
ಶಾರ್ಜಾ(ಅ.23): ಶ್ರೀಲಂಕಾ ತಂಡ ಸೋಲಿನ ಸರಪಳಿಯಿಂದ ಹೊರಬರುವಂತೆ ಕಾಣುತ್ತಿಲ್ಲ. ಹೌದು ಟೀಂ ಇಂಡಿಯಾ ಎದುರು ಸೋತು ಸುಣ್ಣವಾಗಿದ್ದ ಶ್ರೀಲಂಕಾ ಪಡೆ ಇದೀಗ ಪಾಕಿಸ್ತಾನದೆದುರು 5-0 ಅಂತರದಲ್ಲಿ ವೈಟ್'ವಾಷ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ.
ಉಸ್ಮಾನ್ ಖಾನ್ ವೇಗದ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧದ ಅಂತಿಮ ಹಾಗೂ 5ನೇ ಏಕದಿನ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ಉಪುಲ್ ತರಂಗ ತಲೆ ಕೆಳಗೆ ಮಾಡುವಲ್ಲಿ ಪಾಕ್ ವೇಗಿ ಉಸ್ಮಾನ್ ಖಾನ್ ಯಶಸ್ವಿಯಾದರು. 20 ರನ್ ಗಳಿಸುವಷ್ಟರಲ್ಲಿ ಲಂಕಾ ಐವರು ಪ್ರಮುಖ ಬ್ಯಾಟ್ಸ್‌ಮನ್'ಗಳು ಪೆವಿಲಿಯನ್ ಸೇರಿಕೊಂಡಿದ್ದರು. ಲಂಕಾ ಪರ ಲಹಿರು ತಿರುಮನ್ನೆ (19 ರನ್), ಸಿಕ್ಕುಗೆ ಪ್ರಸನ್ನ (25 ರನ್) ಕೊಂಚ ಪ್ರತಿರೋಧ ತೋರಿದರೂ ಅಂತಿಮವಾಗಿ ಲಂಕಾ 103 ರನ್ ಗಳಿಸುವಷ್ಟರಲ್ಲಿ ಸರ್ವಪತನಗೊಂಡಿತು.
ಉಸ್ಮಾನ್ ಖಾನ್ 5 ವಿಕೆಟ್ ಕಬಳಿಸಿದರೆ, ಹಸನ್ ಅಲಿ, ಶಾದಾಬ್ ಖಾನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಸುಲಭ ಗುರಿಯನ್ನು ಬೆನ್ನತ್ತಿದ್ದ ಪಾಕಿಸ್ತಾನ ಕೇವಲ ಒಂದು ವಿಕೆಟ್ ಕಳೆದುಕೊಂಡ ಜಯದ ನಗೆ ಬೀರಿತು. ಇಮಾಮ್ ಉಲ್ ಹಕ್ 46 ರನ್ ಬಾರಿಸಿ ಅಜೇಯರಾಗುಳಿದರೆ, ಫಖರ್ ಜಮಾನ್ 48 ರನ್ ಬಾರಿಸಿದರು.
ಉಸ್ಮಾನ್ ಖಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರೆ, ಹಸನ್ ಅಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.