ಪರ್ತ್ ಪಿಚ್‌ ‘ಸಾಧಾರಣ’! ಐಸಿಸಿಯಿಂದ ಕನಿಷ್ಠ ರೇಟಿಂಗ್‌

By Web DeskFirst Published Dec 22, 2018, 9:38 AM IST
Highlights

‘ಪಿಚ್‌ ಏರುಪೇರಿನ ಬೌನ್ಸ್‌ ಹೊಂದಿದ್ದರಿಂದ, ಕೆಲ ಆಟಗಾರರು ಪೆಟ್ಟು ತಿನ್ನಬೇಕಾಯಿತು. ಈ ಕಾರಣದಿಂದಾಗಿ ರೆಫ್ರಿ, ಸಾಧಾರಣ ಎಂದು ರೇಟಿಂಗ್‌ ನೀಡಿರಬಹುದು’ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತಿಳಿಸಿದೆ. 

ಮೆಲ್ಬರ್ನ್‌[ಡಿ.22]: ಭಾರತ-ಆಸ್ಪ್ರೇಲಿಯಾ ನಡುವಿನ 2ನೇ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಪರ್ತ್’ನ ಒಪ್ಟಸ್‌ ಕ್ರೀಡಾಂಗಣದ ಪಿಚ್‌ಗೆ ಐಸಿಸಿ, ‘ಸಾಧಾರಣ’ ಎಂದು ರೇಟಿಂಗ್‌ ನೀಡಿದೆ. 

ಪರ್ತ್ ಟೆಸ್ಟ್: ಆಸಿಸ್’ಗೆ ಶರಣಾದ ಟೀಂ ಇಂಡಿಯಾ

ಪಂದ್ಯದ ರೆಫ್ರಿಯಾಗಿದ್ದ ಶ್ರೀಲಂಕಾದ ರಂಜನ್‌ ಮದುಗಲೆ ಚೊಚ್ಚಲ ಬಾರಿಗೆ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸಿದ ಪಿಚ್‌ಗೆ ಕನಿಷ್ಠ ಉತ್ತೀರ್ಣ ಅಂಕಗಳನ್ನು ನೀಡಿದ್ದಾರೆ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸುದ್ದಿ ಪ್ರಕಟಿಸಿದೆ.  ‘ಪಿಚ್‌ ಏರುಪೇರಿನ ಬೌನ್ಸ್‌ ಹೊಂದಿದ್ದರಿಂದ, ಕೆಲ ಆಟಗಾರರು ಪೆಟ್ಟು ತಿನ್ನಬೇಕಾಯಿತು. ಈ ಕಾರಣದಿಂದಾಗಿ ರೆಫ್ರಿ, ಸಾಧಾರಣ ಎಂದು ರೇಟಿಂಗ್‌ ನೀಡಿರಬಹುದು’ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತಿಳಿಸಿದೆ. 

ಮೈದಾನದಲ್ಲೇ ಕಿತ್ತಾಡಿಕೊಂಡ ಜಡೇಜಾ-ಇಶಾಂತ್..! ವಿಡಿಯೋ ವೈರಲ್

ಪಿಚ್‌ನ ಗುಣಮಟ್ಟ ಅಳೆಯುವ ಸಲುವಾಗಿ ಈ ವರ್ಷದ ಆರಂಭದಲ್ಲಿ ಐಸಿಸಿ ರೇಟಿಂಗ್‌ ಪದ್ಧತಿಯನ್ನು ಜಾರಿಗೆ ತಂದಿತ್ತು. ಪಿಚ್‌ ವರ್ತಿಸಿದ ಆಧಾರದ ಮೇಲೆ ಅತ್ಯುತ್ತಮ, ಉತ್ತಮ, ಸಾಧಾರಣ, ಸಾಧಾರಣಕ್ಕಿಂತ ಕಡಿಮೆ ಹಾಗೂ ಕಳಪೆ ಎನ್ನುವ ರೇಟಿಂಗ್‌ ನೀಡಲಾಗುತ್ತದೆ. ಭಾರತ-ಆಸ್ಪ್ರೇಲಿಯಾ ಮೊದಲ ಟೆಸ್ಟ್‌ಗೆ ಆತಿಥ್ಯ ವಹಿಸಿದ್ದ ಅಡಿಲೇಡ್‌ ಓವಲ್‌ ಪಿಚ್‌ಗೆ ‘ಅತ್ಯುತ್ತಮ’ ಎನ್ನುವ ರೇಟಿಂಗ್‌ ನೀಡಲಾಗಿದೆ ಎಂದು ತಿಳಿದುಬಂದಿರುವುದಾಗಿ ಕ್ರಿಕೆಟ್‌ ಆಸ್ಪ್ರೇಲಿಯಾ ಹೇಳಿದೆ. ಮುಂಬರುವ 2 ಟೆಸ್ಟ್‌ ಪಂದ್ಯಗಳಿಗೆ ಜಿಂಬಾಬ್ವೆಯ ಆ್ಯಂಡಿ ಪೈಕ್ರಾಫ್ಟ್‌ ಮ್ಯಾಚ್‌ ರೆಫ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕೆಎಲ್ ರಾಹುಲ್ ಕಳಪೆ ಪ್ರದರ್ಶನ: ರೊಚ್ಚಿಗೆದ್ದ ಟ್ವಿಟರಿಗರು !

click me!