ಪಾರ್ಥೀವ್ ಶೇವ್ ಮಾಡಿದ್ರೆ ಈಗಲೂ 16ರ ಯುವಕನಂತೆ ಕಾಣುತ್ತಾರೆ

By Suvarna Web DeskFirst Published Dec 7, 2016, 11:53 AM IST
Highlights

ಎಂಟು ವರ್ಷಗಳ ವನವಾಸದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಪಾರ್ಥೀವ್, ಆಡಿದ ಮೊದಲ ಟೆಸ್ಟ್'ನಲ್ಲಿ ಆಯ್ಕೆಗಾರರ ಹಾಗೂ ತಂಡದ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

ನವದೆಹಲಿ(ಡಿ.07): ಟೀಂ ಇಂಡಿಯಾಗೆ ದೀರ್ಘಕಾಲದ ಬಳಿಕ ಅದ್ಭುತವಾಗಿ ಕಮ್'ಬ್ಯಾಕ್ ಮಾಡಿರುವ ವಿಕೆಟ್'ಕೀಪರ್ ಬ್ಯಾಟ್ಸ್'ಮನ್ ಪಾರ್ಥೀವ್ ಪಟೇಲ್ ಅವರನ್ನು ಭಾರತ ತಂಡದ ಕೋಚ್ ಅನಿಲ್ ಕುಂಬ್ಳೆ ಕೊಂಡಾಡಿದ್ದಾರೆ.

'17 ವರ್ಷವಿದ್ದಾಗ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪಾರ್ಥೀವ್ ಪಟೇಲ್ ಪಾದಾರ್ಪಣೆ ಮಾಡಿದ್ದಾಗ ಹೇಗಿದ್ದರೋ, ಈಗಲೂ ಅವರು ಶೇವ್ ಮಾಡಿದರೆ 16ರ ಯುವಕನಂತೆ ಕಾಣುತ್ತಾರೆ ಎಂದು ಹೇಳಿದ್ದಾರೆ.

ಎಂಟು ವರ್ಷಗಳ ವನವಾಸದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಪಾರ್ಥೀವ್, ಆಡಿದ ಮೊದಲ ಟೆಸ್ಟ್'ನಲ್ಲಿ ಆಯ್ಕೆಗಾರರ ಹಾಗೂ ತಂಡದ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

ಭಾರತ ತಂಡಕ್ಕೆ ಕಮ್'ಬ್ಯಾಕ್ ಮಾಡಿರುವ ಪಾರ್ಥಿವ್ ಪ್ರಬುದ್ಧವಾಗಿ ಬ್ಯಾಟ್ ಬೀಸುತ್ತಿದ್ದಾರೆ. ದೇಶಿಯ ಕ್ರಿಕೆಟ್'ನಲ್ಲಿ ಕಠಿಣ ಪ್ರಯತ್ನ ನಡೆಸಿ ಉತ್ತಮ ಪ್ರದರ್ಶನ ನೀಡಿದರೆ ರಾಷ್ಟ್ರೀಯ ತಂಡಕ್ಕೆ ವಾಪಾಸ್ಸಾಗಬಹುದು ಎನ್ನುವುದಕ್ಕೆ ಪಾರ್ಥೀವ್ ಉತ್ತಮ ಉದಾಹರಣೆ. ಪಾರ್ಥೀವ್ ಯಾವ ಕ್ರಮಾಂಕದಲ್ಲಿಯೂ ಬ್ಯಾಟ್ ಬೀಸಲು ಸಿದ್ದರಿದ್ದಾರೆ ಎಂದು ಕುಂಬ್ಳೆ ಹೇಳಿದ್ದಾರೆ.

ವೃದ್ದಿಮಾನ್ ಸಾಹಾ ಗಾಯಗೊಂಡ ಹಿನ್ನೆಲೆಯಲ್ಲಿ ತಂಡಕ್ಕೆ ವಾಪಾಸ್ಸಾಗಿರುವ ಗುಜರಾತ್ ಎಡಗೈ ಆಟಗಾರ ಸಿಕ್ಕ ಅವಕಾಶವನ್ನು(42, 67* ರನ್) ಸರಿಯಾಗಿ ಬಳಸಿಕೊಂಡಿದ್ದಾರೆ.

click me!