ಉದ್ದೀಪನ ಮದ್ದು ಸೇವನೆ ಮಾಡಿರುವ ಭಾರತೀಯ ಕ್ರಿಕೆಟಿಗ..?

By Suvarna Web DeskFirst Published Oct 27, 2017, 9:28 AM IST
Highlights

ರಣಜಿ, ದುಲೀಪ್, ಇರಾನಿ ಟ್ರೋಫಿ ಹಾಗೂ ಐಪಿಎಲ್ ಸೇರಿದಂತೆ ಬಿಸಿಸಿಐ ಆಯೋಜಿಸುವ ಸ್ಥಳೀಯ ಪಂದ್ಯಾವಳಿಗಳ ವೇಳೆ ಡೋಪಿಂಗ್ ಪರೀಕ್ಷೆ ನಡೆಸಲಾಗುತ್ತಿದೆ. ಆರೋಪಕ್ಕೆ ಗುರಿಯಾಗಿರುವ ಆಟಗಾರ ದೇಶಿ ಆಟಗಾರ ಎನ್ನಲಾಗಿದೆ.

ನವದೆಹಲಿ(ಅ.27): ಭಾರತೀಯ ಕ್ರಿಕೆಟಿಗನೋರ್ವ ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. 2016ರಲ್ಲಿ ಬಿಸಿಸಿಐನಿಂದ ಮಾನತ್ಯೆ ಪಡೆದಿರುವ ಕ್ರಿಕೆಟಿಗರನ್ನು ಡೋಪಿಂಗ್ ಪರೀಕ್ಷೆಗೆ ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ)ವು ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯಲ್ಲಿ ಓರ್ವ ಆಟಗಾರ ನಿಷೇಧಿತ ಮದ್ದು ಸೇವನೆ ಮಾಡಿರುವುದು ಪತ್ತೆಯಾಗಿದೆ ಎಂದು ವಾಡಾ ತಿಳಿಸಿದ್ದು, ಆಟಗಾರರನ ಹೆಸರನ್ನು ಇನ್ನೂ ಬಹಿರಂಗಗೊಳಿಸಿಲ್ಲ.

2013ರ ಐಪಿಎಲ್ ಆವೃತ್ತಿ ವೇಳೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿದ್ದ ಪ್ರದೀಪ್ ಸಾಂಗ್ವಾನ್ ಡೋಪಿಂಗ್ ಸುಳಿಯಲ್ಲಿ ಸಿಲುಕಿದ್ದರು. ಇದಾದ ಬಳಿಕ ಇದೀಗ ಮತ್ತೋರ್ವ ಭಾರತೀಯ ಆಟಗಾರನ ವಿರುದ್ಧ ಈ ಆರೋಪ ಕೇಳಿ ಬಂದಿದೆ.

ರಣಜಿ, ದುಲೀಪ್, ಇರಾನಿ ಟ್ರೋಫಿ ಹಾಗೂ ಐಪಿಎಲ್ ಸೇರಿದಂತೆ ಬಿಸಿಸಿಐ ಆಯೋಜಿಸುವ ಸ್ಥಳೀಯ ಪಂದ್ಯಾವಳಿಗಳ ವೇಳೆ ಡೋಪಿಂಗ್ ಪರೀಕ್ಷೆ ನಡೆಸಲಾಗುತ್ತಿದೆ. ಆರೋಪಕ್ಕೆ ಗುರಿಯಾಗಿರುವ ಆಟಗಾರ ದೇಶಿ ಆಟಗಾರ ಎನ್ನಲಾಗಿದೆ.

‘ವಾಡಾದಿಂದ ಯಾವುದೇ ವರದಿ ನಮ್ಮ ಕೈಗೆ ಹಸ್ತಾಂತರಗೊಂಡಿಲ್ಲ. ಹಾಗಾಗಿ ಆರೋಪ ಕೇಳಿ ಬಂದಿರುವ ಆಟಗಾರನ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಬಿಸಿಸಿಐ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

click me!