ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು; ಉದ್ಘಾಟನಾ ಪಂದ್ಯದಲ್ಲಿ ಟೈಟಾನ್ಸ್‌ಗೆ ತಮಿಳ್ ತಲೈವಾಸ್ ಚಾಲೆಂಜ್

Published : Aug 29, 2025, 10:00 AM IST
Pro Kabaddi League

ಸಾರಾಂಶ

ವಿಶಾಖಪಟ್ಟಣದಲ್ಲಿ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಗೆ ಚಾಲನೆ. 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಒಟ್ಟು 119 ಪಂದ್ಯಗಳು ನಡೆಯಲಿವೆ. ಬೆಂಗಳೂರು ಬುಲ್ಸ್ ತಂಡವು ಪುಣೇರಿ ಪಲ್ಟನ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

ವಿಶಾಖಪಟ್ಟಣಂ: ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಗೆ ಶುಕ್ರವಾರ ಇಲ್ಲಿನ ವಿಶ್ವನಾಥ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಚಾಲನೆ ದೊರೆಯಲಿದೆ. 7 ವರ್ಷಗಳ ಬಳಿಕ ನಗರದಲ್ಲಿ ಪಿಕೆಎಲ್‌ ನಡೆಯಲಿದೆ.

ಈ ಸಲವೂ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಕೆಲ ಬದಲಾವಣೆಯೊಂದಿಗೆ ಟೂರ್ನಿ ನಡೆಯಲಿದೆ. ಲೀಗ್‌ ಹಂತದಲ್ಲಿ ಈ ಬಾರಿ 108 ಪಂದ್ಯಗಳು ಇರಲಿದ್ದು, ಪ್ಲೇ-ಇನ್‌ನಲ್ಲಿ 2, ಪ್ಲೇ-ಆಫ್‌ನಲ್ಲಿ ಫೈನಲ್‌ ಸೇರಿ 7 ಪಂದ್ಯಗಳು ಇರಲಿವೆ. ಒಟ್ಟಾರೆ 119 ಪಂದ್ಯಗಳು ಈ ಆವೃತ್ತಿಯ ಚಾಂಪಿಯನ್‌ ತಂಡವನ್ನು ನಿರ್ಧರಿಸಲಿದೆ.

 

ಶುಕ್ರವಾರ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಳಿಕ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ಹಾಗೂ ತಮಿಳ್‌ ತಲೈವಾಸ್‌ ಮುಖಾಮುಖಿಯಾಗಲಿವೆ. ದಿನದ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಪುಣೇರಿ ಪಲ್ಟನ್‌ ಸವಾಲನ್ನು ಎದುರಿಸಲಿದೆ.

ವಿಶಾಖಪಟ್ಟಣಂನಲ್ಲಿ ಆ.29ರಿಂದ ಸೆ.11ರ ವರೆಗೂ ಆರಂಭಿಕ ಚರಣ ನಡೆಯಲಿದೆ. ಬಳಿಕ ಲೀಗ್‌ ಜೈಪುರಕ್ಕೆ ಕಾಲಿಡಲಿದ್ದು, ಅಲ್ಲಿ ಸೆ.12ರಿಂದ ಸೆ.28ರ ವರೆಗೂ ಪಂದ್ಯಗಳು ನಡೆಯಲಿವೆ. ಸೆ.29ರಿಂದ ಅ.10ರ ವರೆಗಿನ ಪಂದ್ಯಗಳಿಗೆ ಚೆನ್ನೈ ಆತಿಥ್ಯ ನೀಡಲಿದ್ದು, ಅ.11ರಿಂದ 23ರ ವರೆಗೂ ನವದೆಹಲಿಯಲ್ಲಿ ಪಂದ್ಯಗಳು ನಡೆಯಲಿವೆ. ಪ್ಲೇ-ಆಫ್‌, ಫೈನಲ್‌ಗೆ ಆತಿಥ್ಯ ವಹಿಸುವ ನಗರಗಳ ವಿವರ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಪ್ರತಿ ದಿನ 2 ಪಂದ್ಯಗಳು ಇರಲಿದ್ದು, ಮೊದಲ ಪಂದ್ಯ ರಾತ್ರಿ 8ಕ್ಕೆ, 2ನೇ ಪಂದ್ಯ ರಾತ್ರಿ 9ಕ್ಕೆ ಆರಂಭಗೊಳ್ಳಲಿದೆ. ಅ.15ರಿಂದ ಲೀಗ್‌ ಹಂತ ಮುಗಿಯುವ ವರೆಗೂ ಪ್ರತಿ ದಿನ 3 ಪಂದ್ಯಗಳು ಇರಲಿವೆ.

ಬೆಂಗಳೂರಿಗೆ ಮೊದಲ ಪಂದ್ಯದಲ್ಲೇ ಕಠಿಣ ಸವಾಲು

ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಈ ಬಾರಿ ಸಂಪೂರ್ಣ ಹೊಸ ಆಟಗಾರರೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ತಾರಾ ಕೋಚ್‌, ಕನ್ನಡಿಗ ಬಿ.ಸಿ.ರಮೇಶ್‌, ಕಳೆದ 2 ತಿಂಗಳಿಂದ ತಂಡವನ್ನು ವಿಶೇಷ ಶಿಬಿರದ ಮೂಲಕ ಸಿದ್ಧಗೊಳಿಸಿದ್ದಾರೆ. ಅವರು ಈ ಹಿಂದಿನ ಆವೃತ್ತಿಗಳಲ್ಲಿ ಕೋಚ್‌ ಆಗಿದ್ದ ಪುಣೇರಿ ಪಲ್ಟನ್‌ ವಿರುದ್ಧ ಬುಲ್ಸ್‌ ಶುಕ್ರವಾರ ತನ್ನ ಮೊದಲ ಪಂದ್ಯವನ್ನಾಡಲಿದೆ. ಬುಲ್ಸ್‌ ತಂಡವನ್ನು ಈ ವರ್ಷ ಅಂಕುಶ್‌ ಠಾಠಿ ಮುನ್ನಡೆಲಿದ್ದಾರೆ.

ಇಂದಿನ ಪಂದ್ಯಗಳು:

ತಲೈವಾಸ್‌ vs ಟೈಟಾನ್ಸ್‌, ರಾತ್ರಿ 8ಕ್ಕೆ, ಬುಲ್ಸ್‌ vs ಪುಣೇರಿ, ರಾತ್ರಿ 9ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌

ಇಂದಿನಿಂದ ಬಿಹಾರದಲ್ಲಿ ಹಾಕಿ ಏಷ್ಯಾಕಪ್‌ ಶುರು

ರಾಜ್‌ಗಿರ್‌(ಬಿಹಾರ): 8 ತಂಡಗಳ ನಡುವಿನ ಏಷ್ಯಾಕಪ್‌ ಹಾಕಿ ಟೂರ್ನಿ ಶುಕ್ರವಾರ ಆರಂಭಗೊಳ್ಳಲಿದೆ. ಇದರಲ್ಲಿ ಚಾಂಪಿಯನ್‌ ಆಗುವ ತಂಡ 2026ರ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಭಾರತಕ್ಕೆ ವಿಶ್ವಕಪ್‌ಗೇರಲು ಇದು ಕೊನೆಯ ಅವಕಾಶವಾಗಿದ್ದು, ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಹರ್ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ಭಾರತ ‘ಎ’ ಗುಂಪಿನಲ್ಲಿದ್ದು, ಶುಕ್ರವಾರ ಚೀನಾ ವಿರುದ್ಧ ಆಡಲಿದೆ. ಬಳಿಕ ಆ.31ಕ್ಕೆ ಜಪಾನ್‌, ಸೆ.1ಕ್ಕೆ ಕಜಕಸ್ತಾನ ವಿರುದ್ಧ ಸೆಣಸಾಡಲಿದೆ. ಗುಂಪಿನ ಅಗ್ರ-2 ತಂಡಗಳು ಸೆಮಿಫೈನಲ್‌ಗೇರಲಿದ್ದು, ಸೆ.7ಕ್ಕೆ ಫೈನಲ್‌ ನಡೆಯಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?