ಪ್ಲೇ-ಆಫ್ ಪ್ರವೇಶಿಸಿದ ಪುಣೆ; ಪಂಜಾಬ್ ಕನಸು ಭಗ್ನ

By Suvarna Web DeskFirst Published May 14, 2017, 2:07 PM IST
Highlights

ಈ ಮೂಲಕ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ಪ್ಲೇ-ಆಫ್ ಹಂತ ಪ್ರವೇಶಿಸಿದೆ.

ಪುಣೆ(ಮೇ.14): ಉಭಯ ತಂಡಗಳಿಗೆ ಮಹತ್ವವೆನಿಸಿದ್ದ ಪುಣೆ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ತಂಡ ಭರ್ಜರಿಯಾಗಿ ಜಯಭೇರಿ ಬಾರಿಸಿ ಪ್ಲೇ-ಆಫ್ ಹಂತಕ್ಕೆ ಲಗ್ಗೆಯಿಟ್ಟಿದೆ.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಬ್ಯಾಟ್ಸ್'ಮನ್'ಗಳ ದಯಾನೀಯ ವೈಫಲ್ಯದಿಂದಾಗಿ ಕೇವಲ 15.5 ಓವರ್'ಗಳಲ್ಲಿ 73ರನ್'ಗಳಿಗೆ ಸರ್ವಪತನ ಕಂಡಿತು. ವೃದ್ದಿಮಾನ್ ಸಾಹಾ(13), ಶಾನ್ ಮಾರ್ಶ್(10), ಅಕ್ಷರ್ ಪಟೇಲ್(22) ಮತ್ತು ಸ್ವಪ್ನಿಲ್ ಸಿಂಗ್(10) ಹೊರತುಪಡಿಸಿ ಮತ್ಯಾವ ಆಟಗಾರರು ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಲಿಲ್ಲ. ಪುಣೆ ಪರ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ಆ್ಯಡಂ ಜಂಪಾ, ಡೇನಿಯಲ್ ಕ್ರಿಸ್ಟಿನ್ ಹಾಗೂ ಜಯದೇವ್ ಉನಾದ್ಕಟ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಸುಲಭ ಗುರಿ ಬೆನ್ನತ್ತಿದ ಪುಣೆ ಕೇವಲ 1 ವಿಕೆಟ್ ಕಳೆದುಕೊಂಡು ಜಯದ ಗುರಿ ಮುಟ್ಟಿತ್ತು. ಪುಣೆ ಪರ ಅಜೇಯ ಬ್ಯಾಟಿಂಗ್ ನಡೆಸಿದ ಅಜಿಂಕ್ಯಾ ರಹಾನೆ 34ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ಪ್ಲೇ-ಆಫ್ ಹಂತ ಪ್ರವೇಶಿಸಿದೆ.

ಸಂಕ್ಷಿಪ್ತ ಸ್ಕೋರ್:

ಕಿಂಗ್ಸ್ ಇಲೆವನ್ ಪಂಜಾಬ್: 73/10

ಅಕ್ಷರ್ ಪಟೇಲ್ : 22

ವೃದ್ದಿಮಾನ್ ಸಾಹ : 13

ಶಾರ್ದೂಲ್ ಠಾಕೂರ್ 19/3

ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ : 78/1

ಅಜಿಂಕ್ಯಾ ರಹಾನೆ : 34

ರಾಹುಲ್ ತ್ರಿಪಾಠಿ : 28

ಅಕ್ಷರ್ ಪಟೇಲ್ : 13/1

ಪಂದ್ಯಪುರುಷೋತ್ತಮ ಪ್ರಶಸ್ತಿ: ಜಯದೇವ್ ಉನಾದ್ಕಟ್

click me!