ಭಾರತ-ಪಾಕ್ ದ್ವಿಪಕ್ಷೀಯ ಟೂರ್ನಿಗೆ ವೇದಿಕೆ ಸಜ್ಜು..?

By Web DeskFirst Published Sep 25, 2018, 3:56 PM IST
Highlights

ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮಣಿ ಈ ಬಗ್ಗೆ ಮಾತನಾಡಿದ್ದು, ಬಿಸಿಸಿಐ ಅಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಸರಣಿಯನ್ನು ಯುಎಇನಲ್ಲಿ ನಡೆಸುವ ಬಗ್ಗೆ ಈ ಹಿಂದೆಯೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಸ್ತಾಪ ಸಲ್ಲಿಸಿತ್ತು. ಆದರೆ ಬಿಸಿಸಿಐ ಒಪ್ಪಿಗೆ ನೀಡಿರಲಿಲ್ಲ.

ನವದೆಹಲಿ[ಸೆ.25]: ದಿನೇ ದಿನೇ ಭಾರತ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಡುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತ ವಿರುದ್ಧ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಯೋಜಿಸಲು ಶತಪ್ರಯತ್ನ ನಡೆಸುತ್ತಿದೆ. ಏಷ್ಯಾಕಪ್ ಸೂಪರ್ 4 ಪಂದ್ಯದ ವೇಳೆ ಭೇಟಿಯಾಗಿದ್ದ ಬಿಸಿಸಿಐ ಹಾಗೂ ಪಿಸಿಬಿ ಮುಖ್ಯಸ್ಥರು, ಉಭಯ ದೇಶಗಳ ನಡುವೆ 2019ರಲ್ಲಿ
ದುಬೈನಲ್ಲಿ ದ್ವಿಪಕ್ಷೀಯ ಸರಣಿ ಆಯೋಜಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. 

ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮಣಿ ಈ ಬಗ್ಗೆ ಮಾತನಾಡಿದ್ದು, ಬಿಸಿಸಿಐ ಅಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಸರಣಿಯನ್ನು ಯುಎಇನಲ್ಲಿ ನಡೆಸುವ ಬಗ್ಗೆ ಈ ಹಿಂದೆಯೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಸ್ತಾಪ ಸಲ್ಲಿಸಿತ್ತು. ಆದರೆ ಬಿಸಿಸಿಐ ಒಪ್ಪಿಗೆ ನೀಡಿರಲಿಲ್ಲ. ಇದೀಗ ಏಷ್ಯಾಕಪ್ ಪಂದ್ಯಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪಿಸಿಬಿ ಮತ್ತೊಮ್ಮೆ ಬಿಸಿಸಿಐ ಬಳಿ ಸರಣಿ ನಡೆಸುವ ಬಗ್ಗೆ ಚರ್ಚೆ ನಡೆಸಿದೆ. 

ಆದರೆ ಪಾಕಿಸ್ತಾನ ವಿರುದ್ಧ ಭಾರತ ದ್ವಿಪಕ್ಷೀಯ ಸರಣಿ ಆಡಬೇಕಿದ್ದರೆ, ಬಿಸಿಸಿಐಗೆ ಕೇಂದ್ರ ಸರ್ಕಾರದ ಅನುಮತಿ ಬೇಕಿದೆ.
 

click me!