
ದುಬೈ(ಮೇ.26]: ಕ್ರಿಕೆಟಿಗರು ಸ್ಮಾರ್ಟ್ ವಾಚ್ ಧರಿಸಿ ಮೈದಾನಕ್ಕಿಳಿಯುವುದನ್ನು ಐಸಿಸಿ ನಿಷೇಧಿಸಿದೆ. ಇಂಗ್ಲೆಂಡ್ ವಿರುದ್ಧ ಲಂಡನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ದಿನ ಕೆಲ ಪಾಕಿಸ್ತಾನಿ ಕ್ರಿಕೆಟಿಗರು ಆ್ಯಪಲ್ ಸ್ಮಾರ್ಟ್ ವಾಚ್ ಧರಿಸಿ ಮೈದಾನಕ್ಕಿಳಿದಿದ್ದರು. ಸ್ಮಾರ್ಟ್ ವಾಚ್ ಮೊಬೈಲ್’ನೊಂದಿಗೆ ಸಂಪರ್ಕ ಹೊಂದಿರಲಿದೆ. ಇಂಟರ್‌ನೆಟ್ ಬಳಕೆಯಾಗಲಿದೆ. ವಾಚ್‌ನಲ್ಲಿ ಸಂದೇಶಗಳನ್ನು ಸ್ವೀಕರಿಸುವ ಸೌಲಭ್ಯವಿರಲಿದೆ. ಭ್ರಷ್ಟಾಚಾರ ಸಾಧ್ಯತೆ ಇರುವ ದೃಷ್ಟಿ ಯಿಂದ ಸ್ಮಾರ್ಟ್ ವಾಚ್‌ಗಳ ಬಳಕೆಗೆ ನಿರ್ಬಂಧ ಹೇರಿದೆ
ಪಾಕ್ ಕ್ರಿಕೆಟಿಗರಾದ ಅಸಾದ್ ಶಫೀಕ್ ಹಾಗೂ ಬಾಬರ್ ಅಜಾಮ್’ಗೆ ಸ್ಮಾರ್ಟ್ ವಾಚ್ ಧರಿಸದಂತೆ ಐಸಿಸಿ ಸೂಚನೆ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.