5ನೇ ಪಂದ್ಯ ವಿರಾಟ್ ಕೊಹ್ಲಿ ಪಡೆಗೆ ಕಂಟಕ..! ಗೆದ್ದರೆ ಹೊಸ ಇತಿಹಾಸ..!

By Suvarna Web DeskFirst Published Feb 12, 2018, 6:18 PM IST
Highlights

ಈ ಮೈದಾನದಲ್ಲಿ ಈ ಮೊದಲು ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್ ಹಾಗೂ ಎಂ.ಎಸ್. ಧೋನಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ದುರುದೃಷ್ಟಕರವೆಂದರೆ ಈ 4 ಪಂದ್ಯಗಳಲ್ಲಿ ಟೀಂ ಇಂಡಿಯಾ ಒಮ್ಮೆಯೂ 200 ರನ್'ಗಳ ಗಡಿ ದಾಟಿಲ್ಲ. ಅಜರುದ್ದೀನ್ ನೇತೃತ್ವದಲ್ಲಿ ಭಾರತ 147 ರನ್ ಬಾರಿಸಿತ್ತು. ಆ ಪಂದ್ಯವನ್ನು ಹರಿಣಗಳ ಪಡೆ 6 ವಿಕೆಟ್'ಗಳ ಜಯ ದಾಖಲಿಸಿತ್ತು.

ಫೋರ್ಟ್ ಎಲಿಜಬೆತ್(ಫೆ.12): ದಕ್ಷಿಣ ಆಫ್ರಿಕಾ ವಿರುದ್ಧ ಪಿಂಕ್ ಒನ್'ಡೇ ಪಂದ್ಯದಲ್ಲಿ ಸೋತು ಅಲ್ಪ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾಗೆ ಈಗ ಇತಿಹಾಸದ ಕಂಟಕ ಎದುರಾಗಿದೆ.

ಹೌದು, ಫೆ.13ರಂದು ಫೋರ್ಟ್ ಎಲಿಜಬೆತ್ ನಡೆಯಲಿರುವ 5ನೇ ಏಕದಿನ ಪಂದ್ಯ ವಿರಾಟ್ ಕೊಹ್ಲಿ ಪಡೆಗೆ ನಿಜಕ್ಕೂ ಅಗ್ನಿ ಪರೀಕ್ಷೆಯಾಗಲಿದೆ. ಯಾಕೆಂದರೆ ಈ ಮೈದಾನದಲ್ಲಿ ಒಮ್ಮೆಯೂ ಟೀಂ ಇಂಡಿಯಾ ಜಯದ ಸವಿಯುಂಡಿಲ್ಲ. ಒಂದು ವೇಳೆ ವಿರಾಟ್ ಕೊಹ್ಲಿ ಪಡೆ ಜಯ ಸಾಧಿಸಿದರೆ, ಸರಣಿ ಜಯದೊಂದಿಗೆ, ಹೊಸ ದಾಖಲೆಯೂ ವಿರಾಟ್ ಕೊಹ್ಲಿ ಪಡೆ ನಿರ್ಮಿಸಿದಂತಾಗುತ್ತದೆ.

ಈ ಮೈದಾನದಲ್ಲಿ ಈ ಮೊದಲು ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್ ಹಾಗೂ ಎಂ.ಎಸ್. ಧೋನಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ದುರುದೃಷ್ಟಕರವೆಂದರೆ ಈ 4 ಪಂದ್ಯಗಳಲ್ಲಿ ಟೀಂ ಇಂಡಿಯಾ ಒಮ್ಮೆಯೂ 200 ರನ್'ಗಳ ಗಡಿ ದಾಟಿಲ್ಲ. ಅಜರುದ್ದೀನ್ ನೇತೃತ್ವದಲ್ಲಿ ಭಾರತ 147 ರನ್ ಬಾರಿಸಿತ್ತು. ಆ ಪಂದ್ಯವನ್ನು ಹರಿಣಗಳ ಪಡೆ 6 ವಿಕೆಟ್'ಗಳ ಜಯ ದಾಖಲಿಸಿತ್ತು.

ಇದೀಗ ಶಿಖರ್ ಧವನ್, ಕೊಹ್ಲಿ, ಧೋನಿ ಅವರಂತಹ ದಿಗ್ಗಜ ಬ್ಯಾಟ್ಸ್'ಮನ್'ಗಳನ್ನೊಳಗೊಂಡಿರುವ ಟೀಂ ಇಂಡಿಯಾ ಹಳೆಯ ಇತಿಹಾಸ ಅಳಿಸಿ ಹಾಕಿ ಹೊಸ ದಾಖಲೆ ಬರೆಯುತ್ತಾ ಕಾದು ನೋಡಬೇಕಿದೆ...  

click me!