ವಿಶ್ವಕಪ್‌ನಿಂದ ಔಟ್‌: ಜುನೈದ್‌ ಪ್ರತಿಭಟನೆ!

By Web DeskFirst Published May 21, 2019, 12:46 PM IST
Highlights

ಇಂಗ್ಲೆಂಡ್‌ ವಿರುದ್ಧ ಭಾನುವಾರ ಮುಕ್ತಾಯಗೊಂಡ ಸರಣಿಯಲ್ಲಿ ಒಟ್ಟು 2 ಪಂದ್ಯಗಳನ್ನು ಆಡಿದ ಜುನೈದ್‌ 18 ಓವರ್‌ ಬೌಲ್‌ ಮಾಡಿ 7.88ರ ಸರಾಸರಿಯಲ್ಲಿ 142 ರನ್‌ ಚಚ್ಚಿಸಿಕೊಂಡಿದ್ದರು. ಕಳಪೆ ಪ್ರದರ್ಶನ ತೋರಿದ್ದಕ್ಕಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು ಎಂದು ಪಾಕ್‌ ಕ್ರಿಕೆಟ್‌ ಮಂಡಳಿ ಮೂಲಗಳು ತಿಳಿಸಿವೆ

ಕರಾಚಿ(ಮೇ.21): ಪಾಕಿಸ್ತಾನ ವಿಶ್ವಕಪ್‌ ತಂಡದಿಂದ ಹೊರಬಿದ್ದ ಎಡಗೈ ವೇಗಿ ಜುನೈದ್‌ ಖಾನ್‌ ಮೌನ ಪ್ರತಿಭಟನೆ ನಡೆಸಿದ್ದಾರೆ. ಬಾಯಿಗೆ ಕಪ್ಪು ಟೇಪ್‌ ಅಂಟಿಸಿಕೊಂಡಿರುವ ಫೋಟೋವನ್ನು ಟ್ವೀಟರ್‌ನಲ್ಲಿ ಹಾಕಿ ‘ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಸತ್ಯ ಯಾವಾಗಲು ಕಹಿ’ ಎಂದು ಬರೆದಿದ್ದಾರೆ. ಆ ಬಳಿಕ ಟ್ವೀಟ್ ಅಳಿಸಿ ಹಾಕುವ ಮೂಲಕ ವಿವಾದವಾಗುವ ಮುನ್ನ ಎಚ್ಚೆತ್ತುಕೊಂಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಭಾನುವಾರ ಮುಕ್ತಾಯಗೊಂಡ ಸರಣಿಯಲ್ಲಿ ಒಟ್ಟು 2 ಪಂದ್ಯಗಳನ್ನು ಆಡಿದ ಜುನೈದ್‌ 18 ಓವರ್‌ ಬೌಲ್‌ ಮಾಡಿ 7.88ರ ಸರಾಸರಿಯಲ್ಲಿ 142 ರನ್‌ ಚಚ್ಚಿಸಿಕೊಂಡಿದ್ದರು. ಕಳಪೆ ಪ್ರದರ್ಶನ ತೋರಿದ್ದಕ್ಕಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು ಎಂದು ಪಾಕ್‌ ಕ್ರಿಕೆಟ್‌ ಮಂಡಳಿ ಮೂಲಗಳು ತಿಳಿಸಿವೆ.

ವಿಶ್ವಕಪ್ 2019: ಪಾಕಿಸ್ತಾನ ಅಂತಿಮ ತಂಡ ಪ್ರಕಟ-ಮೊಹಮ್ಮದ್ ಅಮೀರ್‌ಗೆ ಸ್ಥಾನ!

2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಜುನೈದ್ ಖಾನ್ ಪ್ರಮುಖ ಪಾತ್ರವಹಿಸಿದ್ದರು. ಆಡಿದ 4 ಪಂದ್ಯಗಳಲ್ಲಿ 4.58ರ ಸರಾಸರಿಯಲ್ಲಿ ರನ್ ನೀಡಿ 8 ವಿಕೆಟ್ ಕಬಳಿಸಿದ್ದರು. 29 ವರ್ಷದ ಜುನೈದ್ ವಿಶ್ವಕಪ್ ಪ್ರಾಥಮಿಕ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದಷ್ಟೇ ಅಲ್ಲದೆ ಅಶ್ರಫ್ ಹಾಗೂ ಆಬಿದ್ ಅಲಿ ಕೂಡಾ ವಿಶ್ವಕಪ್ ಟೂರ್ನಿಗೆ ಪಾಕ್ ತಂಡದಿಂದ ಹೊರಬಿದ್ದಿದ್ದಾರೆ. ಈ ಮೂವರ ಬದಲಿಗೆ ವಾಹಬ್ ರಿಯಾಜ್, ಮೊಹಮ್ಮದ್ ಅಮೀರ್ ಹಾಗೂ ಆಸೀಫ್ ಅಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

2019ನೇ ಸಾಲಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮೇ.30ರಿಂದ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಪಾಕಿಸ್ತಾನ ತಂಡವು ಮೇ.31ರಂದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...


 

click me!