
ಮುಂಬೈ(ಜ.09): ಕೊನೆ 5 ನಿಮಿಷಗಳಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿದ ಬೆಂಗಳೂರು ಬುಲ್ಸ್ 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ 5ನೇ ಗೆಲುವು ಸಾಧಿಸಿದ್ದು, ಪ್ಲೇ-ಆಫ್ ರೇಸ್‌ನಲ್ಲಿ ಉಳಿದುಕೊಂಡಿದೆ. ಸೋಮವಾರ ಪಾಟ್ನಾ ಪೈರೇಟ್ಸ್ ವಿರುದ್ಧ ಬುಲ್ಸ್‌ಗೆ 35-33 ಅಂಕಗಳ ರೋಚಕ ಗೆಲುವು ಲಭಿಸಿತು. ತಂಡ 12 ಪಂದ್ಯಗಳಲ್ಲಿ 5 ಜಯ, 7 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 00ನೇ ಸ್ಥಾನದಲ್ಲಿದೆ. ಅತ್ತ ಪಾಟ್ನಾ 11ರಲ್ಲಿ 6ನೇ ಸೋಲನುಭವಿಸಿತು.
ಆರಂಭದಿಂದಲೇ ಮೇಲುಗೈ ಸಾಧಿಸಿದ ಪಾಟ್ನಾ ಪ್ರಥಮಾರ್ಧದಲ್ಲಿ 20-12 ಅಂಕಗಳಿಂದ ಮುನ್ನಡೆಯಲ್ಲಿತ್ತು. ಕೊನೆವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಪಾಟ್ನಾ ಗೆಲುವಿನ ನಿರೀಕ್ಷೆಯಲ್ಲಿತ್ತು. ಒಂದು ಹಂತದಲ್ಲಿ ಪಾಟ್ನಾ 33-23 ಅಂಕಗಳಲ್ಲಿ ಅಂತರ ಕಾಯ್ದುಕೊಂಡಿತ್ತು. ಆದರೆ ಕೊನೆ ನಾಲ್ಕೂವರೆ ನಿಮಿಷಗಳಲ್ಲಿ ಬುಲ್ಸ್ 12 ಅಂಕ ಗಳಿಸಿದರೆ, ಪಾಟ್ನಾ ಒಂದೂ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಡಿಫೆಂಡರ್‌ಗಳು ಹಾಗೂ ರೈಡರ್ ಸುಶಿಲ್ ಪಂದ್ಯದ ದಿಕ್ಕು ಬದಲಿಸಿದರು. 2 ಸೂಪರ್ ಟ್ಯಾಕಲ್, ಆಲೌಟ್ ಮೂಲಕ ಪಾಟ್ನಾವನ್ನು ಬುಲ್ಸ್ ಕಟ್ಟಿಹಾಕಿತು.
ಆಸ್ಟ್ರೇಲಿಯನ್ ಓಪನ್‌ಗೆ ರಾಫೆಲ್ ನಡಾಲ್ ಗೈರು!
ಬುಲ್ಸ್ ಪರ ಸಚಿನ್ ನರ್ವಾಲ್ ರೈಡಿಂಗ್‌ನಲ್ಲಿ 9 ಅಂಕ ಪಡೆದು ಮಿಂಚಿದರೆ, ಡಿಪೆಂಡರ್ ಸುರ್ಜಿತ್ 8 ಅಂಕ ಗಳಿಸಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.
Pro Kabaddi League ಬೆಂಗಳೂರು ಬುಲ್ಸ್ ಕಮ್‌ಬ್ಯಾಕ್‌ಗೆ ಬೆಚ್ಚಿದ ಪಾಟ್ನಾ ಪೈರೇಟ್ಸ್ #Kabbaddi #ProKabaddiLeague #BengaluruBulls https://kannada.asianetnews.com/sports/pro-kabaddi-league-bengaluru-bulls-thrilling-victory-over-patna-pirates-kvn-s6za5b
ಮುಂಬಾ ವಿರುದ್ಧ ಡೆಲ್ಲಿಗೆ ಗೆಲುವು
ಸೋಮವಾರದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದಬಾಂಗ್ ಡೆಲ್ಲಿ ತಂಡ 40-34 ಅಂಕಗಳಿಂದ ಗೆಲುವು ಸಾಧಿಸಿತು. ತವರಿನಲ್ಲಿ ಯು ಮುಂಬಾ ಸತತ ಎರಡನೇ ಸೋಲನಭವಿಸಿತು. ಟೂರ್ನಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 7ರಲ್ಲಿ ಜಯಗಳಿಸಿ 40 ಅಂಕ ಸಂಪಾದಿಸಿರುವ ಡೆಲ್ಲಿ ಅಂಕಪಟ್ಟಿಯಲ್ಲಿ 2 ಸ್ಥಾನದಲ್ಲಿದೆ. ಯು ಮುಂಬಾ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 4ರಲ್ಲಿ ಪರಾಭವಗೊಂಡಿದ್ದು, ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಟೀಂ ಇಂಡಿಯಾದ ಈ ಕ್ರಿಕೆಟಿಗರಿಗೆ ವಯಸ್ಸಾದರೂ ಹುಡುಗೀರು ಸಾಯ್ತಾರೆ!
ಇಂದಿನ ಪಂದ್ಯಗಳು
ತೆಲುಗು ಟೈಟಾನ್ಸ್-ಬೆಂಗಾಲ್ ವಾರಿಯರ್ಸ್, ರಾತ್ರಿ 8ಕ್ಕೆ
ಇಂದಿನಿಂದ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್
ಕೌಲಾಲಂಪುರ: ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭವಾಗಲಿದೆ. ವರ್ಷದ ಮೊದಲ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ರೇಸ್‌ನಲ್ಲಿ ಉಳಿಯುವ ನಿರೀಕ್ಷೆಯಲ್ಲಿ ಎಚ್.ಎಸ್.ಪ್ರಣಯ್, ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್ ಸೇರಿದಂತೆ ಪ್ರಮುಖರು ಕಣಕ್ಕಿಳಿಯಲಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ 16 ಸ್ಥಾನದಲ್ಲಿರುವ ಆಟಗಾರರಿಗೆ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಸಿಗಲಿರುವ ಕಾರಣ ಈ ಟೂರ್ನಿ ಮಹತ್ವದ್ದಾಗಿದೆ. ಪಿ.ವಿ.ಸಿಂಧು ಗಾಯದ ಕಾರಣದಿಂದ ಟೂರ್ನಿಯಲ್ಲಿ ಆಡುತ್ತಿಲ್ಲ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ-ತನಿಶಾ ಕಣಕ್ಕಿಳಿಯಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.