
ನವದೆಹಲಿ(ಮೇ.22): ಐದನೇ ಆವೃತ್ತಿಯ ಪ್ರೊ ಕಬಡ್ಡಿಗೆ ಮೊದಲ ದಿನ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ನಿತಿನ್ ತೋಮರ್ 93 ಲಕ್ಷ ರುಪಾಯಿಗೆ ಉತ್ತರ ಪ್ರದೇಶದ ಪಾಲಾಗಿದ್ದಾರೆ. ಈ ಮೂಲಕ ನಿತಿನ್ ತೋಮರ್ ಪ್ರೊ-ಕಬಡ್ಡಿ ಇತಿಹಾಸದಲ್ಲೇ ಗರಿಷ್ಠ ಮೊತ್ತ ಪಡೆದ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾದರರು.
ಇಲ್ಲಿನ ಖಾಸಗಿ ಹೋಟೆಲ್'ನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 4 ಹೊಸ ತಂಡಗಳು ಸೇರಿದಂತೆ, ಎಲ್ಲಾ 12 ತಂಡಗಳು ಹರಾಜಿನಲ್ಲಿ ಪಾಲ್ಗೊಂಡಿದ್ದವು. ಮೊದಲ ದಿನ 70 ಆಟಗಾರರು ಹರಾಜಿನಲ್ಲಿ ಪಾಲ್ಗೊಂಡಿದ್ದರು, ಆ ಪೈಕಿ ಐವರು ವಿದೇಶಿಗರು ಸೇರಿದಂತೆ ಭಾರತದ ಎಲೈಟ್ ಆಟಗಾರರ ಹರಾಜು ಮಾತ್ರ ನಡೆಸಲಾಯಿತು.
ಈ ಬಾರಿ ಪ್ರಾಂಚೈಸಿಗಳು ಹರಾಜಿನಲ್ಲಿ ಆಲ್ರೌಂಡರ್'ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ವಿಶೇಷವೆನಿಸಿತು. ಇನ್ನು ಜಾನ್ ಕಮ್ ಲೀ 80 ಲಕ್ಷ ರುಪಾಯಿಗಳಿಗೆ ಹರಾಜಾಗುವ ಮೂಲಕ ಎಲ್ಲರ ಗಮನ ಸೆಳೆದರು. ಇನ್ನು ರೋಹಿತ್ ಕುಮಾರ್ 81 ಲಕ್ಷ ರುಪಾಯಿಗೆ ಬೆಂಗಳೂರು ಬುಲ್ಸ್ ಪಾಲಾ
ಬುಲ್ಸ್ ಸೇರಿದ ಪೆಹಲ್: ಪ್ರೊ-ಕಬಡ್ಡಿಯ ಅತ್ಯುತ್ತಮ ಡಿಫೆಂಡರ್‌ಗಳಲ್ಲಿ ಒಬ್ಬರಾದ ರವೀಂದರ್ ಪೆಹಲ್ ಬೆಂಗಳೂರು ಬುಲ್ಸ್ ತಂಡದ ಪರ ಆಡಲಿದ್ದಾರೆ. ಆಲ್ರೌಂಡರ್‌ಗಳ ಖರೀದಿಗೆ ಉತ್ಸಾಹ ತೋರದ ಬುಲ್ಸ್, ರವೀಂದರ್‌ಗೆ ಬರೋಬ್ಬರಿ 50 ಲಕ್ಷ ರುಪಾಯಿ ನೀಡಿ ಖರೀದಿಸಿತು.
ಬೆಂಗಳೂರು ಬುಲ್ಸ್ ಖರೀದಿಸಿದ ಆಟಗಾರರು
ರವೀಂದರ್ ಪೆಹಲ್ - ಡಿಫೆಂಡರ್
ಸುಮಿತ್ ಸಿಂಗ್ - ರೈಡರ್
ಹರೀಶ್ ನಾಯ್ಕ್ - ರೈಡರ್
ಕನ್ನಡಿಗ ಜೀವ ಕುಮಾರ್'ಗೆ 52 ಲಕ್ಷ
ಕರ್ನಾಟಕದ ಆಟಗಾರ ಜೀವ ಕುಮಾರ್ ಅವರನ್ನು ಉತ್ತರ ಪ್ರದೇಶ ತಂಡ 52 ಲಕ್ಷ ರುಪಾಯಿಗಳನ್ನು ನೀಡಿ ಖರೀದಿಸಿದೆ. ಹಿಂದಿನ ಆವೃತ್ತಿಗಳಲ್ಲಿ ಯು ಮುಂಬಾ ತಂಡದಲ್ಲಿ ಗುರುತಿಸಿಕೊಂಡಿದ್ದ ಡಿಫೆಂಡರ್ ಜೀವ ಕುಮಾರ್ ಕರ್ನಾಟಕದ ಪರ ಮೊದಲ ದಿನದ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎನಿಸಿದ್ದಾರೆ.
ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಭಾರತದ ಅಗ್ರ ಆಟಗಾರರು
ಆಟಗಾರ ಮೊತ್ತ(ಲಕ್ಷಗಳಲ್ಲಿ) ತಂಡ
ನಿತಿನ್ ತೋಮರ್ 93.00 ಉ.ಪ್ರದೇಶ
ಮನ್ಜೀತ್ ಚಿಲ್ಲಾರ್ 75.50 ಜೈಪುರ
ಸುರ‌್ಜೀತ್ ಸಿಂಗ್ 73.00 ಕೋಲ್ಕತಾ
ರಾಜೇಶ್ ನರ್ವಾಲ್ 69.00 ಉ.ಪ್ರದೇಶ
ಸಂದೀಪ್ ನರ್ವಾಲ್ 66.00 ಪುಣೆ
ಅಮಿತ್ ಹೂಡಾ 63.00 ಚೆನ್ನೈ
ಜೀವ ಕುಮಾರ್ 52.00 ಉ.ಪ್ರದೇಶ
ಕುಲ್ದೀಪ್ ಸಿಂಗ್ 51.50 ಮುಂಬೈ
ಜಸ್ವೀರ್ ಸಿಂಗ್ 51.00 ಜೈಪುರ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.