15 ಅಂಕ ಕಲೆಹಾಕಿದ ವಿನಯ್ ಹರ್ಯಾಣ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪುಣೆಯ ಯುವ ರೈಡರ್‌ಗಳಾದ ಅಸ್ಲಾಂ ಇನಾಂದಾರ್(09 ಅಂಕ) ಹಾಗೂ ಮೋಹಿತ್ ಗೋಯತ್ (08 ಅಂಕ)ರ ಹೋರಾಟ ವ್ಯರ್ಥವಾಯಿತು.
ಪುಣೆ(ಡಿ.16): ಪ್ರೊ ಕಬಡ್ಡಿ 10ನೇ ಆವೃತ್ತಿಯ ತನ್ನ ತವರಿನ ಚರಣವನ್ನು ಪುಣೇರಿ ಪಲ್ಟನ್ ಸೋಲಿನೊಂದಿಗೆ ಆರಂಭಿಸಿದೆ. ಈ ಆವೃತ್ತಿಯಲ್ಲಿ ತಂಡಕ್ಕಿದು ಮೊದಲ ಸೋಲು. ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಪುಣೇರಿಗೆ ಶುಕ್ರವಾರ, ಹರ್ಯಾಣ ಸ್ಟೀಲರ್ಸ್ ವಿರುದ್ಧ 39-44ರ ಸೋಲು ಎದುರಾಯಿತು.
15 ಅಂಕ ಕಲೆಹಾಕಿದ ವಿನಯ್ ಹರ್ಯಾಣ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪುಣೆಯ ಯುವ ರೈಡರ್‌ಗಳಾದ ಅಸ್ಲಾಂ ಇನಾಂದಾರ್(09 ಅಂಕ) ಹಾಗೂ ಮೋಹಿತ್ ಗೋಯತ್ (08 ಅಂಕ)ರ ಹೋರಾಟ ವ್ಯರ್ಥವಾಯಿತು.
undefined
ಏಕೈಕ ಟೆಸ್ಟ್: ದೀಪ್ತಿ ಶರ್ಮಾ ಆಲ್ರೌಂಡ್ ಆಟ, ಬೃಹತ್ ಜಯದತ್ತ ಭಾರತ ದಾಪುಗಾಲು!
ಇನ್ನು ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಯು ಮುಂಬಾ 42-40ರ ರೋಚಕ ಗೆಲುವು ಪಡೆಯಿತು. ಮೊದಲಾರ್ಧದ ಅಂತ್ಯಕ್ಕೆ 3 ಅಂಕಗಳಿಂದ ಹಿಂದಿದ್ದ ಮುಂಬಾ ದ್ವಿತೀಯಾರ್ಧದಲ್ಲಿ ಪುಟಿದೆದ್ದು ಜಯ ಸಂಪಾದಿಸಿತು. 13 ಅಂಕ ಪಡೆದ ಇರಾನ್‌ನ ಯುವ ರೈಡರ್ ಜಫರ್‌ದಾನೆಶ್ ಮುಂಬಾ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಇಂದಿನ ಪಂದ್ಯಗಳು:
ಪುಣೆ-ಬೆಂಗಾಲ್, ರಾತ್ರಿ 8ಕ್ಕೆ
ಟೈಟಾನ್ಸ್-ಡೆಲ್ಲಿ, ರಾತ್ರಿ 9ಕ್ಕೆ
ಹಾಕಿ: ಕಂಚಿಗಾಗಿ ಇಂದು ಭಾರತ-ಸ್ಪೇನ್ ಸೆಣಸು
ಕೌಲಾಲಂಪುರ: ಕಿರಿಯರ ಹಾಕಿ ವಿಶ್ವಕಪ್‌ನ ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಶನಿವಾರ ಭಾರತ ಹಾಗೂ ಸ್ಪೇನ್ ತಂಡಗಳು ಸೆಣಸಲಿವೆ. ಸೆಮಿಫೈನಲ್‌ನಲ್ಲಿ ಕಳಪೆ ಆಟದ ಮೂಲಕ 12 ಪೆನಾಲ್ಟಿ ಕಾರ್ನರ್‌ಗಳನ್ನು ಕೈಚೆಲ್ಲಿ, 1-4 ಗೋಲುಗಳಿಂದ ಜರ್ಮನಿ ವಿರುದ್ಧ ಸೋತಿದ್ದ ಭಾರತ 3ನೇ ಸ್ಥಾನದೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಲು ಕಾಯುತ್ತಿದೆ. ಸ್ಪೇನ್ ಸೆಮೀಸ್‌ನಲ್ಲಿ ಫ್ರಾನ್ಸ್‌ಗೆ 1-3 ಗೋಲುಗಳಲ್ಲಿ ಶರಣಾಗಿತ್ತು. ಫೈನಲ್‌ನಲ್ಲಿ ಫ್ರಾನ್ಸ್ ಹಾಗೂ ಜರ್ಮನಿ ಮುಖಾಮುಖಿಯಾಗಲಿವೆ.
Sports Flashback 2023 ಮೇ ತಿಂಗಳಲ್ಲಿ ಕೊಹ್ಲಿ-ನವೀನ್ ಕಿರಿಕ್, ಸಿಎಸ್‌ಕೆಗೆ ಒಲಿದ 5ನೇ ಐಪಿಎಲ್ ಕಪ್..!
ಭಾರತ-ಸ್ಪೇನ್ ಪಂದ್ಯ: ಮ.3.30ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ
ಪ್ಯಾರಾ ಖೇಲೋ ಇಂಡಿಯಾ: ರಾಜ್ಯದ ಸಂದೇಶ್‌ಗೆ ಚಿನ್ನ
ನವದೆಹಲಿ: ಉದ್ಘಾಟನಾ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ 6ನೇ ಚಿನ್ನದ ಪದಕ ದೊರೆತಿದೆ. ಪುರುಷರ ಪವರ್-ಲಿಫ್ಟಿಂಗ್‌ನ 88 ಕೆ.ಜಿ. ವಿಭಾಗದಲ್ಲಿ ರಾಜ್ಯದ ಸಂದೇಶ್ ಬಿ.ಜಿ. ಚಿನ್ನದ ಪದಕ ಹೆಕ್ಕಿದ್ದಾರೆ. ಗುರುವಾರ ನಡೆದ ಸ್ಪರ್ಧೆಯಲ್ಲಿ ಅವರು 171 ಕೆ.ಜಿ. ಭಾರ ಎತ್ತಿ ಸ್ವರ್ಣಕ್ಕೆ ಮುತ್ತಿಟ್ಟರು. 145 ಕೆ.ಜಿ. ತೂಕ ಎತ್ತಿದ ದೆಹಲಿಯ ಜಗ್ಮೋಹನ್‌ಗೆ ಬೆಳ್ಳಿ, 140 ಕೆ.ಜಿ. ಭಾರ ಎತ್ತಿದ ಗುಜರಾತ್‌ನ ದಿವ್ಯೇಶ್‌ಗೆ ಕಂಚು ದೊರೆಯಿತು.
ಕರ್ನಾಟಕ 6 ಚಿನ್ನ, ತಲಾ 8 ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 22 ಪದಕ ಜಯಿಸಿ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. 34 ಚಿನ್ನ, 36 ಬೆಳ್ಳಿ, 18 ಕಂಚಿನೊಂದಿಗೆ 88 ಪದಕ ಗೆದ್ದಿರುವ ಹರ್ಯಾಣ ಮೊದಲ ಸ್ಥಾನ ಪಡೆದಿದೆ.