
ಕೇಪ್ಟೌನ್(ಅ.13): ವಿಶ್ವ ಕ್ರಿಕೆಟ್‌ನಲ್ಲೇ ಬಲಿಷ್ಠ ಬಲಿಷ್ಠ ತಂಡವೆಂದು ಕರೆಸಿಕೊಳ್ಳುವ ಹಾಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಪ್ರೇಲಿಯಾ ತಂಡ, ದಕ್ಷಿಣ ಆಫ್ರಿಕಾ ನೆಲದಲ್ಲಿ ಮುಕ್ತಾಯ ಕಂಡ ದ.ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು 0-5 ಅಂತರದಲ್ಲಿ ಸೋತು ಮುಖಭಂಗ ಅನುಭವಿಸಿದೆ.
ಏಕದಿನ ಪಂದ್ಯಗಳ ಸರಣಿಯೊಂದರಲ್ಲಿ ಆಸೀಸ್ ತಂಡ 5-0 ಅಂತರದಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿರುವುದು ಇತಿಹಾಸದಲ್ಲಿ ಇದೇ ಮೊದಲು.
ಇಲ್ಲಿನ ನ್ಯೂ ಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ, ನಿಗದಿತ 50 ಓವರ್ಗಳಲ್ಲಿ 327 ರನ್ ಗಳಿಸಿದರೆ, ಈ ಮೊತ್ತ ಬೆನ್ನಟ್ಟಿದ ಆಸೀಸ್, 48.2 ಓವರ್ಗಳಲ್ಲಿ 296 ರನ್ಗಳಿಗೆ ಆಲೌಟ್ ಆಯಿತು.
ಸೆ. 30ರಂದು ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್ಗಳ ಸೋಲನುಭವಿಸಿದ್ದ ಆಸ್ಪ್ರೇಲಿಯಾ, ದ್ವಿತೀಯ ಏಕದಿನ ಪಂದ್ಯದಲ್ಲಿ (ಅ. 2ರಂದು) 142 ರನ್ಗಳ ಭಾರೀ ಸೋಲು ಕಂಡಿತ್ತು. ಇನ್ನು, ಅ. 5ರಂದು ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಪುನಃ 4 ವಿಕೆಟ್ ಸೋಲುಂಡಿದ್ದ ಆಸೀಸ್ ಪಡೆ, ಅ. 9ರಂದು ನಡೆದಿದ್ದ ನಾಲ್ಕನೇ ಏಕದಿನ ಪಂದ್ಯದಲ್ಲಿ 6 ವಿಕೆಟ್ ಪರಾಭವ ಹೊಂದಿತ್ತು.
ವೈಟ್ವಾಶ್ ಇದೇ ಮೊದಲೇನಲ್ಲ...
ಅಂದಹಾಗೆ, ಏಕದಿನ ಮಾದರಿಯಲ್ಲಿ ಆಸೀಸ್ ತಂಡ ಹೀಗೆ ವೈಟ್‌ವಾಷ್ ಅನುಭವಿಸುತ್ತಿರುವುದು ಇದೇನೂ ಮೊದಲಲ್ಲ. 2012ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ನಾಲ್ಕು ಪಂದ್ಯಗಳ ಸರಣಿಯನ್ನು 0-4 ಅಂತರದಲ್ಲಿ ಸೋತಿತ್ತು. ಅದಕ್ಕೂ ಹಿಂದೆ, 1980ರಲ್ಲಿ ಇಂಗ್ಲೆಂಡ್ ವಿರುದ್ಧವೇ 0-2 ಅಂತರದಲ್ಲಿ ಸರಣಿ ಸೋತಿದ್ದ ಅದು, 1982/83ರಲ್ಲಿ ಪಾಕಿಸ್ತಾನ, ಶ್ರೀಲಂಕಾ ವಿರುದ್ಧವೂ 0-2 ಅಂತರದಲ್ಲಿ, 1997ರಲ್ಲಿ ಇಂಗ್ಲೆಂಡ್ ವಿರುದ್ಧ 0-3 ಅಂತರದಲ್ಲಿ, 2006/07ರಲ್ಲಿ ನ್ಯೂಜಿಲೆಂಡ್ ವಿರುದ್ಧ 0-4 ಅಂತರದಲ್ಲಿ ವೈಟ್‌ವಾಷ್ ಅನುಭವಿಸಿತ್ತು.
ಅತಿ ಹೆಚ್ಚು ವೈಟ್‌ವಾಷ್ ಅನುಭವಿಸಿದ ತಂಡಗಳ ಪಟ್ಟಿ
ಜಿಂಬಾಬ್ವೆ 8
ವೆಸ್ಟ್ ಇಂಡೀಸ್ 6
ನ್ಯೂಜಿಲೆಂಡ್ 4
ಇಂಗ್ಲೆಂಡ್ 3
ಭಾರತ 2
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.