
ಅಹಮದಾಬಾದ್(ಡಿ.02): ಬಹುನಿರೀಕ್ಷಿತ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್(ಪಿಕೆಎಲ್)ಗೆ ಅಹಮದಾಬಾದ್‌ನಲ್ಲಿ ಶನಿವಾರ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ದಿನದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಹಾಗೂ ಯುಪಿ ಯೋಧಾಸ್ ಸೆಣಸಾಡಲಿವೆ.
ಕೋವಿಡ್ ಬಳಿಕ ಈ ಬಾರಿ ಟೂರ್ನಿ ಮತ್ತೆ ಹಳೆಯ ಮಾದರಿಯಲ್ಲಿ ನಡೆಯಲಿದ್ದು, 12 ನಗರಗಳು ಆತಿಥ್ಯ ವಹಿಸಲಿವೆ. ಸದ್ಯ ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದ್ದು, 2ನೇ ವಾರ ಅಂದರೆ ಡಿ.8ರಿಂದ 13ರ ವರೆಗೆ ಬೆಂಗಳೂರಿನಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ಬಳಿಕ ಪುಣೆ (ಡಿ.15-ಡಿ.20), ಚೆನ್ನೈ (ಡಿ.22-27), ನೋಯ್ಡಾ (ಡಿ.29-ಜ.3), ಮುಂಬೈ (ಜ.5-10), ಜೈಪುರ (ಜ.12-17), ಹೈದರಾಬಾದ್ (ಜ.19-24), ಪಾಟ್ನಾ (ಜ.26-31), ಡೆಲ್ಲಿ (ಫೆ.2-7), ಕೋಲ್ಕತಾ(ಫೆ.9-14), ಪಂಚಕುಲ(ಫೆ.16-21) ಟೂರ್ನಿಗೆ ಆತಿಥ್ಯ ವಹಿಸಲಿವೆ.
ಮುಂಬೈನಲ್ಲಿ ಪಾಂಡ್ಯ ಆಗಮನದಿಂದ ಅಂತರ್ಯುದ್ಧ..! ಕ್ಯಾಪ್ಟನ್ ಆಗೋ ಬುಮ್ರಾ ಕನಸು ನುಚ್ಚುನೂರಾಯ್ತಾ..?
ಟೂರ್ನಿ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ತಂಡ ಇತರ ತಂಡಗಳ ವಿರುದ್ಧ ಲೀಗ್ ಹಂತದಲ್ಲಿ 2 ಬಾರಿ ಆಡಲಿವೆ. ಬಹುತೇಕ ದಿನ ಎರಡೆರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ರಾತ್ರಿ 8ಕ್ಕೆ, 2ನೇ ಪಂದ್ಯ 9 ಗಂಟೆಗೆ ಆರಂಭಗೊಳ್ಳಲಿದೆ.
ಇಂದಿನ ಪಂದ್ಯ: ಗುಜರಾತ್-ಟೈಟಾನ್ಸ್, ರಾತ್ರಿ 8ಕ್ಕೆ, ಯು ಮುಂಬಾ-ಯುಪಿ ಯೋಧಾಸ್, ರಾತ್ರಿ 9ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್.
ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಸೌರಭ್ ನಾಯಕ
ಬೆಂಗಳೂರು: 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ಗೂ ಮುನ್ನ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಡಿಫೆಂಡರ್ ಸೌರಭ್ ನಂದಲ್ ಅವರನ್ನು ನಾಯಕನನ್ನಾಗಿ ಘೋಷಿಸಿದೆ. ಸೌರಭ್ ಕಳೆದ 3 ಆವೃತ್ತಿಗಳಲ್ಲಿ ಬೆಂಗಳೂರು ಪರ ಆಡಿದ್ದು, ಕಳೆದ ವರ್ಷ ಉಪನಾಯಕರಾಗಿದ್ದ ಅವರನ್ನು ತಂಡ ಈ ವರ್ಷ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಂಡಿತ್ತು. ರೈಡರ್ ವಿಕಾಸ್ ಖಂಡೋಲಾ ಉಪನಾಯಕನಾಗಿ ಆಡಲಿದ್ದಾರೆ. ಡಿ.2ರಿಂದ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಬುಲ್ಸ್ ತನ್ನ ಮೊದಲ ಪಂದ್ಯವನ್ನು ಡಿ.3ರಂದು ಗುಜರಾತ್ ವಿರುದ್ಧ ಆಡಲಿದೆ.
ಈ ಸಲ ಕಪ್ ನಮ್ದೆ ಅನ್ನುತ್ತಿದ್ದಾರೆ RCB ಫ್ಯಾನ್ಸ್..! ಮ್ಯಾಕ್ಸಿ ಆರ್ಭಟ ಕಂಡು ಬೆಂಗಳೂರು ಫ್ಯಾನ್ಸ್ ಫುಲ್ ಖುಷ್..!
ಹಾಟ್‌ಸ್ಟಾರ್‌ನಲ್ಲಿ ಪ್ರೊ ಕಬಡ್ಡಿ ಪ್ರಸಾರ ಉಚಿತ
ಮುಂಬೈ: ಏಷ್ಯಾಕಪ್, ಏಕದಿನ ವಿಶ್ವಕಪ್ ಬಳಿಕ ಮುಂಬರುವ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಪ್ರಸಾರ ಮಾಡಲು ಡಿಸ್ನಿ ಸ್ಟಾರ್ ಸಂಸ್ಥೆ ನಿರ್ಧರಿಸಿದೆ. ಪ್ರೇಕ್ಷಕರು ಮೊಬೈಲ್ ಆ್ಯಪ್ ಮೂಲಕ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. 10ನೇ ಆವೃತ್ತಿಯು ಡಿ.10ರಿಂದ ಆರಂಭಗೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.