ಈ ಪಂದ್ಯಕ್ಕೂ ಮುನ್ನ ಪುಣೆ 91 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿತ್ತು. ಯೋಧಾಸ್ ವಿರುದ್ಧ 7 ಅಂಕಗಳಿಗಿಂತ ಕಡಿಮೆ ಅಂತರದಲ್ಲಿ ಸೋತಿದ್ದರೂ, 1 ಅಂಕ ಸಿಗುತ್ತಿತ್ತು. ಆಗಲೂ ತಂಡ ಅಂಕ ವ್ಯತ್ಯಾಸ ಆಧಾರದಲ್ಲಿ ಅಗ್ರಸ್ಥಾನ ಪಡೆಯಿತು.
ಪಂಚಕುಲಾ(ಫೆ.22): ಪ್ರೊ ಕಬಡ್ಡಿ 10ನೇ ಆವೃತ್ತಿಯ ಲೀಗ್ ಹಂತಕ್ಕೆ ತೆರೆಬಿದ್ದಿದ್ದು, ಕರ್ನಾಟಕದ ಬಿ.ಸಿ.ರಮೇಶ್ ಮಾರ್ಗದರ್ಶನದ ಪುಣೇರಿ ಪಲ್ಟನ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಬುಧವಾರ ನಡೆದ ಅಂತಿಮ ಪಂದ್ಯದಲ್ಲಿ ಯು.ಪಿ.ಯೋಧಾಸ್ ವಿರುದ್ಧ 40-38ರ ರೋಚಕ ಗೆಲುವು ಸಾಧಿಸಿದ ಪುಣೆ, ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು.
ಈ ಪಂದ್ಯಕ್ಕೂ ಮುನ್ನ ಪುಣೆ 91 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿತ್ತು. ಯೋಧಾಸ್ ವಿರುದ್ಧ 7 ಅಂಕಗಳಿಗಿಂತ ಕಡಿಮೆ ಅಂತರದಲ್ಲಿ ಸೋತಿದ್ದರೂ, 1 ಅಂಕ ಸಿಗುತ್ತಿತ್ತು. ಆಗಲೂ ತಂಡ ಅಂಕ ವ್ಯತ್ಯಾಸ ಆಧಾರದಲ್ಲಿ ಅಗ್ರಸ್ಥಾನ ಪಡೆಯಿತು. ಆದರೆ, ಮೊದಲಾರ್ಧದಲ್ಲಿ 15-28ರಿಂದ ಹಿಂದಿದ್ದರೂ, ದ್ವಿತೀಯಾರ್ಧದಲ್ಲಿ ಪುಟಿದೆದ್ದ ಪುಣೆ ಗೆಲುವು ಸಂಪಾದಿಸಿತು. ಇದರೊಂದಿಗೆ 22 ಪಂದ್ಯಗಳಲ್ಲಿ ಬರೋಬ್ಬರಿ 17 ಗೆಲುವುಗಳೊಂದಿಗೆ 96 ಅಂಕ ಪಡೆದು ಮೊದಲ ಸ್ಥಾನ ಗಳಿಸಿತು. ತಂಡ ಸೋತಿದ್ದು ಕೇವಲ 2 ಪಂದ್ಯಗಳಲ್ಲಿ. 3 ಪಂದ್ಯಗಳನ್ನು ಟೈ ಮಾಡಿಕೊಂಡಿತು.
undefined
ಸಾನಿಯಾಗೆ ಕೈಕೊಟ್ಟಿದ್ದೇಕೆ ಶೋಯೆಬ್ ಮಲಿಕ್..? ಇಲ್ಲಿದೆ ನೋಡಿ ಹೊಸ ಅಪ್‌ಡೇಟ್
ಮಿಂಚಿದ ಕನ್ನಡಿಗ ಗಗನ್!
ಯು.ಪಿ.ಯೋಧಾಸ್ ಸೋಲುಂಡರೂ, ಕರ್ನಾಟಕದ ಯುವ ರೈಡರ್ ಗಗನ್ ಗೌಡ ಆಕರ್ಷಕ ಆಟವಾಡಿ ಗಮನ ಸೆಳೆದರು. 16 ರೈಡ್‌ಗಳಲ್ಲಿ 16 ಅಂಕ ಗಳಿಸಿ ಪಂದ್ಯದಲ್ಲಿ ಅತಿಹೆಚ್ಚು ರೈಡ್ ಅಂಕ ಪಡೆದ ಆಟಗಾರ ಎನಿಸಿದರು. ಟೂರ್ನಿಯಲ್ಲಿ ಒಟ್ಟು 60 ಅಂಕ ಪಡೆದು, ಭರವಸೆ ಮೂಡಿಸಿದರು.
ಬುಲ್ಸ್‌ಗೆ ಜಯ
ಪ್ಲೇ-ಆಫ್ ಪ್ರವೇಶಿಸಲು ವಿಫಲವಾದ ಬೆಂಗಳೂರು ಬುಲ್ಸ್ ಗೆಲುವಿನೊಂದಿಗೆ 10ನೇ ಆವೃತ್ತಿಗೆ ಗುಡ್‌ಬೈ ಹೇಳಿತು. ಹರ್ಯಾಣ ಸ್ಟೀಲರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬುಲ್ಸ್ 00-00 ಅಂತರದಲ್ಲಿ ಜಯಿಸಿ, ಅಂಕಪಟ್ಟಿಯಲ್ಲಿ 8ನೇ ಸ್ಥಾನಿಯಾಯಿತು.
ಪ್ಲೇ-ಆಫ್ ವೇಳಾಪಟ್ಟಿ
ಪಂದ್ಯ ಮುಖಾಮುಖಿ ದಿನಾಂಕ
1ನೇ ಎಲಿಮಿನೇಟರ್ ಡೆಲ್ಲಿ-ಪಾಟ್ನಾ ಫೆ.26
2ನೇ ಎಲಿಮಿನೇಟರ್ ಹರ್ಯಾಣ-ಗುಜರಾತ್ ಫೆ.26
1ನೇ ಸೆಮೀಸ್ ಪುಣೆ- 1ನೇ ಎಲಿಮಿನೇಟರ್ ಗೆಲ್ಲುವ ತಂಡ ಫೆ.28
2ನೇ ಸೆಮೀಸ್ ಜೈಪುರ-2ನೇ ಎಲಿಮಿನೇಟರ್ ಗೆಲ್ಲುವ ತಂಡ ಫೆ.28
ಫೈನಲ್ - ಮಾ.1