ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪುಣೇರಿ ಪಲ್ಟಾನ್, ಜೈಪುರ ಪಿಂಕ್ ಪ್ಯಾಂಥರ್ಸ್ ಪ್ಲೇ-ಆಫ್ ಪ್ರವೇಶ
9ನೇ ಆವೃತ್ತಿಯ ಪಿಕೆಎಲ್ ಟೂರ್ನಿಯಲ್ಲಿ ಪುಣೇರಿ ಪಲ್ಟಾನ್, ಜೈಪುರ ತಂಡಗಳು ಪ್ಲೇ ಆಫ್ ಪ್ರವೇಶ
ಇನ್ನುಳಿದ 4 ಸ್ಥಾನಗಳಿಗಾಗಿ 7 ತಂಡಗಳ ನಡುವೆ ಪೈಪೋಟಿ
ಹೈದರಾಬಾದ್(ಡಿ.04): ಪ್ರೊ ಕಬಡ್ಡಿ 9ನೇ ಆವೃತ್ತಿಯ ಪ್ಲೇ-ಆಫ್ ಹಂತಕ್ಕೆ ಪುಣೇರಿ ಪಲ್ಟನ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಪ್ರವೇಶ ಪಡೆದಿವೆ. ಶುಕ್ರವಾರ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ ಗೆಲುವು ಸಾಧಿಸಿದ ಬಳಿಕ ಪುಣೇರಿ ಹಾಗೂ ಜೈಪುರ ತಂಡಗಳ ಪ್ಲೇ-ಆಫ್ ಪ್ರವೇಶ ಖಚಿತಗೊಂಡಿತು. ಇನ್ನು 4 ಸ್ಥಾನಗಳು ಬಾಕಿ ಇದ್ದು, ಬೆಂಗಳೂರು ಬುಲ್ಸ್ ಸೇರಿ 7 ತಂಡಗಳ ನಡುವೆ ಪೈಪೋಟಿ ಇದೆ.
ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿರುವ ಬುಲ್ಸ್, ಬಾಕಿ ಇರುವ 3 ಪಂದ್ಯಗಳಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ೨ನೇ ಸ್ಥಾನಕ್ಕೇರಿ ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಪಡೆಯಬಹುದು. ಆದರೆ ಇದು ಸಾಧ್ಯವಾಗಬೇಕಿದ್ದರೆ ಪುಣೇರಿ ಹಾಗೂ ಜೈಪುರ ತಮ್ಮ ಮುಂದಿನ ಪಂದ್ಯ ಗಳಲ್ಲಿ ಸೋಲಬೇಕಿದೆ. 3ರಿಂದ 6ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಬೇಕಾಗುತ್ತದೆ. ಶನಿವಾರ ಪುಣೇರಿ ಪಲ್ಟನ್ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 47-44 ಅಂಕಗಳ ರೋಚಕ ಗೆಲುವು ಸಾಧಿಸಿ 2ನೇ ಸ್ಥಾನದಲ್ಲೇ ಮುಂದುವರಿಯಿತು. ತಂಡಕ್ಕಿದು 13ನೇ ಗೆಲುವು. ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 52-24ರ ಅಂತರದಲ್ಲಿ ಗೆದ್ದ ತಮಿಳ್ ತಲೈವಾಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರೆ, ಬೆಂಗಾಲ್ ವಾರಿಯರ್ಸ್ ತಂಡವನ್ನು 57-31ರ ಅಂತರದಲ್ಲಿ ಬಗ್ಗುಬಡಿದ ಜೈಪುರ ಪಿಂಕ್ ಪ್ಯಾಂರ‍್ಸ್ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿತು. ಭಾನುವಾರ ಬುಲ್ಸ್‌ಗೆ ಯೋಧಾಸ್ ಎದುರಾಗಲಿದೆ.
ಲಕ್ಷ್ಯ ವಿರುದ್ಧ ವಯೋ ವಂಚನೆ ಆರೋಪ: ದೂರು!
ಬೆಂಗಳೂರು: ಭಾರತದ ನಂ.1 ಶಟ್ಲರ್ ಲಕ್ಷ್ಯ ಸೇನ್ ವಯೋ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ನಾಗಾರಾಜ್ ಎನ್ನುವವರು ಲಕ್ಷ್ಯ, ಅವರ ಕುಟುಂಬ ಹಾಗೂ ಮಾಜಿ ರಾಷ್ಟ್ರೀಯ ಕೋಚ್ ವಿಮಲ್ ಕುಮಾರ್ ವಿರುದ್ಧ ಇಲ್ಲಿನ ಹೈಗ್ರೌಂಡ್‌್ಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 21 ವರ್ಷ ಲಕ್ಷ್ಯ ಅವರ ಅಸಲಿ ವಯಸ್ಸು 24. ವಯೋಮಿತಿಯ ಟೂರ್ನಿಗಳಲ್ಲಿ ಕಣಕ್ಕಿಳಿಯಲು ಅನುಕೂಲವಾಗಲಿ ಎನ್ನುವ ಕಾರಣಕ್ಕೆ ದಾಖಲೆಗಳನ್ನು ತಿದ್ದಲಾಗಿದೆ ಎಂದು ಆರೋಪಿಸಲಾಗಿದೆ. ಲಕ್ಷ್ಯ ಅವರ ಸಹೋದರ ಚಿರಾಗ್ ಸೇನ್ ಸಹ ವಯೋ ವಂಚನೆ ನಡೆಸಿದ್ದಾರೆ. ಅವರ ಅಸಲಿ ವಯಸ್ಸು 26 ವರ್ಷ ಎಂದು ದೂರುದಾರರು ತಿಳಿಸಿದ್ದಾರೆ.
FIFA World Cup: ಕ್ವಾರ್ಟರ್ ಫೈನಲ್‌ಗೆ ನೆದರ್‌ಲೆಂಡ್ಸ್; ಬೈ ಬೈ ಅಮೆರಿಕ..!
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ವಿಮಲ್ ಕುಮಾರ್, ‘ಲಕ್ಷ್ಯ ಅವರ ಯಶಸ್ಸು ಸಹಿಸದವರು ಈ ರೀತಿ ಪಿತೂರಿ ನಡೆಸಿದ್ದಾರೆ. ವಯಸ್ಸಿನ ಪರಿಶೀಲನೆ ಮಾಡುವ ಹಕ್ಕು ಇರುವುದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಗೆ ಮಾತ್ರ. ಈ ಆರೋಪಗಳೆಲ್ಲಾ ಸುಳ್ಳು’ ಎಂದಿದ್ದಾರೆ.
ಹಾಕಿ: ಭಾರತ ವಿರುದ್ಧ ಆಸೀಸ್‌ಗೆ 5-1ರ ಜಯ
ಅಡಿಲೇಡ್: ಆರಂಭಿಕ ಮುನ್ನಡೆ ಪಡೆದ ಹೊರತಾಗಿಯೂ ರಕ್ಷಣಾ ಪಡೆಯ ವೈಫಲ್ಯದಿಂದಾಗಿ ಆಸ್ಪ್ರೇಲಿಯಾ ವಿರುದ್ಧದ 4ನೇ ಪಂದ್ಯದಲ್ಲಿ ಭಾರತ ಹಾಕಿ ತಂಡ 1-5 ಗೋಲುಗಳ ಸೋಲು ಅನುಭವಿಸಿತು. 5 ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಆತಿಥೇಯ ತಂಡ 3-1ರಲ್ಲಿ ವಶಪಡಿಸಿಕೊಂಡಿತು. 25ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಗೋಲು ಬಾರಿಸಿ ಮುನ್ನಡೆ ಒದಗಿಸಿದರು. ಆದರೆ 29, 30ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ಕಸಿದುಕೊಂಡ ಆಸೀಸ್ ಆ ಬಳಿಕ ಇನ್ನೂ 3 ಗೋಲು ಬಾರಿಸಿತು.