ಸ್ಫಾಟ್ ಫಿಕ್ಸಿಂಗ್: ಶಮಿಗೆ ಸಮನ್ಸ್ ಜಾರಿ ಮಾಡಿದ ಪಿಸಿಬಿ

By Suvarna Web DeskFirst Published Dec 8, 2017, 5:14 PM IST
Highlights

2016ರ ಫೆಬ್ರವರಿಯಲ್ಲಿ ಎರಡನೇ ಆವೃತ್ತಿಯ ಪಾಕಿಸ್ತಾನ ಪ್ರೀಮಿಯರ್ ಲೀಗ್ ವೇಳೆ ಇಸ್ಲಾಮಾಬಾದ್ ಯುನೈಟೆಡ್ - ಪೇಶಾವರ್ ಜಲ್ಮಿ ನಡುವಿನ ಪಂದ್ಯದ ವೇಳೆ ಸ್ಫಾಟ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು.

ಕರಾಚಿ(ಡಿ.08): ಪಾಕಿಸ್ತಾನ ಸೂಪರ್ ಲೀಗ್ ಸ್ಫಾಟ್'ಪಿಕ್ಸಿಂಗ್ ಕುರಿತಂತೆ ತನಿಖೆ ಚುರುಕುಗೊಂಡಿದ್ದು, ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಮನ್ಸ್ ಜಾರಿ ಮಾಡಿದೆ.

ಪ್ರಸ್ತುತ ಬ್ರಿಟೀಷ್ ಪ್ರೀಮಿಯರ್ ಲೀಗ್ ಆಡುತ್ತಿರುವ 36 ವರ್ಷದ ಶಮಿ, ಪಿಎಸ್'ಎಲ್'ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಶಮಿಗೆ ಭ್ರಷ್ಟಾಚಾರ ನಿಗ್ರಹ ಘಟಕ ಶೋಕಾಸ್ ನೋಟೀಸ್ ಜಾರಿ ಮಾಡಿದೆ.

2016ರ ಫೆಬ್ರವರಿಯಲ್ಲಿ ಎರಡನೇ ಆವೃತ್ತಿಯ ಪಾಕಿಸ್ತಾನ ಪ್ರೀಮಿಯರ್ ಲೀಗ್ ವೇಳೆ ಇಸ್ಲಾಮಾಬಾದ್ ಯುನೈಟೆಡ್ - ಪೇಶಾವರ್ ಜಲ್ಮಿ ನಡುವಿನ ಪಂದ್ಯದ ವೇಳೆ ಸ್ಫಾಟ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು.

ಹೀಗಾಗಿ ಮಾರ್ಚ್ 06ರಂದು ಪಿಸಿಬಿ ತ್ರಿ ಸದಸ್ಯರನ್ನೊಳಗೊಂಡ ತಂಡ ಸ್ಫಾಟ್ ಫಿಕ್ಸಿಂಗ್ ಕುರಿತಂತೆ ತನಿಖೆ ಆರಂಭಿಸಿತ್ತು.

click me!