
ರಾಜ್‌ಕೋಟ್(ಅ.03]: ವೆಸ್ಟ್‌ಇಂಡೀಸ್ ವಿರುದ್ಧ ಗುರುವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ವಿಶ್ವಾಸದಲ್ಲಿರುವ ಪೃಥ್ವಿ ಶಾಗೆ ಭಾರತದ ಉಪನಾಯಕ ಅಜಿಂಕ್ಯ ರಹಾನೆ ಸಲಹೆ ನೀಡಿದ್ದಾರೆ.
‘ಪೃಥ್ವಿಗೆ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಿದೆ. ಬಹಳ ವರ್ಷಗಳಿಂದ ಅವರ ಆಟವನ್ನು ನೋಡಿದ್ದೇನೆ. ನಾವಿಬ್ಬರು ಒಟ್ಟಿಗೆ ಅಭ್ಯಾಸ ನಡೆಸುತ್ತಿದ್ದೆವು. ಅವರೊಬ್ಬ ಸ್ಫೋಟಕ ಆರಂಭಿಕ. ಭಾರತ ‘ಎ’ ತಂಡದ ಪರ ಉತ್ತಮವಾಗಿ ಆಡಿದ್ದಾರೆ. ಮುಂಬೈ ತಂಡದಲ್ಲಿ ಹೇಗೆ ಆಡುತ್ತಿದ್ದರೋ ಅದೇ ರೀತಿಯ ಆಟವನ್ನು ಇಲ್ಲಿಯೂ ಮುಂದುವರಿಸು ಎಂದು ಪೃಥ್ವಿಗೆ ಹೇಳಲು ಇಚ್ಛಿಸುತ್ತೇನೆ’ ಎಂದು ರಹಾನೆ ಹೇಳಿದ್ದಾರೆ. ದೇಸಿ ಕ್ರಿಕೆಟ್‌ನಲ್ಲಿ ರಹಾನೆ ಹಾಗೂ ಪೃಥ್ವಿ ಶಾ ಒಟ್ಟಿಗೆ ಮುಂಬೈ ಪರ ಆಡುತ್ತಾರೆ.
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಪೃಥ್ವಿ ಶಾ, ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್’ಡೆವಿಲ್ಸ್ ಪರ 9 ಪಂದ್ಯಗಳನ್ನಾಡಿ 245 ರನ್ ಬಾರಿಸಿದ್ದರು. ವೆಸ್ಟ್’ಇಂಡೀಸ್ ವಿರುದ್ಧದ ಸರಣಿಗೆ ಕನ್ನಡಿಗ ಮಯಾಂಕ್ ಅಗರ್’ವಾಲ್ ಹಾಗೂ ಪೃಥ್ವಿ ಶಾ ಆಯ್ಕೆಯಾಗಿದ್ದು ಮೊದಲ ಪಂದ್ಯದಲ್ಲಿ ಈ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.