
ಕರಾಚಿ(ಅ.21): ಶ್ರೀಲಂಕಾ ವಿರುದ್ಧ ಯುಎಇನಲ್ಲಿ ನಡೆಯುತ್ತಿರುವ ಏಕದಿನ ಸರಣಿ ವೇಳೆ ಬುಕ್ಕಿಗಳು ನನ್ನನ್ನು ಸಂಪರ್ಕಿಸಿದ್ದರೂ ಎಂಬ ಆಘಾತಕಾರಿ ಸಂಗತಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಬಹಿರಂಗಗೊಳಿಸಿದ್ದಾರೆ.
‘ಅವರು ನೀಡಿದ ಆಹ್ವಾನವನ್ನು ನಾನು ತಿರಸ್ಕರಿಸಿದೆ. ತಕ್ಷಣ ಈ ವಿಷಯವನ್ನು ಭದ್ರತಾ ಸಿಬ್ಬಂದಿ ಹಾಗೂ ಭ್ರಷ್ಟಾಚಾರ ನಿಯಂತ್ರಣ ಅಧಿಕಾರಿಗಳ ಗಮನಕ್ಕೆ ತಂದೆ’ ಎಂದು ಸರ್ಫರಾಜ್ ಮಾಹಿತಿ ನೀಡಿದ್ದಾರೆ.
ಯುಎಇ ಸುರಕ್ಷಿತ ಸ್ಥಳ, ಇಲ್ಲಿನ ನಿರ್ಭಯವಾಗಿ ಪಂದ್ಯಗಳನ್ನು ಆಯೋಜಿಸಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಪಾಕಿಸ್ತಾನ ಕಿಕೆಟ್ ಮಂಡಳಿ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದೆ. ಸರ್ಫರಾಜ್'ಗೆ ಫಿಕ್ಸಿಂಗ್ ನಡೆಸುವಂತೆ ಕೇಳಿಕೊಂಡ ಬುಕ್ಕಿ, ದುಬೈನಲ್ಲಿ ನೆಲೆಸಿದ್ದು, ಆಟಗಾರರಿಗೆ ಪರಿಚಯಸ್ಥ ಎಂದು ಹೇಳಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.