ಪ್ಯಾರಾ ಏಷ್ಯನ್ ಗೇಮ್ಸ್: 72 ಪದಕ ಜಯಿಸಿದ ಭಾರತ

By Web DeskFirst Published Oct 14, 2018, 3:15 PM IST
Highlights

ಕ್ರೀಡಾಕೂಟದ ಅಂತಿಮ ದಿನವಾದ ಶನಿವಾರ ಭಾರತ 5 ಪದಕಗಳನ್ನು ಗೆದ್ದುಕೊಂಡಿತು. ಐದೂ ಪದಕಗಳು ಬ್ಯಾಡ್ಮಿಂಟನ್'ನಲ್ಲಿ ದೊರೆಯಿತು. ಒಟ್ಟು 15 ಚಿನ್ನ, 24 ಬೆಳ್ಳಿ ಹಾಗೂ 33 ಕಂಚು ಭಾರತದ ಪಾಲಾಯಿತು.

ಜಕಾರ್ತ[ಅ.14]: 2018ರ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತ, ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನದೊಂದಿಗೆ ಒಟ್ಟು 72 ಪದಕಗಳನ್ನು ಪಡೆದಿದೆ. ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆಯುವ ಮೂಲಕ ಭಾರತ ಕ್ರೀಡಾಕೂಟಕ್ಕೆ ವಿದಾಯ ಹೇಳಿದೆ. 

ಕ್ರೀಡಾಕೂಟದ ಅಂತಿಮ ದಿನವಾದ ಶನಿವಾರ ಭಾರತ 5 ಪದಕಗಳನ್ನು ಗೆದ್ದುಕೊಂಡಿತು. ಐದೂ ಪದಕಗಳು ಬ್ಯಾಡ್ಮಿಂಟನ್'ನಲ್ಲಿ ದೊರೆಯಿತು. ಒಟ್ಟು 15 ಚಿನ್ನ, 24 ಬೆಳ್ಳಿ ಹಾಗೂ 33 ಕಂಚು ಭಾರತದ ಪಾಲಾಯಿತು. 2014ರಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಭಾರತ 33 ಪದಕಗಳನ್ನು (3 ಚಿನ್ನ, 14 ಬೆಳ್ಳಿ, 16 ಕಂಚು) ಗೆದ್ದಿತ್ತು. 2010ರಲ್ಲಿ ನಡೆದಿದ್ದ ಚೊಚ್ಚಲ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತ 1 ಚಿನ್ನ, 4 ಬೆಳ್ಳಿ ಹಾಗೂ 9 ಕಂಚಿನ ಪದಕ ಗೆದ್ದಿತ್ತು.

ಅಂತಿಮ ದಿನ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್‌ನ ಎಸ್ ಎಲ್‌3 ವಿಭಾಗದ ಫೈನಲ್‌ನಲ್ಲಿ ಪ್ರಮೋದ್ ಭಗತ್, ಇಂಡೋನೇಷ್ಯಾದ ಉಕುನ್ ರುಕಯೆಂಡಿ ವಿರುದ್ಧ 21-19, 15-21, 21-14 ಗೇಮ್‌ಗಳಲ್ಲಿ ಜಯಸಿ ಚಿನ್ನದ ಪದಕ ಗೆದ್ದರು. ಎಸ್‌ಎಲ್‌4 ವಿಭಾಗದ ಫೈನಲ್‌ನಲ್ಲಿ ಚೀನಾದ ಯುಯಾಂಗ್ ವಿರುದ್ಧ 21-16, 21-6 ಗೇಮ್‌ಗಳಲ್ಲಿ ಗೆದ್ದ ತರುಣ್ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟರು.
172 ಚಿನ್ನ, 88 ಬೆಳ್ಳಿ ಹಾಗೂ 59 ಕಂಚಿನ ಪದಕಗಳನ್ನು ಗೆದ್ದ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರೆ, ದಕ್ಷಿಣ ಕೊರಿಯಾ (53 ಚಿನ್ನ, 25 ಬೆಳ್ಳಿ, 47 ಕಂಚು) ಹಾಗೂ ಇರಾನ್ (51 ಚಿನ್ನ, 42 ಬೆಳ್ಳಿ, 43 ಕಂಚು) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದವು.

click me!