ಇಂಡಿಯನ್‌ ಓಪನ್‌ ಬಾಕ್ಸಿಂಗ್‌: ಭಾರತಕ್ಕೆ 10 ಪದಕ ಖಚಿತ

By Web DeskFirst Published May 21, 2019, 11:29 AM IST
Highlights

ಇಂಡಿಯನ್‌ ಓಪನ್‌ ಬಾಕ್ಸಿಂಗ್‌'ನಲ್ಲಿ ಭಾರತದ 10 ಬಾಕ್ಸರ್’ಗಳು ಟೂರ್ನಿ ಆರಂಭಕ್ಕೂ ಮುನ್ನವೇ ಪದಕ ಖಚಿತಪಡಿಸಿಕೊಂಡಿದ್ದಾರೆ. ಅದು ಹೇಗೆ ನೀವೇ ನೋಡಿ...

ಗುವಾಹಟಿ(ಮೇ.21): ಇಂಡಿಯನ್‌ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಸ್ಪರ್ಧೆ ಆರಂಭಕ್ಕೂ ಮೊದಲೇ ಭಾರತದ 10 ಬಾಕ್ಸರ್‌ಗಳು ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ. 6 ಪುರುಷ ಹಾಗೂ 4 ಮಹಿಳಾ ಬಾಕ್ಸರ್‌ಗಳು ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಬ್ರಿಜೇಶ್‌ ಯಾದವ್‌, ಸಂಜಯ್‌ (81 ಕೆ.ಜಿ.), ನಮನ್‌ ತನ್ವಾರ್‌, ಸಂಜೀತ್‌ (91 ಕೆ.ಜಿ.), ಸತೀಶ್‌ ಕುಮಾರ್‌, ಅತುಲ್‌ ಠಾಕೂರ್‌ (+91 ಕೆ.ಜಿ.) ವಿಭಾಗದಲ್ಲಿ ಸೆಮೀಸ್‌ಗೇರಿದ್ದಾರೆ. ಮಹಿಳಾ ವಿಭಾಗದಲ್ಲಿ ಲೊವ್ಲಿನಾ, ಅಂಜಲಿ (69 ಕೆ.ಜಿ.), ಭಾಗ್ಯಬತಿ ಕಚಾರಿ, ಸವೇಟಿ ಬೋರಾ (75 ಕೆ.ಜಿ.) ನಾಲ್ಕರ ಘಟ್ಟಪ್ರವೇಶಿಸಿದ್ದಾರೆ. ಈ ವಿಭಾಗಗಳಲ್ಲಿ ಸ್ಪರ್ಧಿಗಳು ಕಡಿಮೆ ಇರುವ ಕಾರಣ, ನೇರವಾಗಿ ಸೆಮೀಸ್‌ಗೆ ಬೈ ಸಿಕ್ಕಿದೆ.

ಮೊದಲ ದಿನವಾದ ಸೋಮವಾರ ಭಾರತದ 7 ಬಾಕ್ಸರ್‌ಗಳು ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಸೋಮವಾರ ಕಣಕ್ಕಿಳಿದ ಭಾರತದ ಏಕೈಕ ಪುರುಷ ಬಾಕ್ಸರ್‌, ಮಾಜಿ ವಿಶ್ವ ಯೂತ್‌ ಚಾಂಪಿಯನ್‌ ಸಚಿನ್‌ ಸಿವಾಚ್‌, 52 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಅರ್ಜೆಂಟೀನಾದ ರಮೊನ್‌ ನಿಕನೊರ್‌ ವಿರುದ್ಧ 5-0 ಬೌಟ್‌ಗಳಲ್ಲಿ ಜಯಗಳಿಸಿ ಕ್ವಾರ್ಟರ್‌ಫೈನಲ್‌ಗೇರಿದರು. ಕ್ವಾರ್ಟರ್‌ನಲ್ಲಿ ಸಚಿನ್‌, ಫಿಲಿಪೈನ್ಸ್‌ನ ರೋಗೆನ್‌ ಸಿಯಾಗರನ್ನು ಎದುರಿಸಲಿದ್ದಾರೆ. ಮಹಿಳಾ ವಿಭಾಗದಲ್ಲಿ ಸೋನಿತಾ ಲಾತರ್‌, ಪ್ರೀತಿ ಬೆನಿವಾಲ್‌, ಶಶಿ ಚೋಪ್ರಾ, ಮನಿಷಾ ಮೌನ್‌, ಜ್ಯೋತಿ ಗುಲಿಯಾ ಹಾಗೂ ಅನಾಮಿಕ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಮೇರಿ-ನಿಖತ್‌ ಫೈಟ್‌?

6 ಬಾರಿ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ಗೆ ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಏಷ್ಯನ್‌ ಚಾಂಪಿಯನ್‌ಶಿಪ್‌ ಕಂಚು ವಿಜೇತೆ ನಿಖತ್‌ ಜರೀನ್‌ ಎದುರಾಗುವ ಸಾಧ್ಯತೆ ಇದ್ದು, ಭಾರಿ ಕುತೂಹಲ ಮೂಡಿಸಿದೆ.

click me!