಲಾಗಿದೆ. ಶೈಕ್‌'ಪೇಟ್‌'ನಲ್ಲಿ ಎರಡು ನಿವೇಶನವನ್ನು ಕಾಯ್ದಿರಿಸಲಾಗಿದ್ದು, ಅದರಲ್ಲಿ ಒಂದನ್ನು ರಾಜ್ಯ ಸರ್ಕಾರದ ಆದೇಶದಂತೆ ಸಿಂಧು ಅವರಿಗೆ ನೀಡಲಾಗಿದೆ ಎಂದು ಇಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಬೆಳ್ಳಿ ಜಯಿಸಿದ ಕೀರ್ತಿ ಸಿಂಧು ಅವರದ್ದಾಗಿದ್ದು, ಫೈನಲ್‌'ನಲ್ಲಿ ಸ್ಪೇನ್ ಆಟಗಾರ್ತಿ ಕರೋಲಿನಾ ಮರಿನ್ ಎದುರು ಪರಾಭವ ಹೊಂದಿದ ಸಿಂಧು ಬೆಳ್ಳಿ ಗೆದ್ದರು.

click me!