
ದೀಪಕ್ ನಿವಾಸ್ ಹೂಡಾ ದಾಖಲೆ ಸರಿಗಟ್ಟಿದ ಮತ್ತೊಬ್ಬ ಸ್ಟಾರ್ ಆಟಗಾರ ನಿತಿನ್ ತೋಮರ್ 1.15 ಕೋಟಿಗೆ ಪುಣೇರಿ ಪಲ್ಟಾನ್ ತೆಕ್ಕೆಗೆ
ಯುಪಿ ಯೋಧಾ ತಂಡದಲ್ಲೇ ಉಳಿದ ಕನ್ನಡಿಗ ಜೀವಾ ಕುಮಾರ್.
ಡಿಫೆಂಡರ್ ಮಹೇಂದರ್ ಸಿಂಗ್’ರನ್ನು 40 ಲಕ್ಷ ನೀಡಿ ಖರೀದಿಸಿದ ಬೆಂಗಳೂರು ಬುಲ್ಸ್
ಮಂಜೀತ್ ಚಿಲ್ಲಾರ್ ತಮಿಳ್ ತಲೈವಾಸ್ ತೆಕ್ಕೆಗೆ
ದಾಖಲೆ ಮೊತ್ತಕ್ಕೆ ಜೈಪುರ ಪಿಂಕ್’ಪ್ಯಾಂಥರ್ಸ್ ಪಾಲಾದ ದೀಪಕ್ ನಿವಾಸ್ ಹೂಡಾ. 1.15 ಕೋಟಿ ನೀಡಿ ದೀಪಕ್ ಖರೀದಿಸಿದ ಜೈಪುರ ಪ್ಯಾಂಥರ್ಸ್.
ಇನ್ನು 6.30ಕ್ಕೆ ಆರಂಭವಾಗಲಿರುವ ಆಟಗಾರರ ಹರಾಜಿನಲ್ಲಿ ಎ ಪಟ್ಟಿಯಲ್ಲಿರುವ ಭಾರತದ ತಾರಾ ಆಟಗಾರರಾದ ರಾಹುಲ್ ಚೌಧರಿ, ಅನೂಪ್ ಕುಮಾರ್, ಮಂಜೀತ್ ಚಿಲ್ಲಾರ್ ಹಾಗೂ ದೀಪಕ್ ನಿವಾಸ್ ಹೂಡಾ ಯಾವ ಬೆಲೆಗೆ ಹರಾಜಾಗುತ್ತಾರೆ ಎಂದು ಕಾದು ನೋಡಬೇಕಿದೆ.
ಇಲ್ಲಿಯವರೆಗಿನ ಹರಾಜಿನಲ್ಲಿ ಅತಿಹೆಚ್ಚು ಬೆಲೆಗೆ ಹರಾಜಾದ ಆಟಗಾರರೆಂದರೆ, ಫಜಲ್ ಅಟ್ರಾಚಲಿ[ಯು ಮುಂಬಾ] ಒಂದು ಕೋಟಿ, ಅಬ್ಜೊರ್ ಮಿಘಾನಿ[ತೆಲಗು ಟೈಟಾನ್ಸ್] 76 ಲಕ್ಷ ಹಾಗೂ ಜಾಂಗ್ ಕುನ್ ಲೀ[ಬೆಂಗಾಲ್ ವಾರಿಯರ್ಸ್] 33 ಲಕ್ಷ ರುಪಾಯಿ.
ಯು.ಪಿ ಯೋಧಾ ತಂಡದ ರೈಟ್ ಕಾರ್ನರ್ ಡಿಫೆಂಡರ್ ಹಡಿ ತಾಜಿಕ್ ಅವರನ್ನು ಯು ಮುಂಬಾ 11 ಲಕ್ಷ ನೀಡಿ ಖರೀದಿಸಿದೆ.
ತೆಲಗು ಟೈಟಾನ್ಸ್ ಪಾಲಾದ ಅಬ್ಸೊರ್ ಮೊಹಾಜೆ ಮಿಘಾನಿ. ಡಿಫೆಂಡರ್ ವಿಭಾಗದಲ್ಲಿ ಟೈಟಾನ್ಸ್ ತಂಡಕ್ಕೆ ಬಲ ತುಂಬಿಲಿರುವ ಆಟಗಾರನಿಗೆ 76 ಲಕ್ಷ ರುಪಾಯಿ ಬೆಲೆ. ಕಳೆದ ವರ್ಷ ಗುಜರಾತ್ ಫಾರ್ಚ್ಯೂನ್’ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಫೈನಲ್ ಬಿಡ್ ಮ್ಯಾಚ್ ಬಳಸಿ ಜಾಂಗ್ ಕುನ್ ಲೀ ಉಳಿಸಿಕೊಂಡ ಬೆಂಗಾಲ್ ವಾರಿಯರ್ಸ್. 33 ಲಕ್ಷ ನೀಡಿ ಕುನ್ ಲೀ ಅನ್ನು ವಾರಿಯರ್ಸ್ ಉಳಿಸಿಕೊಂಡಿದೆ
ಮತ್ತೊಬ್ಬ ವಿದೇಶಿ ಸ್ಟಾರ್ ಆಟಗಾರ ಅಬುಲ್ ಫಜಲ್ ಯು ಮುಂಬಾ ತೆಕ್ಕೆಗೆ. 21.25 ಲಕ್ಷ ರು ನೀಡಿ ಇರಾನಿ ರೈಡರ್ಸ್ ಖರೀದಿಸಿಸ ಯು ಮುಂಬಾ
ಬೆಂಗಳೂರು ಬುಲ್ಸ್ ಪಾಲಾದ ದಕ್ಷಿಣ ಕೋರಿಯಾದ ಡಾಂಗ್ ಜು ಹುಂಗ್
ದಾಖಲೆ ಮೊತ್ತಕ್ಕೆ ಯು ಮುಂಬಾ ಪಾಲಾದ ಫಜಲ್ ಅಟ್ರಾಚಲಿ
ಬಹು ನಿರೀಕ್ಷಿತ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಬುಧವಾರ (ಮೇ 30) ಹಾಗೂ ಗುರುವಾರ (ಮೇ31) ರಂದು ರಂದು ಮುಂಬೈನಲ್ಲಿ ನಡೆಯಲಿದೆ. ಹರಾಜಿನಲ್ಲಿ ಒಟ್ಟು 422 ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ 58 ವಿದೇಶಿ ಆಟಗಾರರಿದ್ದರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.