ಪ್ಯಾರಿಸ್ ಒಲಿಂಪಿಕ್ಸ್‌ : ಭಾರತದ ಬ್ಯಾಡ್ಮಿಂಟನ್ ತಾರೆ ಸಿಂಧುಗೆ ಸುಲಭ ಸವಾಲು

By Kannadaprabha News  |  First Published Jul 14, 2024, 1:21 PM IST

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಪಿ ವಿ ಸಿಂಧು ಹಾಗೂ ಎಚ್ ಎಸ್ ಪ್ರಣಯ್‌ಗೆ ಗ್ರೂಪ್ ಹಂತದಲ್ಲಿ ಸುಲಭ ಸವಾಲು ಸಿಕ್ಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ


ಪ್ಯಾರಿಸ್: ಪ್ಯಾರಿಸ್‌ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಪ್ರಣಯ್‌ಗೆ ಗುಂಪು ಹಂತದಲ್ಲಿ ಸುಲಭ ಸವಾಲು ಎದುರಾಗಲಿದೆ. ಸಿಂಧು ಮಹಿಳಾ ಸಿಂಗಲ್ಸ್‌ನ ‘ಎಂ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಈ ಗುಂಪಿನಲ್ಲಿ ಎಸ್ಟೋನಿಯಾದ ಕ್ರಿಸ್ಟಿನ್‌ ಕೂಬಾ(ವಿಶ್ವ ನಂ.75) ಹಾಗೂ ಮಾಲ್ಡೀವ್ಸ್‌ನ ಫಾತಿಮತ್ ನಬಾಹ(ವಿಶ್ವ ನಂ.111) ಇದ್ದಾರೆ. 

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ 13ನೇ ಶ್ರೇಯಾಂಕಿತ ಪ್ರಣಯ್‌, ‘ಕೆ’ ಗುಂಪಿನಲ್ಲಿ ವಿಯೆಟ್ನಾಂನ ಲೆಡುಕ್‌ ಫಾಟ್‌(ವಿಶ್ವ ನಂ.70), ಜರ್ಮನಿಯ ಫ್ಯಾಬಿಯನ್‌ ರೋತ್‌(ವಿಶ್ವ ನಂ.82) ಜೊತೆಗಿದ್ದಾರೆ. ಸೇನ್‌ ‘ಎಲ್‌’ ಗುಂಪಿನಲ್ಲಿದ್ದು, ವಿಶ್ವ ನಂ.3, ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟೀ ಕೂಡಾ ಇದೇ ಗುಂಪಿನಲ್ಲಿದ್ದಾರೆ. ಒಲಿಂಪಿಕ್ಸ್‌ ಜು.26ಕ್ಕೆ ಆರಂಭಗೊಳ್ಳಲಿದೆ.

Latest Videos

undefined

ಚೆಸ್‌ ಒಲಿಂಪಿಯಾಡ್‌ನಲ್ಲಿ ಗುಕೇಶ್‌, ಪ್ರಜ್ಞಾನಂದ ಭಾರತದ 10 ಮಂದಿ ಸ್ಪರ್

ಚೆನ್ನೈ: ಸೆಪ್ಟೆಂಬರ್‌ನಲ್ಲಿ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ 45ನೇ ಆವೃತ್ತಿಯ ಚೆಸ್‌ ಒಲಿಂಪಿಯಾಡ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ತಂಡವನ್ನು ಶನಿವಾರ ಭಾರತೀಯ ಚೆಸ್‌ ಫೆಡರೇಷನ್‌ ಪ್ರಕಟಿಸಿದೆ. 10 ಮಂದಿಯ ತಂಡವನ್ನು 18 ವರ್ಷ ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ ಮುನ್ನಡೆಸಲಿದ್ದಾರೆ. 

ವಿಂಬಲ್ಡನ್ ಗ್ರ್ಯಾನ್‌ಸ್ಲಾಂ: ಆಲ್ಕರಜ್ vs ಜೋಕೋ ಫೈನಲ್ ಕದನ ಇಂದು..!

ಪುರುಷರ ತಂಡದಲ್ಲಿ ಅರ್ಜುನ್‌ ಎರಿಗೈಸಿ, ವಿದಿತ್‌ ಗುಜರಾತಿ ಹಾಗೂ ಹರಿಕೃಷ್ಣ ಕೂಡಾ ಇದ್ದಾರೆ. ಮಹಿಳಾ ತಂಡದಲ್ಲಿ ಹರಿಕಾ ದ್ರೋಣವಲ್ಲಿ, ಆರ್‌.ವೈಶಾಲಿ, ದಿವ್ಯಾ ದೇಶ್‌ಮುಖ್‌, ವಂತಿಕಾ ಅಗರ್‌ವಾಲ್‌ ಹಾಗೂ ತಾನಿಯಾ ಸಚ್‌ದೆವ್‌ ಇದ್ದಾರೆ. ಆದರೆ ಕಳೆದ ಬಾರಿ ಕಂಚು ಗೆದ್ದಿದ್ದ ಕೊನೆರು ಹಂಪಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. 2022ರಲ್ಲಿ ಒಲಿಂಪಿಯಾಡ್‌ ಚೆನ್ನೈನಲ್ಲಿ ನಡೆದಿತ್ತು. ಭಾರತ ಮುಕ್ತ ಹಾಗೂ ಮಹಿಳಾ ವಿಭಾಗಗಳಲ್ಲಿ ಕಂಚು ಗೆದ್ದಿದ್ದವು.

ಜು.22ರಿಂದ ಕರ್ನಾಟಕ ಮಹಿಳಾ ಫುಟ್ಬಾಲ್‌ ಲೀಗ್‌ ಆರಂಭ

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ) ಆಯೋಜಿಸುವ ರಾಜ್ಯ ಮಹಿಳಾ ಫುಟ್ಬಾಲ್‌ ಲೀಗ್‌ ಜು.22ರಿಂದ ಆರಂಭಗೊಳ್ಳಲಿದೆ. ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ, ಕೊಡಗು ಎಫ್‌ಸಿ, ಕಿಕ್‌ಸ್ಟಾರ್ಟ್‌ ಎಫ್‌ಸಿ, ಮಾತೃ ಪ್ರತಿಷ್ಠಾನ, ಕೆಂಪ್‌ ಎಫ್‌ಸಿ, ಪಿಂಕ್ ಪ್ಯಾಂಥರ್ಸ್‌ ಸೇರಿದಂತೆ 10 ತಂಡಗಳು ಪಾಲ್ಗೊಳ್ಳಲಿವೆ.

ವಾರೆವ್ಹಾ...ವಿಂಬಲ್ಡನ್ ಗೆದ್ದ ಕ್ರೇಜಿಕೋವಾ! 2ನೇ ಗ್ರ್ಯಾನ್‌ಸ್ಲಾಂ ಕಿರೀಟ ಗೆದ್ದ ಚೆಕ್‌ ಗಣರಾಜ್ಯದ ಟೆನಿಸ್ ತಾರೆ

ಪ್ರತಿ ತಂಡಗಳು ರೌಂಡ್‌ ರಾಬಿನ್‌ ಮಾದರಿಯಲ್ಲಿ ಇತರೆಲ್ಲಾ ತಂಡಗಳ ವಿರುದ್ಧ ತಲಾ 1 ಪಂದ್ಯಗಳನ್ನಾಡಲಿವೆ. ಎಲ್ಲಾ ಪಂದ್ಯಗಳಿಗೆ ನಗರದ ಕೆಎಸ್‌ಎಫ್‌ಎ ಫುಟ್ಬಾಲ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಸದ್ಯ ಆ.2ರ ವರೆಗಿನ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಇನ್ನುಳಿದ ಪಂದ್ಯಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕೆಎಸ್‌ಎಫ್‌ಎ ತಿಳಿಸಿದೆ.

click me!