ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ 10ನೇ ಸೋಲಿನ ಶಾಕ್‌!

By Kannadaprabha News  |  First Published Jan 10, 2024, 10:03 AM IST

ರೈಡಿಂಗ್‌ ಹಾಗೂ ಡಿಫೆಂಡಿಂಗ್‌ನಲ್ಲಿ ಮಿಂಚಿದ ಬೆಂಗಾಲ್‌, ಟೈಟಾನ್ಸ್‌ ತಂಡವನ್ನು 3 ಬಾರಿ ಆಲೌಟ್‌ ಮಾಡಿತು. ಮೊದಲಾರ್ಧದಲ್ಲೇ 2 ಬಾರಿ ಅಲೌಟ್‌ ಆದ ಟೈಟಾನ್ಸ್‌ 17 ಅಂಕಗಳ ಹಿನ್ನಡೆ ಅನುಭವಿಸಿತು. ನಂತರ ಸ್ವಲ್ಪ ಮಟ್ಟಿಗೆ ಕಮ್‌ಬ್ಯಾಕ್‌ ಮಾಡುವ ಪ್ರಯತ್ನ ಮಾಡಿತಾದರೂ ಪ್ರಯತ್ನ ಫಲ ಕೊಡಲಿಲ್ಲ.


ಮುಂಬೈ(ಜ.10): ಕಳೆದ 6 ಪಂದ್ಯಗಳಲ್ಲಿ ಗೆಲುವಿನಿಂದ ವಂಚಿತವಾಗಿದ್ದ ಬೆಂಗಾಲ್‌ ವಾರಿಯರ್ಸ್‌ 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಮಂಗಳವಾರ ತೆಲುಗು ಟೈಟಾನ್ಸ್‌ ತಂಡವನ್ನು 46-26 ಅಂಕಗಳಿಂದ ಮಣಿಸಿತು. ಅತ್ತ ಟೈಟಾನ್ಸ್‌ ಆಡಿದ 11 ಪಂದ್ಯಗಳಲ್ಲಿ 10ನೇ ಸೋಲುಂಡಿದ್ದು, ಪ್ಲೇ-ಆಫ್‌ ಕನಸನ್ನು ಬಹುತೇಕ ಭಗ್ನಗೊಳಿಸಿದೆ.

ರೈಡಿಂಗ್‌ ಹಾಗೂ ಡಿಫೆಂಡಿಂಗ್‌ನಲ್ಲಿ ಮಿಂಚಿದ ಬೆಂಗಾಲ್‌, ಟೈಟಾನ್ಸ್‌ ತಂಡವನ್ನು 3 ಬಾರಿ ಆಲೌಟ್‌ ಮಾಡಿತು. ಮೊದಲಾರ್ಧದಲ್ಲೇ 2 ಬಾರಿ ಅಲೌಟ್‌ ಆದ ಟೈಟಾನ್ಸ್‌ 17 ಅಂಕಗಳ ಹಿನ್ನಡೆ ಅನುಭವಿಸಿತು. ನಂತರ ಸ್ವಲ್ಪ ಮಟ್ಟಿಗೆ ಕಮ್‌ಬ್ಯಾಕ್‌ ಮಾಡುವ ಪ್ರಯತ್ನ ಮಾಡಿತಾದರೂ ಪ್ರಯತ್ನ ಫಲ ಕೊಡಲಿಲ್ಲ. ಆರಂಭದಲ್ಲಿ ತೀವ್ರ ವೈಫಲ್ಯ ಅನುಭವಿಸಿದ ಪವನ್‌ ಶೆರಾವತ್‌ ದ್ವಿತೀಯಾರ್ಧದಲ್ಲಿ ಮಿಂಚಿ 11 ಅಂಕ ಗಳಿಸಿದರೂ ಗೆಲುವಿಗೆ ಸಾಕಾಗಲಿಲ್ಲ.

Tap to resize

Latest Videos

undefined

ಕಡುಬಡತನದಲ್ಲಿ ಹುಟ್ಟಿ ಕೋಟ್ಯಾಧಿಪತಿಗಳಾದ ಟೀಂ ಇಂಡಿಯಾ ಕ್ರಿಕೆಟಿಗರಿವರು..!

ಇತ್ತ ಮಣಿಂದರ್‌ ಸಿಂಗ್‌ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬೆಂಗಾಲ್‌ ವಾರಿಯರ್ಸ್‌ ಪರ ರೈಡಿಂಗ್‌ನಲ್ಲಿ ನಿತಿನ್‌ ಕುಮಾರ್‌ 9, ವಿಶ್ವಾಸ್‌ 8 ಅಂಕ ಗಳಿಸಿದರು. ಟೈಟನ್ಸ್‌ ರೈಡರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಬೆಂಗಾಲ್‌ ಡಿಫೆಂಡರ್‌ಗಳಾದ ವೈಭವ್‌ ಗರ್ಜೆ 9, ಶುಭಮ್‌ ಶಿಂಧೆ 6 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.

ಇಂದಿನ ಪಂದ್ಯಗಳು

ಯುಪಿ ಯೋಧಾಸ್‌-ತಮಿಳ್‌ ತಲೈವಾಸ್‌, ರಾತ್ರಿ 8ಕ್ಕೆ

ಯು ಮುಂಬಾ-ಹರ್ಯಾಣ ಸ್ಟೀಲರ್ಸ್‌, ರಾತ್ರಿ 9ಕ್ಕೆ

ಮಂಡ್ಯ ಓಪನ್‌: ಮನೀಶ್‌, ಸಿದ್ಧಾರ್ಥ್‌ ಪ್ರಿ ಕ್ವಾರ್ಟರ್‌ಗೆ

ಮಂಡ್ಯ: ಐಟಿಎಫ್‌ ಮಂಡ್ಯ ಓಪನ್‌ ಅಂತಾರಾಷ್ಟ್ರೀಯ ಟೆನಿಸ್‌ ಟೂರ್ನಿಯಲ್ಲಿ ಮನೀಶ್‌ ಗಣೇಶ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಮಂಗಳವಾರ ಅವರು ಪುರುಷರ ಸಿಂಗಲ್ಸ್‌ನಲ್ಲಿ ನೀರಜ್‌ ಕುಮಾರ್‌ ಯಶ್ಪಾಲ್‌ ಅವರನ್ನು 6-1, 6-1 ಸೆಟ್‌ಗಳಲ್ಲಿ ಸೋಲಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟರು. ಆದರೆ ಕರ್ನಾಟಕದ ಆದಿಲ್‌ ಆದಿಲ್‌ ಕಲ್ಯಾಣಪುರ ಮೊದಲ ಸುತ್ತಲ್ಲೇ ಸೋತು ಅಭಿಯಾನ ಕೊನೆಗೊಳಿಸಿದರು. ಅವರು ಸಿದ್ಧಾರ್ಥ್‌ ವಿಶ್ವಕರ್ಮ ವಿರುದ್ಧ 3-6, 1-6 ಸೋಲನುಭವಿಸಿದರು.

ಆಫ್ಘಾನ್ ಸರಣಿಯಿಂದ ರಾಹುಲ್ ಔಟ್: ಟಿ20 ತಂಡಕ್ಕೆ ವಾಪಾಸ್ ಆಗಲು ಏನು ಮಾಡಬೇಕು?

ಡಬಲ್ಸ್‌ನಲ್ಲಿ ಕರ್ನಾಟಕದ ಪ್ರಜ್ವಲ್‌ ದೇವ್‌ ಅವರೊಂದಿಗೆ ಕಣಕ್ಕಿಳಿದಿದ್ದ ನಿತಿನ್‌ ಕುಮಾರ್‌ ಸಿನ್ಹಾ ಹೊಟ್ಟೆ ನೋವಿನ ಕಾರಣದಿಂದಾಗಿ ಕಣದಿಂದ ನಿವೃತ್ತಿಯಾದರು. ಪರೀಕ್ಷಿತ್‌ ಸೊಮಾನಿ-ಸುರೇಶ್‌ ಕುಮಾರ್‌, ಸಾಯಿ ಕಾರ್ತಿಕ್‌ ರೆಡ್ಡಿ- ವಿಷ್ಣುವರ್ಧನ್‌ ಜೋಡಿ ಜಯ ಸಾಧಿಸಿ ಮುಂದಿನ ಸುತ್ತಿಗೇರಿವೆ. ಆದರೆ ಮನೀಶ್‌ ಗಣೇಶ್‌- ರಿಷಿ ರೆಡ್ಡಿ, ರಿಷಬ್‌ ಅಗರವಾಲ್‌-ಆದಿಲ್‌ ಕಲ್ಯಾಣಪುರ, ಪ್ರೀತಮ್‌ ಗಣೇಶ್‌-ಚಂದನ್‌ ಶಿವರಾಜ್‌, ಯಶ್‌ ಚೌರಾಸಿಯಾ-ಜಗ್ಮೀತ್‌ ಸಿಂಗ್‌ ಜೋಡಿಗಳು ಪರಾಭವಗೊಂಡವು.
 

click me!