ಕಂಠೀರವ ಟ್ರ್ಯಾಕ್‌ ಅಳವಡಿಕೆ ಕಾರ‍್ಯದಲ್ಲಿ ಮತ್ತೊಂದು ಎಡವಟ್ಟು

By Kannadaprabha NewsFirst Published Jan 6, 2021, 4:51 PM IST
Highlights

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಂಥೆಟಿಕ್ ಟ್ರ್ಯಾಕ್‌ನ ಅಳವಡಿಕೆ ಕಾರ‍್ಯದಲ್ಲಿ ಕ್ರೀಡಾ ಇಲಾಖೆ ಮತ್ತೊಂದು ಎಡವಟ್ಟು ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಜ.06): ಕಂಠೀರವ ಕ್ರೀಡಾಂಗಣದಲ್ಲಿನ ಹೊಸ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆ ಕಾರ‍್ಯದಲ್ಲಿ ಕ್ರೀಡಾ ಇಲಾಖೆ ಮತ್ತೊಂದು ಎಡವಟ್ಟು ಮಾಡಿದೆ. ಟ್ರ್ಯಾಕ್‌ ಅಳವಡಿಕೆಗೆ ಈಗಾಗಲೇ ಚಾಲನೆ ದೊರೆತಿದೆ. 

ಕಳೆದ ಡಿಸೆಂಬರ್ 28 ರಿಂದ ಡಾಂಬರೀಕರಣ ನಡೆಸಲಾಗುತ್ತಿದ್ದು, 400 ಮೀ. ಟ್ರ್ಯಾಕ್‌ನಲ್ಲಿನ ಡಾಂಬರೀಕರಣ ಕಾರ‍್ಯ ಸಂಪೂರ್ಣ ಮುಗಿದಿದೆ. ಡಾಂಬರು ಹಾಕುವ ಮೊದಲೇ ಹ್ಯಾಮರ್‌ ಹಾಗೂ ಜಾವೆಲಿನ್‌ ಥ್ರೋಗಳ ಹಳೆಯ ಕೇಜ್‌ (ಪಂಜರ)ಗಳನ್ನು ತೆಗೆದು ಹೊಸ ಕೇಜ್‌ ಅಳವಡಿಸಿ ಎಂದು ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಕಾರ‍್ಯದರ್ಶಿ ರಾಜವೇಲು, ಕಳೆದ ಅಕ್ಟೋಬರ್‌ನಲ್ಲಿ ಕ್ರೀಡಾ ಇಲಾಖೆಗೆ ಮನವಿ ಮಾಡಿದ್ದರು. ಆದರೂ ಕೇಜ್‌ಗಳನ್ನು ತೆಗೆಯುವ ಕಾರ‍್ಯಕ್ಕೆ ಮುಂದಾಗದ ಇಲಾಖೆ ಡಾಂಬರೀಕರಣ ಮಾಡಿದೆ. 

ಕಂಠೀರವ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ ಕಾರ್ಯಕ್ಕೆ ಚಾಲನೆ

ಇದೀಗ ಕೆಲ ಕೋಚ್‌ಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಳಾದ ಕೇಜ್‌ಗಳನ್ನು ತೆಗೆದು ಹೊಸ ಕೇಜ್‌ಗಳನ್ನು ಹಾಕುವ ಕಾರ‍್ಯಕ್ಕೆ ಇಲಾಖೆ ಮುಂದಾಗಿದೆ. ಇದರಿಂದಾಗಿ ಟ್ರ್ಯಾಕ್‌ ಅಳವಡಿಕೆ ಕಾರ‍್ಯ ಮತ್ತಷ್ಟು ವಿಳಂಬವಾಗಲಿದೆ. ಈ ಹಿಂದೆ ಉತ್ತಮ ಗುಣಮಟ್ಟದ ಟ್ರ್ಯಾಕ್‌ ಅಳವಡಿಸುವ ಉದ್ದೇಶದಿಂದ ಸಿಂಥೆಟಿಕ್‌ ಸಾಮಗ್ರಿಯನ್ನು ಯುರೋಪ್‌ ಖಂಡದ 3 ರಾಷ್ಟ್ರಗಳಿಂದ ತರಿಸಲಾಗಿದೆ ಎಂದು ಹಿರಿಯ ಕ್ರೀಡಾ ಅಧಿಕಾರಿಯೊಬ್ಬರು ಹೇಳಿದ್ದರು. 

click me!