ಭಾರತದ ಗೆಲುವಿಗೆ 299 ರನ್ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ

By Web DeskFirst Published Jan 15, 2019, 12:46 PM IST
Highlights

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯ ಇದೀಗ ರೋಚಕ ಘಟ್ಟ ತಲುಪಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಬೃಹತ್ ಸವಾಲು ಬೆನ್ನಟ್ಟಬೇಕಾದ ಅನಿವಾರ್ಯತೆಯಲ್ಲಿದೆ. ಇಲ್ಲಿದೆ ಆಸ್ಟ್ರೇಲಿಯಾ ಬ್ಯಾಟಿಂಗ್ ಹಾಗೂ ಟೀಂ ಇಂಡಿಯಾ ಬೌಲಿಂಗ್ ಹೈಲೈಟ್ಸ್.

ಆಡಿಲೆಡ್(ಜ.15): ಭಾರತ ವಿರುದ್ದದ ದ್ವಿತೀಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಬ್ಬರಿಸಿದೆ. ನಿಗದಿತ 50 ಓವರ್‌ಗಳಲ್ಲಿ ಆಸಿಸ್ 9 ವಿಕೆಟ್ ನಷ್ಟಕ್ಕೆ 298 ರನ್ ಸಿಡಿಸಿದೆ. ಈ ಮೂಲಕ ಭಾರತದ ಗೆಲುವಿಗೆ 299 ರನ್ ಬೃಹತ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ಬೌಲರ್‌ಗಳು ಶಾಕ್ ನೀಡಿದ್ದಾರೆ. ಪ್ರಮುಖ 4 ವಿಕೆಟ್ ಕಳೆದುಕೊಂಡಿರುವ ಆಸಿಸ್ ತಂಡಕ್ಕೆ ಶಾನ್ ಮಾರ್ಶ್ ಆಸರೆಯಾದರು. ಮೊದಲ ಪಂದ್ಯದ ಗೆಲುವಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಆಸ್ಟ್ರೇಲಿಯಾ ದ್ವಿತೀಯ ಪಂದ್ಯದಲ್ಲಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಆ್ಯರೋನ್ ಫಿಂಚ್ ಕೇವಲ 6 ರನ್ ಸಿಡಿಸಿ ಔಟಾದರು. 

ಇದನ್ನೂ ಓದಿ: ಪಾಂಡ್ಯ,ರಾಹುಲ್‌ಗಿಂತ ದೊಡ್ಡ ತಪ್ಪು ಮಾಡಿದವ್ರು ಇನ್ನೂ ತಂಡದಲ್ಲಿದ್ದಾರೆ:ಶ್ರೀಶಾಂತ್!

ಅಲೆಕ್ಸ್ ಕ್ಯಾರಿ 18 ರನ್ ಸಿಡಿಸಿ ನಿರ್ಗಮಿಸಿದರು. ಅಬ್ಬರಿಸೋ ಸೂಚನೆ ನೀಡಿದ ಉಸ್ಮಾನ್ ಖವಾಜ 21 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಶಾನ್ ಮಾರ್ಶ್ ಹಾಗೂ ಪೀಟರ್‌ ಹ್ಯಾಂಡ್ಸ್‌ಕಾಂಬ್ ಜೊತೆಯಾಟದಿಂದ ಆಸಿಸ್ ಚೇತರಿಕೆ ಕಂಡಿತು. ಆದರೆ ಹ್ಯಾಂಡ್ಸ್‌ಕಾಂಬ್ 20 ರನ್ ಸಿಡಿಸಿ ಔಟಾದರು. ಅತ್ಯುತ್ತಮ ಪ್ರದರ್ಶನ ನೀಡಿದ ಶಾನ್ ಮಾರ್ಶ್ ಸೆಂಚುರಿ ಸಿಡಿಸಿ ಮಿಂಚಿದರು.

ಇದನ್ನೂ ಓದಿ:ಟೀಂ ಇಂಡಿಯಾಗೆ 33ರ ಸಂಕಷ್ಟ -ವಿಶ್ವಕಪ್ ಗೆಲುವು ಕಷ್ಟ ಕಷ್ಟ !

ಮಾರ್ಕಸ್ ಸ್ಟೊಯಿನ್ಸ್ 29 ರನ್ ಸಿಡಿಸಿದರೆ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್ 48 ರನ್ ಚಚ್ಚಿದರು. ಶಾನ್ ಮಾರ್ಶ್ 131 ರನ್ ಸಿಡಿಸಿ ಔಟಾದರು. ಜೇ ರಿಚರ್ಡ್ಸನ್ ಹಾಗೂ ಪೀಟರ್ ಸಿಡಲ್ ಅಬ್ಬರಿಸಲಿಲ್ಲ. ಹೀಗಾಗಿ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298 ರನ್ ಸಿಡಿಸಿದೆ. ಭಾರತದ ಪರ ಭುವನೇಶ್ವರ್ ಕುಮಾರ್ 4 ಹಾಗೂ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರು.

click me!