
ಕರಾಚಿ[ಮಾ.22]: ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟಿ20 ಟೂರ್ನಿಯ ಪಂದ್ಯಗಳ ಪ್ರಸಾರ ರದ್ದುಗೊಳಿಸಿದ್ದಕ್ಕೆ, ಈಗ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡದಿರಲು ಪಾಕಿಸ್ತಾನ ನಿರ್ಧರಿಸಿದೆ.
IPL 2019: RCB ಆಟಗಾರರ ಕಂಪ್ಲೀಟ್ ಲಿಸ್ಟ್!
ಪಾಕಿಸ್ತಾನದ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಫಾವದ್ ಚೌಧರಿ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಜಿಯೋ ಸ್ಪೋರ್ಟ್ಸ್ ವಾಹಿನಿ, ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರ ಹಕ್ಕು ಹೊಂದಿತ್ತು.
IPL 2019: ಗರಿಷ್ಠ ಸಿಕ್ಸರ್ ಸಿಡಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು..!
ಪುಲ್ವಾಮಾ ದಾಳಿಯನ್ನು ಖಂಡಿಸಿ ಭಾರತದಲ್ಲಿ ಪಿಎಸ್‌ಎಲ್ ಪಂದ್ಯಗಳ ಪ್ರಸಾರವನ್ನು ಡಿಸ್ಪೋರ್ಟ್ಸ್ ವಾಹಿನಿ ಸ್ಥಗಿತಗೊಳಿಸಿತ್ತು. ಆದರೆ ಪ್ಲೇ-ಆಫ್ ಹಂತ ಶುರುವಾದಾಗ ಪ್ರಸಾರ ಪುನಾರಂಭಗೊಂಡಿತ್ತು. ಟೂರ್ನಿ ಆರಂಭಗೊಂಡು 3 ದಿನಗಳ ಬಳಿಕ, ಪಾಕ್ ಕ್ರಿಕೆಟ್ ಮಂಡಳಿಯೊಂದಿಗಿನ ಒಪ್ಪಂದ ಮುರಿದು ಪಂದ್ಯಗಳ ಪ್ರಸಾರ ನಿರ್ಮಾಣವನ್ನು ಭಾರತದ ರಿಲಯನ್ಸ್-ಐಎಂಜಿ ಸಂಸ್ಥೆ ರದ್ದುಗೊಳಿಸಿತ್ತು. ಇದರಿಂದಾಗಿ ಕೆಲ ದಿನಗಳ ಕಾಲ ಪಾಕಿಸ್ತಾನದಲ್ಲೇ ಪಂದ್ಯಗಳ ಪ್ರಸಾರ ನಿಂತು ಹೋಗಿತ್ತು. ‘ಪಿಎಸ್‌ಎಲ್ ವೇಳೆ ಭಾರತೀಯ ಸಂಸ್ಥೆಗಳು ಹಾಗೂ ಸರ್ಕಾರ, ಪಾಕಿಸ್ತಾನ ಕ್ರಿಕೆಟನ್ನು ಕಂಡ ರೀತಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಸಚಿವ ಫಾವದ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.