ಪ್ರೊ ಕಬಡ್ಡಿ ಹರಾಜು- ಯಾರು ಯಾವ ತಂಡಕ್ಕೆ ಸೇಲ್?

 |  First Published May 31, 2018, 8:05 PM IST


2018ರ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಮುಗಿದಿದೆ. 2 ದಿನಗಳ ಕಾಲ ನಡೆದ ಹರಾಜಿನಲ್ಲಿ 422 ಆಟಾಗಾರರ ಪೈಕಿ 200 ಕಬಡ್ಡಿ ಪಟುಗಳ ಹರಾಜಾಗಿದ್ದಾರೆ.


ಮುಂಬೈ(ಮೇ.31): ಆರನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದೆ. ಮುಂಬೈನಲ್ಲಿ ಎರಡು ದಿನಗಳ ಕಾಲ ನಡೆದ ಹರಾಜಿನಲ್ಲಿ ಓಟ್ಟು 422 ಕಬಡ್ಡಿ ಪಟುಗಳ ಪೈಕಿ 200 ಕಬಡ್ಡಿ ಆಟಗಾರರು ಬಿಕರಿಯಾಗಿದ್ದಾರೆ. 12 ತಂಡಗಳು ಪ್ರತಿಭಾನ್ವಿತ ಕಬಡ್ಡಿಪಟುಗಳನ್ನ ಖರೀಧಿಸಲು ಮುಗಿಬಿದ್ದರು. ಈ ಬಾರಿ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಹೆಗ್ಗಳಿಕೆ ರೈಡರ್ ಮೋನು ಗೊಯತ್ ಪಾಲಾಗಿದೆ. ಹರಿಯಾಣ ಸ್ಟೀಲರ್ಸ್ ತಂಡ ಮೋನು ಗೊಯತ್‌ಗೆ ಬರೋಬ್ಬರಿ 1.51 ಕೋಟಿ ನೀಡಿ ಖರೀದಿಸಿದೆ. 

2018ರ ಪ್ರೊ ಕಬಡ್ಡಿ ಹರಾಜಿನಲ್ಲಿ ರಾಹಲ್ ಚೌಧರಿ, ನಿತಿನ್ ತೋಮರ್, ದೀಪಕ್ ಹೂಡ ಸೇರಿದಂತೆ 6 ಕಬಡ್ಡಿಪಟುಗಳು 1 ಕೋಟಿಗೂ ಅಧಿಕ ಮೊತ್ತಕ್ಕೆ ಸೇಲಾಗಿದ್ದಾರೆ. ಹಲವು ಆಟಗಾರರು ಹರಾಜಿನಲ್ಲಿ ಬಿಕರಿಯಾಗದೆ ಅಚ್ಚರಿ ಮೂಡಿಸಿದರು. 

Tap to resize

Latest Videos

ಈ ಬಾರಿಯ ಹರಾಜಿನಲ್ಲಿ ಕರ್ನಾಟಕದ ಆಟಗಾರರು ಭರ್ಜರಿ ಮೊತ್ತಕ್ಕೆ ಸೇಲಾಗಿದ್ದಾರೆ. ಕನ್ನಡಿಗ ಪ್ರಶಾಂತ್ ಕುಮಾರ್ ರೈ 79 ಲಕ್ಷ ರೂಪಾಯಿಗೆ ಯುಪಿ ಯೋಧ ತಂಡಕ್ಕೆ ಸೇಲಾದರು.  ಬೆಂಗಳೂರು ಬುಲ್ಸ್  ಡಿಫೆಂಡರ್ ನಿತೀಶ್ ಬಿಆರ್‌ ಹಾಗು ಆನಂದ್‌ಗೆ 8 ಲಕ್ಷ ನೀಡಿ  ಖರೀದಿಸಿತು.

ಕೋಟಿ ರೂಪಾಯಿಗೆ ಸೇಲಾದ ಕಬಡ್ಡಿಪಟುಗಳು:

ಆಟಾಗರ ತಂಡ ಮೊತ್ತ
ಮೋನು ಗೊಯತ್ ಹರಿಯಾಣ ಸ್ಟೀಲರ್ಸ್ 1.51 ಕೋಟಿ
ರಾಹುಲ್ ಚೌಧರಿ ತೆಲುಗು ಟೈಟಾನ್ಸ್ 1.29 ಕೋಟಿ
ದೀಪಕ್ ಹೂಡ ಜೈಪುರ್ ಪಿಂಕ್ ಪ್ಯಾಂಥರ್ಸ್    1.15 ಕೋಟಿ
ನಿತಿನ್ ತೋಮರ್  ಪುಣೇರಿ ಪಲ್ಟಾನ್  1.15 ಕೋಟಿ
ರಿಶಾಂಕ್ ದೇವಾಡಿಗ ಯುಪಿ ಯೋಧ  1.12 ಕೋಟಿ
ಫಝಲ್ ಅಟ್ರಾಟಲಿ  ಯು ಮುಂಬಾ 1 ಕೋಟಿ

              
ಬೆಂಗಳೂರು ಬುಲ್ಸ್ ಖರೀಧಿಸಿದ ಆಟಗಾರರು:

ಪವನ್ ಕುಮಾರ್ 52.8 ಲಕ್ಷ
ಮಹೇಂದ್ರ ಸಿಂಗ್  40 ಲಕ್ಷ
ಕಾಶಿಲಿಂಗ್ ಅಡ್ಕೆ 32 ಲಕ್ಷ
ಜಸ್ಮೆರ್ ಸಿಂಗ್ ಗುಲಿಯಾ 12 ಲಕ್ಷ
ರಾಜುಲಾಲ್ ಚೌಧರಿ  8.8 ಲಕ್ಷ
ಡಾಂಗ್ ಜು ಹಾಂಗ್  8 ಲಕ್ಷ
ಜಿಯಿಂಗ್ ಟೆ ಕಿಮ್  8 ಲಕ್ಷ
ಸಂದೀಪ್  8 ಲಕ್ಷ
ಜವಾಹರ್ ವಿವೇಕ್  8 ಲಕ್ಷ
ಮಹೇಶ್ ಮಾರುತಿ ಎಮ್  8 ಲಕ್ಷ
ಮಹೇಂದ್ರ ಸಿಂಗ್ ಢಾಕ  8 ಲಕ್ಷ
ನಿತೀಶ್ ಬಿಆರ್  8 ಲಕ್ಷ
ಅನಿಲ್  8 ಲಕ್ಷ
ಆನಂದ್ ವಿ  8 ಲಕ್ಷ
ರೋಹಿತ್  8 ಲಕ್ಷ

 

click me!