
ಚೆನ್ನೈ(ಆ.17): ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೆ ಘರ್ಜಿಸಿದೆ. ಸಾಂಪ್ರದಾಯಿಕ ಎದುರಾಳಿ ತಮಿಲ್ ತಲೈವಾಸ್ ವಿರುದ್ಧದ ಹೋರಾಟದಲ್ಲಿ ಬೆಂಗಳೂರು 32-21 ಅಂಕಗಳ ಮೂಲಕ ಭರ್ಜರಿ ಗೆಲುವು ಸಾಧಿಸಿತು. ತಮಿಳು ಆಕ್ರಮಣಕಾರಿ ಆಟಕ್ಕೆ ಬ್ರೇಕ್ ಹಾಕಿದ ಬೆಂಗಳೂರು ದಿಟ್ಟ ತಿರುಗೇಟು ನೀಡಿತು. ಇದರೊಂದಿಗೆ ಹಾಲಿ ಚಾಂಪಿಯನ್ ಬೆಂಗಳೂರು ಈ ಬಾರಿಯೂ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಫಸ್ಟ್ ಹಾಫ್ ಆರಂಭದಲ್ಲೇ ಬೆಂಗಳೂರು ಅಬ್ಬರಿಸಿತು. ಆರಂಭಿಕಕ 5 ನಿಮಷದಲ್ಲಿ ಬೆಂಗಳೂರು ಅಂಕ ಬಾಚಿಕೊಂಡರೆ, ಇತ್ತ ತಮಿಳ್ ತಲೈವಾಸ್ ಒಂದು ಅಂಕವನ್ನೂ ಗಳಿಸಲಿಲ್ಲ. 7-0 ಮುನ್ನಡೆ ಸಾಧಿಸಿದ ಬೆಂಗಳೂರು 6ನೇ ನಿಮಿಷದಲ್ಲಿ ತಮಿಳ್ ತಲೈವಾಸ್ ಆಲೌಟ್ ಮಾಡಿತು. ಈ ಮೂಲಕ 10-1 ಅಂಕಗಳ ಮುನ್ನಡೆ ಪಡೆದುಕೊಂಡಿತು. ಮೊದಲಾರ್ಧದ ಅಂತ್ಯದ ವೇಳೆ ತಮಿಳ್ ತಲೈವಾಸ್ ಚುರುಕಿನ ಆಟವಾಡಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!
ಅಷ್ಟರಲ್ಲೇ ಬೆಂಗಳೂರು ಭಾರಿ ಮುನ್ನಡೆ ಪಡೆದುಕೊಂಡಿತ್ತು. ಹೀಗಾಗಿ ಬುಲ್ಸ್ 17-10 ಅಂಕದೊಂದಿಗೆ ಮೊದಲಾರ್ಧ ಅಂತ್ಯಗೊಳಿಸಿತು. ಇನ್ನು ಸೆಕೆಂಡ್ ಹಾಫ್‌ನಲ್ಲಿ ಬೆಂಗಳೂರು ಹೋರಾಟ ಮುಂದುವರಿಸಿತು. ಇತ್ತ ತಮಿಲ್ ತಲೈವಾಸ್ ಮುನ್ನಡೆಗಾಗಿ ಪ್ರಯತ್ನ ಮಾಡಿದರೂ ಯಾವುದೂ ಕೈಗೂಡಲಿಲ್ಲ. ಪಂದ್ಯ ಮುಕ್ತಾಯದ ವೇಳೆ ಬೆಂಗಳೂರುು 32-21 ಅಂಕಗಳಿಂದ ಮುನ್ನಡೆ ಸಾಧಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.