
ಲಂಡನ್(ನ.02): ಒಲಂಪಿಕ್ಸ್ ಪದಕ ವಿಜೇತ ಲೂಯಿಸ್ ಸ್ಮಿತ್ ವಿರುದ್ಧ ಇಸ್ಲಾಂ ಧರ್ಮದ ಬಗ್ಗೆ ಅಪಹಾಸ್ಯ ಮಾಡಿದ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಬ್ರಿಟನ್ ಜಿಮ್ನಾಸ್ಟಿಕ್ಸ್ ಸಂಸ್ಥೆ, ಸ್ಮಿತ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. ಎರಡು ತಿಂಗಳ ಕಾಲ ನಿಷೇಧ ಹೇರಿದೆ.
ಕಳೆದ ತಿಂಗಳು ಹೊರಬಂದಿದ್ದ ವಿಡಿಯೋವೊಂದರಲ್ಲಿ 27 ವರ್ಷದ ಸ್ಮಿತ್, ಇಸ್ಮಾಂ ಧರ್ಮೀಯರಿಗೆ ನೋವಾಗುವಂತೆ ನಡೆದುಕೊಂಡಿದ್ದರು. ಮೊದಲು ನಮಾಜ್ ಮಾಡುವ ಸ್ಮಿತ್ ನಂತರ ಅಲ್ಲಾ - ಹೂ-ಅಕ್ಬರ್ ಅಂತಾ ಜೋರಾಗಿ ಕೂಗಿದ್ದರು.
ಸಹೋದ್ಯೋಗಿ ಲ್ಯೂಕ್ ಕಾರ್ಸನ್, ಸ್ಮಿತ್ ಹಿಂದೆ ನಿಂತು ತಮಾಷೆ ಮಾಡ್ತಿದ್ದರು. ಈ ವಿಡಿಯೋ ವೈರಲ್ ಆದ ನಂತರ ಸ್ಮಿತ್ ಈ ಬಗ್ಗೆ ಕ್ಷಮೆ ಕೂಡ ಕೇಳಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.