BCCI ಟೈಟಲ್ ಪ್ರಾಯೋಜಕತ್ವ; 326 ಕೋಟಿ ರೂ ಒಪ್ಪಂದ!

Published : Aug 22, 2019, 10:48 AM IST
BCCI ಟೈಟಲ್ ಪ್ರಾಯೋಜಕತ್ವ; 326 ಕೋಟಿ ರೂ ಒಪ್ಪಂದ!

ಸಾರಾಂಶ

ಬಿಸಿಸಿಐ ಮುಂದಿನ ಪಂದ್ಯಗಳ ಟೈಟಲ್ ಪ್ರಾಯೋಜಕತ್ವದ ಬಿಡ್ ಪ್ರಕ್ರಿಯೆ ಮುಗಿದಿದೆ. ಈ ಬಾರಿಯೂ ಒಪ್ಪಂದ ಉಳಿಸಿಕೊಳ್ಳುವಲ್ಲಿ ಪೇಟಿಎಂ ಯಶಸ್ವಿಯಾಗಿದೆ. ನೂತನ ಒಪ್ಪಂದ ಹಾಗೂ ಪ್ರತಿ ಪಂದ್ಯಕ್ಕೆ ಪೇಟಿಎಂ ಪಾವತಿಸಲಿರುವ ಮೊತ್ತದ ವಿವರ ಇಲ್ಲಿದೆ

ನವದದೆಹಲಿ(ಆ.22): ಬಿಸಿಸಿಐ ಮುಂದಿನ ಟೂರ್ನಿಗಳ ಟೈಟಲ್ ಪ್ರಾಯೋಜಕತ್ವಕ್ಕೆ ನಡೆದ ಬಿಡ್‌ನಲ್ಲಿ ಪೆಟಿಎಂ ಒಪ್ಪಂದ ಮುಂದುವರಿಸುವಲ್ಲಿ ಯಶಸ್ವಿಯಾಗಿದೆ. ಬಿಸಿಸಿಐನ ಟೈಟಲ್‌ ಪ್ರಾಯೋಜಕತ್ವವನ್ನು 2019​​-2023ರ ಅವಧಿಗೆ  326.80  ಕೋಟಿ ರೂಪಾಯಿಗೆ ಪೇಟಿಎಂ ಸಂಸ್ಥೆ ಉಳಿಸಿಕೊಂಡಿದೆ. 

ಇದನ್ನೂ ಓದಿ: ಸೆಪ್ಟೆಂಬರ್ 14ರೊಳಗೆ ಚುನಾವಣೆ ನಡೆಸಿ: ರಾಜ್ಯ ಸಂಸ್ಥೆಗೆ ಬಿಸಿಸಿಐ

ಭಾರತದಲ್ಲಿ ನಡೆಯಲಿರುವ ಪ್ರತಿ ಅಂತಾರಾಷ್ಟ್ರೀಯ ಹಾಗೂ ದೇಸಿ ಪಂದ್ಯಗಳಿಗೆ ಪೇಟಿಎಂ 3.80 ಕೋಟಿ ರೂಪಾಯಿ ಬಿಸಿಸಿಐಗೆ ಪಾವತಿಸಲಿದೆ. 2015ರಲ್ಲಿ ಬಿಸಿಸಿಐ ಟೈಟಲ್‌ ಪ್ರಾಯೋಜಕತ್ವ ಹಕ್ಕು ಪಡೆದಿದ್ದ ಪೇಟಿಎಂ, ಕಳೆದ 4 ವರ್ಷಗಳಲ್ಲಿ ಪ್ರತಿ ಪಂದ್ಯಕ್ಕೆ .2.4 ಕೋಟಿ ಪಾವತಿಸುತ್ತಿತ್ತು. ಆ ಮೊತ್ತಕ್ಕೆ ಹೋಲಿಸಿದರೆ ಶೇ.58ರಷ್ಟುಹೆಚ್ಚಳವಾಗಿದೆ. ಭಾರತ ತಂಡ, ರಣಜಿ ಸೇರದಿಂತೆ ಎಲ್ಲಾ ದೇಸಿ ಟೂರ್ನಿಗಳು ಪೇಟಿಎಂನಿಂದ ಪ್ರಾಯೋಜಕತ್ವ ಪಡೆಯಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?