ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಇಂದು ಪ್ರಧಾನಿ ಮೋದಿ ಚಾಲ​ನೆ

By Kannadaprabha News  |  First Published May 25, 2023, 9:21 AM IST

ಇಂದು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಮೂರನೇ ಆವೃತ್ತಿಯ ಖೇಲೋ ವಿವಿ ಗೇಮ್ಸ್‌ಗೆ ಉತ್ತರ ಪ್ರದೇಶ ಆತಿಥ್ಯ
ಈ ಗೇಮ್ಸ್‌ನಲ್ಲಿ ಸುಮಾರು 4750ಕ್ಕೂ ಅಥ್ಲೀ​ಟ್ಸ್‌ ಭಾಗಿ


ಲಖ​ನೌ(ಮೇ.25): 3ನೇ ಆವೃ​ತ್ತಿಯ ಖೇಲೋ ಇಂಡಿಯಾ ಯುನಿ​ವ​ರ್ಸಿಟಿ ಗೇಮ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರು​ವಾರ ಚಾಲನೆ ನೀಡ​ಲಿ​ದ್ದಾರೆ. ಉತ್ತರ ಪ್ರದೇ​ಶದ ನಾಲ್ಕು ನಗ​ರ​ಗ​ಳಲ್ಲಿ ನಡೆ​ಯ​ಲಿ​ರುವ ಕೂಟವನ್ನು ಸಂಜೆ 7 ಗಂಟೆಗೆ ಮೋದಿ ಅವರು ವಿಡಿಯೋ ಕಾನ್ಫ​ರೆನ್ಸ್‌ ಮೂಲ​ಕ ಉದ್ಘಾ​ಟಿ​ಸ​ಲಿ​ದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿ​ಸಿದೆ.

ಕ್ರೀಡಾ​ಕೂ​ಟ​ದಲ್ಲಿ 200ಕ್ಕೂ ಹೆಚ್ಚು ಯುನಿ​ವ​ರ್ಸಿ​ಟಿ​ಗಳ 4750ರಷ್ಟುಅಥ್ಲೀ​ಟ್‌​ಗಳು ಪಾಲ್ಗೊ​ಳ್ಳ​ಲಿದ್ದು, 21 ಕ್ರೀಡೆ​ಗಳು ನಡೆ​ಯ​ಲಿವೆ. ವಾರಾಣಸಿ, ಗೋರ​ಖ್‌​ಪುರ, ಲಖನೌ ಹಾಗೂ ಗೌತಮ ಬುದ್ಧ ನಗ​ರ​ಗಳು ಕೂಟಕ್ಕೆ ಆತಿಥ್ಯ ವಹಿ​ಸ​ಲಿವೆ. ಜೂ.3ರಂದು ವಾರ​ಣಾ​ಸಿ​ಯಲ್ಲಿ ಕ್ರೀಡಾ​ಕೂಟ ಸಮಾ​ಪ್ತಿ​ಗೊ​ಳ್ಳ​ಲಿ​ದೆ. ಕಬಡ್ಡಿ ಸ್ಪರ್ಧೆಯು ಮೇ 23ರಂದೇ ಆರಂಭ​ಗೊಂಡಿದ್ದು, ಫುಟ್ಬಾಲ್‌, ಟೆನಿಸ್‌, ಟೇಬಲ್‌ ಟೆನಿಸ್‌, ವಾಲಿ​ಬಾಲ್‌, ಬಾಸ್ಕೆ​ಟ್‌​ಬಾಲ್‌ ಸೇರಿ​ದಂತೆ ಕೆಲ ಕ್ರೀಡೆ​ಗಳು ಬುಧ​ವಾರ ಆರಂಭ​ಗೊಂಡವು.

Tap to resize

Latest Videos

2020ರಲ್ಲಿ ಮೊದಲ ಆವೃ​ತ್ತಿಯ ಕ್ರೀಡಾ​ಕೂಟ ಒಡಿ​ಶಾ​ದಲ್ಲಿ ನಡೆ​ದಿತ್ತು. ಚಂಡೀ​ಗ​ಢದ ಪಂಜಾಬ್‌ ವಿವಿ ಚಾಂಪಿ​ಯನ್‌ ಆಗಿ​ತ್ತು. ಕಳೆದ ವರ್ಷ 2ನೇ ಆವೃತ್ತಿ ಬೆಂಗ​ಳೂ​ರಿನ ಜೈನ್‌ ವಿವಿ​ಯಲ್ಲಿ ಆಯೋ​ಜಿ​ಸ​ಲಾ​ಗಿ​ತ್ತು. ಆತಿ​ಥೇಯ ವಿವಿ ಸಮಗ್ರ ಪ್ರಶಸ್ತಿ ಗೆದ್ದಿ​ತ್ತು.

ಅಥ್ಲೆಟಿಕ್ಸ್‌: ಗ್ರೀಸ್‌ನಲ್ಲಿ ಚಿನ್ನ ಗೆದ್ದ ಶ್ರೀಶಂಕರ್‌

ಅಥೆನ್ಸ್‌: ಗ್ರೀಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಕೂಟದ ಪುರುಷರ ಲಾಂಗ್‌ ಜಂಪ್‌ನಲ್ಲಿ ಭಾರತದ ಶ್ರೀಶಂಕರ್‌ ಮುರಳಿ ಚಿನ್ನದ ಪದಕ ಜಯಿಸಿದ್ದಾರೆ. 8.18 ಮೀ. ದೂರಕ್ಕೆ ನೆಗೆದ ಶ್ರೀಶಂಕರ್‌, ಭಾರತದವರೇ ಆದ ಜೆಸ್ವಿನ್‌ ಆ್ಯಡ್ರಿನ್‌ರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. 

ATP Rankings: ನೋವಾಕ್‌ ಜೋಕೋವಿಚ್‌ರನ್ನು ಹಿಂದಿಕ್ಕಿದ ಅಲ್ಕರಜ್‌ ನಂ.1!

ಸಮಾಧಾನಕರ ಪ್ರದರ್ಶನ ತೋರಿದ ಜೆಸ್ವಿನ್‌ 7.85 ಮೀ. ದೂರಕ್ಕೆ ನೆಗೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. 7.80 ಮೀ. ದೂರಕ್ಕೆ ನೆಗೆದ ಆಸ್ಪ್ರೇಲಿಯಾದ ಜಲೆನ್‌ ರಕ್ಕೆರ್‌ಗೆ ಕಂಚಿನ ಪದಕ ದೊರೆಯಿತು. ಶ್ರೀಶಂಕರ್‌ ಕಳೆದ ವರ್ಷವೂ ಚಿನ್ನದ ಪದಕ ಜಯಿಸಿದ್ದರು. ಅವರು ತಮ್ಮ ವೃತ್ತಿಬದುಕಿನ 2ನೇ ಶ್ರೇಷ್ಠ ನೆಗೆತವನ್ನು(8.31 ಮೀ.) ಈ ಕೂಟದಲ್ಲಿ ದಾಖಲಿಸಿದ್ದರು.

ವಿಶ್ವ ಟೇಬಲ್‌ ಟೆನಿಸ್‌: ಭಾರ​ತದ ಸವಾಲು ಅಂತ್ಯ

ಡರ್ಬನ್‌: ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರ​ತೀಯರ ಸವಾ​ಲು ಅಂತ್ಯ​ಗೊಂಡಿದೆ. ಬುಧ​ವಾರ ತಾರಾ ಆಟಗಾರ್ತಿ, ವಿಶ್ವ ರ‍್ಯಾಂಕಿಂಗ್‌‌​ನಲ್ಲಿ 39ನೇ ಸ್ಥಾನ​ದ​ಲ್ಲಿ​ರು​ವ ಮನಿಕಾ ಬಾತ್ರಾ ಮಹಿಳಾ ಸಿಂಗಲ್ಸ್‌ 3ನೇ ಸುತ್ತಿ​ನ​ಲ್ಲಿ ವಿಶ್ವ ನಂ.13 ಪ್ಯುರ್ಟೊರಿಕೋದಾ ಆ್ಯಡ್ರಿ​ಯಾನಾ ಡಿಯಾಜ್‌ ವಿರುದ್ಧ 11-6, 10-12, 9-11, 11-6, 11-13, 3-11 ಅಂತ​ರ​ದಲ್ಲಿ ಸೋತು ಹೊರ​ಬಿ​ದ್ದರು. 

ಇದೇ ವೇಳೆ ಪುರು​ಷರ ಡಬ​ಲ್ಸ್‌​ ಪ್ರಿ ಕ್ವಾರ್ಟರ್‌ ಫೈನ​ಲ್‌​ನ​ಲ್ಲಿ ಶರತ್‌ ಕಮ​ಲ್‌-ಜಿ.ಸ​ತ್ಯನ್‌ ಜೋಡಿ ಇಂಗ್ಲೆಂಡ್‌ನ ಪಾಲ್‌ ಡ್ರಿಂಕ್‌​ಹಾ​ಲ್‌-ಲಿಯಾಮ್‌ ಪಿಚ್‌​ಫೋರ್ಡ್‌ ವಿರುದ್ಧ 1-3 ಅಂತ​ರ​ದಲ್ಲಿ ಸೋಲ​ನು​ಭ​ವಿ​ಸಿತು. ವಿಶ್ವ ರ‍್ಯಾಂಕಿಂಗ್‌‌ನಲ್ಲಿ 6ನೇ ಸ್ಥಾನ​ದ​ಲ್ಲಿ​ರುವ ಮನಿ​ಕಾ-ಸತ್ಯನ್‌ ಜೋಡಿ ಮಿಶ್ರ ಡಬ​ಲ್ಸ್‌​ನ ಪ್ರಿ ಕ್ವಾರ್ಟರ್‌ನಲ್ಲಿ ಸ್ವೀಡ​ನ್‌ನ ಕ್ರಿಸ್ಟಿ​ನಾ-ಟ್ರಲ್ಸ್‌ ಮೊರೆ​ಗಾರ್ಡ್‌ ಜೋಡಿ ವಿರುದ್ಧ 1-3 ಅಂತ​ರ​ದಲ್ಲಿ ಸೋತು ಅಭಿ​ಯಾನ ಕೊನೆ​ಗೊ​ಳಿ​ಸಿ​ತು.

click me!