PKL7: ತಮಿಳ್ ತಲೈವಾಸ್ ವಿರುದ್ಧ ಮುಗ್ಗರಿಸಿದ ತೆಲುಗು ಟೈಟಾನ್ಸ್!

By Web Desk  |  First Published Jul 21, 2019, 9:34 PM IST

ಪ್ರೊ ಕಬಡ್ಡಿ ಟೂರ್ನಿಯಲ್ಲಿ ತೆಲುಗು ಟೈಟಾನ್ಸ್ ಹಾಗೂ ತಮಿಳ್ ತಲೈವಾಸ್ ನಡುವಿನ ಹೋರಾಟ ತವರಿನ ಅಭಿಮಾನಿಗಳಿಗೆ ಸಿಹಿ-ಕಹಿ ನೀಡಿದೆ. ತೆಲುಗು ತಂಡದ ದಿಟ್ಟ ಹೋರಾಟ ತವರಿನ ಅಭಿಮಾನಿಗಳಿಗೆ ಖುಷಿ ನೀಡಿದರೆ, ಫಲಿತಾಂಶ ಬೇಸರ ತರಿಸಿದೆ.


ಹೈದರಾಬಾದ್(ಜು.21): ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಎರಡನೇ ದಿನ ತೆಲುಗು ಟೈಟಾನ್ಸ್ ನಿರಾಸೆ ಅನುಭವಿಸಿದೆ. ತವರಿನ ಅಭಿಮಾನಿಗಳ ಅಭೂತಪೂರ್ವ ಬೆಂಬಲದ ಹೊರತಾಗಿಯೂ ತೆಲುಗು ಟೈಟಾನ್ಸ್ ಗೆಲುವಿನ ನಗೆ ಬೀರಲಿಲ್ಲ. ತಮಿಳ್ ತಲೈವಾಸ್ ವಿರುದ್ದ ತೆಲುಗು  26-39 ಅಂಕಗಳ ಅಂತರದಲ್ಲಿ ಸೋಲು ಕಂಡಿತು.

ಮೊದಲಾರ್ಧದ ಆರಂಭದಲ್ಲೇ ತೆಲುಗು ಹಿಂದಿಕ್ಕಿದ ತಮಿಳ್ ತಲೈವಾಸ್ ಮುನ್ನಡೆ ಕಾಯ್ದುಕೊಂಡಿತು. ಪಂದ್ಯ ಆರಂಭಗೊಂಡು 8ನೇ ನಿಮಿಷದ ಮುಕ್ತಾಯಕ್ಕೆ ತೆಲುಗು ಟೈಟಾನ್ಸ್ 5-5 ಅಂಕಗಳಿಂದ ಸಮಬಲಗೊಳಿಸಿ ನಿಟ್ಟುಸಿರು ಬಿಟ್ಟಿತು. ಆದರೆ ಅಷ್ಟೇ ವೇಗದಲ್ಲಿ ಮುನ್ನಡೆ ಪಡೆದುಕೊಂಡ ತಮಿಳ್ ತಲೈವಾಸ್ ಮಿಂಚಿನ ಆಟ ಪ್ರದರ್ಶಿಸಿತು.

Tap to resize

Latest Videos

ಫಸ್ಟ್ ಹಾಫ್ ಅಂತ್ಯದಲ್ಲಿ ತೆಲುಗು ಟೈಟಾನ್ಸ್ 20-10 ಅಂಕಗಳ ಮುನ್ನಡೆ ಸಾಧಿಸಿತು. ಇನ್ನು ದ್ವಿತಿಯಾರ್ಧದಲ್ಲೂ ತೆಲುಗು ಟೈಟಾನ್ಸ್ ಮುನ್ನಡೆ ಪಡಯಲಿಲ್ಲ. ಬದಲಾಗಿ ಹಿನ್ನಡೆ ಅಂತರ ಹೆಚ್ಚಾಯಿತು. ತೆಲುಗು ಟೈಟಾನ್ಸ್ ಪ್ರಯತ್ನಗಳೆಲ್ಲಾ ವಿಫಲವಾಯಿತು. ಅಂತ್ಯದಲ್ಲಿ ತಮಿಳ್ ತಲೈವಾಸ್ 39-26 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

click me!