ಸ್ಪಾಟ್ ಫಿಕ್ಸಿಂಗ್ ನಡೆಸಿದ ಪಾಕ್ ಕ್ರಿಕೆಟಗನಿಗೆ 10 ವರ್ಷ ನಿಷೇಧ

By Web DeskFirst Published Aug 17, 2018, 2:43 PM IST
Highlights

ಪಾಕಿಸ್ತಾನ ಆರಂಭಿಕ ಬ್ಯಾಟ್ಸ್‌ಮನ್ ಸೇರಿದಂತೆ 6 ಕ್ರಿಕೆಟಿಗರ ಮೇಲಿನ ಸ್ಫಾಟ್ ಫಿಕ್ಸಿಂಗ್ ಆರೋಪ ಸಾಬೀತಾಗಿದೆ. ತನಿಖೆ ನಡೆಸಿದ ಪಿಸಿಬಿ ಇದೀಗ ಸ್ಫಾಟ್ ಫಿಕ್ಸಿಂಗ್ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ. ಹಾಗಾದರೆ ಕಳ್ಳಾಟ ಆಡಿದ 6 ಕ್ರಿಕೆಟಿಗರು ಯಾರು? ಇಲ್ಲಿದೆ. 

ಲಾಹೋರ್(ಆ.17): ಪಾಕಿಸ್ತಾನ ಕ್ರಿಕೆಟ್‌‌ ಫಿಕ್ಸಿಂಗ್‌ನಿಂದ ಹೊರಬರಲು ಹಲವು ಕಸರತ್ತುಗಳನ್ನ ನಡೆಸುತ್ತಿದೆ. ಆದರೆ ಒಂದಲ್ಲ ಒಂದು ಪ್ರಕರಣಗಳು ಪಾಕ್ ಕ್ರಿಕೆಟ್‌‌ಗೆ ಉರುಳಾಗುತ್ತಿದೆ. ಇದೀಗ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಪಾಕಿಸ್ತಾನ ಆರಂಭಿಕ ಬ್ಯಾಟ್ಸ್‌ಮನ್ ನಾಸಿರ್ ಜೆಮ್ಶೆಡ್ ಆರೋಪ ಸಾಬೀತಾಗಿದ್ದು, 10 ವರ್ಷಗ ನಿಷೇಧದ ಶಿಕ್ಷೆ ವಿಧಿಸಲಾಗಿದೆ.

2017ರ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ನಾಸಿರ್ ಜೆಮ್ಶೆಡ್, ಸ್ಫಾಟ್ ಫಿಕ್ಸಿಂಗ್ ನಡೆಸಿದ ಆರೋಪಕ್ಕೆ ಗುರಿಯಾಗಿದ್ದರು. ತನಿಖೆ ಬಳಿಕ ಇದೀಗ ನಾಸಿರ್ ಜೆಮ್ಶೆಡ್ ಮೇಲಿನ ಆರರೋಪ ಸಾಬೀತಾಗಿದೆ. ಹೀಗಾಗಿ 10 ವರ್ಷಗಳ ನಿಷೇಧದ ಶಿಕ್ಷೆ ವಿಧಿಸಲಾಗಿದೆ.

ನಾಸಿರ್ ಜೆಮ್ಶೆಡ್ ಜೊತೆಗೆ ಇನ್ನು ಐವರು ಪಾಕ್ ಕ್ರಿಕಟಿಗರ ಮೇಲಿನ ಆರೋಪ ಕೂಡ ಸಾಬೀತಾಗಿದೆ. ಜೆಮ್ಶೆಡ್ ಪ್ರಕರಣದ ಕಿಂಗ್ ಪಿನ್ ಆಗಿದ್ದರೆ, ಶಾರ್ಜೀಲ್ ಖಾನ್, ಖಾಲೀದ್ ಲತೀಫ್, ಮೊಹಮ್ಮದ್ ಇರ್ಫಾನ್, ಮೊಹಮ್ಮದ್ ನವಾಝ್ ಹಾಗೂ ಶಹಝೈಬ್ ಹಸನ್‌ಗೂ ನಿಷೇಧ ಹೇರಲಾಗಿದೆ.

ನಾಸಿರ್ ಜೆಮ್ಶೆಡ್ ಪಾಕಿಸ್ತಾನ ಪರ 48 ಏಕದಿನ ಹಾಗೂ 2 ಟೆಸ್ಟ್ ಪಂದ್ಯ ಆಡಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್ ವಿರುದ್ಧ ನಾಸಿರ್ ಅಂತಿಮ ಏಕದಿನ ಪಂದ್ಯ ಆಡಿದ್ದರು. 2016ರಿಂದ ಯಾವುದೇ ದೇಸಿಯ ಕ್ರಿಕೆಟ್ ಟೂರ್ನಿಯಲ್ಲಿ ನಾಸಿರ್ ಪಾಲ್ಗೊಂಡಿಲ್ಲ.

click me!