ಪಾಕ್ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದೆ: ಕೋಚ್ ಆರ್ಥರ್

By Web DeskFirst Published Sep 25, 2018, 3:30 PM IST
Highlights

‘ನಾನು ತಂಡವನ್ನು ದೂಷಿಸುತ್ತಿಲ್ಲ. ಆದರೆ ಸದ್ಯ ನಮ್ಮ ಆಟಗಾರರಿಗೆ ಆತ್ಮವಿಶ್ವಾಸದ ಕೊರತೆ ಇದೆ. ಡ್ರೆಸ್ಸಿಂಗ್ ಕೊಠಡಿಯಲ್ಲಿ ಆಟಗಾರರಿಗೆ ಸೋಲುವ ಭಯ ಕಾಡುತ್ತಿದೆ. ಭಾರತದಂತಹ ಬಲಿಷ್ಠ ತಂಡ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತದೆ. ಆದರೆ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಪಂದ್ಯದ ವೇಳೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳದಿದ್ದರೆ ಗೆಲ್ಲುವ ಅರ್ಹತೆ ಇರುವುದಿಲ್ಲ’ ಎಂದು ಆರ್ಥರ್ ಹೇಳಿದ್ದಾರೆ. 

ದುಬೈ[ಸೆ.25]: ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧ 2ನೇ ಸೋಲು ಅನುಭವಿಸಿದ ಬಳಿಕ, ಪಾಕಿಸ್ತಾನ ತಂಡದ ಕೋಚ್ ಮಿಕಿ ಆರ್ಥರ್ ಸೋಲಿಗೆ ಆಟಗಾರರು ಎದುರಿಸುತ್ತಿರುವ ಆತ್ಮವಿಶ್ವಾಸದ ಕೊರತೆಯೇ ಕಾರಣ ಎಂದಿದ್ದಾರೆ. 

‘ನಾನು ತಂಡವನ್ನು ದೂಷಿಸುತ್ತಿಲ್ಲ. ಆದರೆ ಸದ್ಯ ನಮ್ಮ ಆಟಗಾರರಿಗೆ ಆತ್ಮವಿಶ್ವಾಸದ ಕೊರತೆ ಇದೆ. ಡ್ರೆಸ್ಸಿಂಗ್ ಕೊಠಡಿಯಲ್ಲಿ ಆಟಗಾರರಿಗೆ ಸೋಲುವ ಭಯ ಕಾಡುತ್ತಿದೆ. ಭಾರತದಂತಹ ಬಲಿಷ್ಠ ತಂಡ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತದೆ. ಆದರೆ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಪಂದ್ಯದ ವೇಳೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳದಿದ್ದರೆ ಗೆಲ್ಲುವ ಅರ್ಹತೆ ಇರುವುದಿಲ್ಲ’ ಎಂದು ಆರ್ಥರ್ ಹೇಳಿದ್ದಾರೆ. 

ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ಕಳಪೆ ಕ್ಷೇತ್ರರಕ್ಷಣೆ ಬಗ್ಗೆ ಭಾರೀ ಚರ್ಚೆ ಶುರುವಾಗಿದ್ದು, ಆರ್ಥರ್‌ರನ್ನು ಪಿಸಿಬಿ ಪ್ರಶ್ನಿಸುವ ಸಾಧ್ಯತೆ ಇದೆ. ಏಷ್ಯಾಕಪ್’ನಲ್ಲಿ ಪಾಕಿಸ್ತಾನ ತಂಡವು ಭಾರತದೆದುರು ಆಡಿದ ಎರಡು ಪಂದ್ಯಗಳಲ್ಲೂ ಹೀನಾಯ ಸೋಲು ಕಂಡಿದೆ.
 
click me!